ಪ್ರಧಾನಿ ನಮೋ ಅಂಚೆ ಚೀಟಿ ಬಿಡುಗಡೆ
ಪಾಟ್ನಾ, ಮೇ 28 : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಲ್ಕು ವಿಭಿನ್ನ ಭಾವಚಿತ್ರಗಳನ್ನು ಒಳಗೊಂಡಿರುವ ಅಂಚೆ ಚೀಟಿಯ ಸೆಟ್ ಹಾಗೂ ವಿಶೇಷ ಲಕೋಟೆಯನ್ನು ಅಂಚೆ ಇಲಾಖೆಯ ಮುದ್ರಿಸಿ ಬಿಡುಗಡೆ ಮಾಡಿದೆ. ಬಿಹಾರದ ಅಂಚೆ ಚೀಟಿ ಸಂಗ್ರಹಕಾರ ಪ್ರದೀಪ್ ಜೈನ್ ಅವರು ಇದನ್ನು ವಿನ್ಯಾಸಗೊಳಿಸಿದ್ದಾರೆ.
ನರೇಂದ್ರ ಮೋದಿ ಅವರು ಪ್ರಧಾನಿಯಾಗುವ ಎತ್ತರಕ್ಕೆ ಏರಿರುವ ಸಾಧನೆಯನ್ನು ವಿಶ್ವವೇ ಕುತೂಹಲದಿಂದ ಗಮನಿಸಿದ್ದು ಭಾರತೀಯ ಪ್ರಜಾಸತ್ತೆಯ ಇತಿಹಾಸದಲ್ಲಿ ಇದೊಂದು ಅತ್ಯಂತ ವಿಶಿಷ್ಟವಾದ ವಿದ್ಯಮಾನವಾಗಿದೆ. ಆದ್ದರಿಂದ ನಾನು ನನ್ನದೇ ಪರಿಕಲ್ಪನೆಯಲ್ಲಿ ಮೋದಿ ಅಂಚೆ ಚೀಟಿಯನ್ನು ವಿನ್ಯಾಸಗೊಳಿಸಿದ್ದೇನೆ ಎಂದು ಪ್ರದೀಪ್ ಜೈನ್ ಹೇಳಿದ್ದಾರೆ.

ತಲಾ 5 ರೂ. ಮುಖಬೆಲೆಯ ಈ ಅಂಚೆ ಚೀಟಿಯನ್ನು ಅಂಚೆ ಇಲಾಖೆ ಮುದ್ರಿಸಿ, ಬಿಡುಗಡೆ ಮಾಡಿದೆ. ಪೂರ್ಣ ಅರಳಿದ ಕಮಲದಲ್ಲಿ ಮಂದಹಾಸ ಬೀರುವ ಮೊಗದೊಂದಿಗೆ ಮೋದಿ ಅಂಚೆ ಚೀಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಅಂಚೆ ಚೀಟಿಗೆ "ದ ಪವರ್ ಆಫ್ ನಮೋ' ಎಂಬ ಶೀರ್ಷಿಕೆಯನ್ನು ಕೊಡಲಾಗಿದೆ. ಈ ಅಂಚೆ ಚೀಟಿಯೊಂದಿಗೆ ವಿಶೇಷ ಲಕೋಟೆಯನ್ನು ಅಂಚೆ ಇಲಾಖೆಯು ಮುದ್ರಿಸಿ ಬಿಡುಗಡೆ ಮಾಡಿದೆ. [ಪ್ರಧಾನಿಯಾಗಿ ಮೋದಿ ಮೊದಲ ದಿನದ ರೌಂಡಪ್]
ನರೇಂದ್ರ ಮೋದಿ ಲೋಕಸಭೆ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾಗ ಅವರ ಹೆಸರಿನ ಟೀ ಶರ್ಟ್, ಕಾಫಿ ಕಪ್, ಕುರ್ತಾ ಮುಂತಾದ ವಸ್ತುಗಳು ಭಾರೀ ಜನಪ್ರಿಯತೆ ಪಡೆದಿದ್ದವು. ಸದ್ಯ ಅವರು ಪ್ರಧಾನಿಯಾದ ಬಳಿಕ ಅವರ ಹೆಸರಿನ ಅಂಚೆ ಚೀಟಿ ಮಾರುಕಟ್ಟೆಗೆ ಬಂದಿದೆ.











Click it and Unblock the Notifications