Get Updates
Get notified of breaking news, exclusive insights, and must-see stories!

ಡಿಜಿಟಲೀಕರಣ: ಮೋದಿ ಸರ್ಕಾರದ ಬಹುದೊಡ್ಡ ಕೊಡುಗೆ

ನವದೆಹಲಿ, ಅಕ್ಟೋಬರ್ 20: 2014 ರ ಲೋಕಸಭಾ ಚುನಾವಣೆಗೂ ಮುನ್ನ ನೀಡಿದ ಭರವಸೆಗಳನ್ನು ಈಡೇರಿಸಲು ಇದುವರೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಹಲವು ಜನೋಪಯೋಗಿ ಯೋಜನೆಗಳನ್ನು ಜಾರಿಗೊಳಿಸಿದೆ.

ಪ್ರಧಾನ ಮಂತ್ರಿ ಜನಧನ ಯೋಜನೆ, ಉಜ್ವಲ ಯೋಜನೆ ಯಾವುದೇ ಇದ್ದಿರಬಹುದು, ಅವನ್ನು ಯಶಸ್ವಿಯಾಗಿ ಜನರಿಗೆ ತಲುಪಿಸಲು ಸೋಶಿಯಲ್ ಮೀಡಿಯಾವನ್ನು ಸರ್ಕಾರ ಸಮಸರ್ಥವಾಗಿ ಬಳಸಿಕೊಂಡಿದೆ.

Narendra Modi govt schemes ushering India into new age

ರೈಲ್ವೇ ನಿಲ್ದಾಣಗಳಲ್ಲಿ ವೈಫೈಯ ಸೌಲಭ್ಯ, ಹಲವು ಮೊಬೈಲ್ app ಗಳ ಮೂಲಕ ಸರ್ಕಾರದ ಯೋಜನೆ ಜನರಿಗೆ ತಲುಪುವಂತೆ ಮಾಡಿ, ಹೊಸ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿದೆ.

Narendra Modi govt schemes ushering India into new age

ಭಾರತೀಯ ರೈಲ್ವೇಯು 700 ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ವೈಫೈ ಸೇವೆಯನ್ನು ನೀಡುತ್ತಿದೆ. ಇದರ ಉಪಯೋಗವನ್ನು ತಿಂಗಳಿಗೆ ಸುಮಾರು 8 ಮಿಲಿಯನ್ ಜನರು ತೆಗೆದುಕೊಳ್ಳುತ್ತಿದ್ದಾರೆ. ಗೂಗಲ್ ಜೊತೆಗಿನ ಸಹಭಾಗಿತ್ವದೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.

Narendra Modi govt schemes ushering India into new age

ದೇಶದಲ್ಲಿ ಕಪ್ಪು ಹಣದ ಹರಿವನ್ನು ತಪ್ಪಿಸುವ ಸಲುವಾಗಿ ಹಣ ಪಾವತಿ ವಿಧಾನದಲ್ಲೇ ಹಲವು ಬದಲಾವಣೆಗಳನ್ನು ತರಲಾಗಿದೆ. ಡಿಜಿಟಲ್ ವ್ಯವಹಾರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸರ್ಕಾರದ ಈ ಎಲ್ಲಾ ಯೋಜನೆಗಳಿಂದ ಆಧುನಿಕ ತಂತ್ರಜ್ಞಾನವನ್ನು ಜನಸಾಮಾನ್ಯರೂ ಬಳಸಿಕೊಳ್ಳುವಂತಾಗಿರುವುದು ಶ್ಲಾಘನೀಯ.

Narendra Modi govt schemes ushering India into new age

ಜನರು ಅಗತ್ಯ ದಾಖಲೆಗಳ ಪ್ರತಿಯನ್ನು ಕಾಗದದ ಅಥವಾ ಸ್ಮಾರ್ಟ್ ಕಾರ್ಡ್ ಮೂಲಕ ಸಂಗ್ರಹಿಸುವುದಕ್ಕಿಂತ ಹೊಸ ಕಾಲಕ್ಕೆ ತಕ್ಕಂತೆ ಡಿಜಿಟಲ್ ರೂಪದಲ್ಲಿ ಕಾಯ್ದಿರಿಸಲು ಡಿಜಿ ಲಾಕ್ app ಅನ್ನು ಪರಿಚಯಿಸಿದೆ.

Narendra Modi govt schemes ushering India into new age

ಉಮಾಂಗ್(Unified Mobile Application for New-age Governance) ಎಂಬ ಮೊಬೈಲ್ app ಸರ್ಕಾರದ ಹಲವು ಯೋಜನೆಗಳ ಉಪಯೋಗವನ್ನು ಮೊಬೈಲ್ app ಮೂಲಕ ನೀಡುತ್ತಿದೆ. ಗ್ಯಾಸ್ ಬುಕಿಂಗ್, ಬೆಳೆ ವಿಮೆ, ಇಪಿಎಫ್, ಪಿಂಚಣಿ ಸೇರಿದಂತೆ ಹಲವು ಯೋಜನೆಗಳ ಉಪಯೋಗವನ್ನು ಇಲ್ಲಿ ಪಡೆಯಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+