ಮೋದಿ ಪ್ರವಾಸ ಆರಂಭ: ರ್ವಾಂಡಾ ದೇಶಕ್ಕೆ ಭಾರತದ 200 ಹಸುಗಳ ಕಾಣಿಕೆ

ನವದೆಹಲಿ, ಜುಲೈ 23: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಐದು ದಿನಗಳ ಆಫ್ರಿಕಾ ದೇಶಗಳ ಪ್ರವಾಸ ಆರಂಭಿಸಿದ್ದಾರೆ.

ಅವರು ಮೊದಲು ದೆಹಲಿಗಿಂತಲೂ ಕಡಿಮೆ ಜನಸಂಖ್ಯೆ ಹೊಂದಿರುವ ರ್ವಾಂಡಾ ದೇಶಕ್ಕೆ ಭೇಟಿ ನೀಡಲಿದ್ದಾರೆ. ಈ ದೇಶಕ್ಕೆ ಭೇಟಿ ನೀಡಲಿರುವ ಭಾರತದ ಮೊದಲ ಪ್ರಧಾನಿ ಎನಿಸಿಕೊಳ್ಳಲಿದ್ದಾರೆ. ಬಳಿಕ ಉಗಾಂಡ ಮತ್ತು ದಕ್ಷಿಣ ಆಫ್ರಿಕಾಗಳಿಗೆ ತೆರಳಲಿದ್ದಾರೆ.

ಬಡ ರ್ವಾಂಡಾದ ಗ್ರಾಮವೊಂದಕ್ಕೆ ಗಿರಿಂಕಾ ಯೋಜನೆಯಡಿ 200 ಗೋವುಗಳನ್ನು ಕಾಣಿಕೆಯಾಗಿ ನೀಡಲಾಗುತ್ತಿದೆ. ಈ ಯೋಜನೆಯಲ್ಲಿ ಒಂದು ಬಡ ಕುಟುಂಬಕ್ಕೆ ಒಂದು ಹಸುವನ್ನು ನೀಡಲಾಗುತ್ತದೆ.

ಈ ಹಸುವಿನಿಂದ ಜನಿಸಿದ ಮೊದಲ ಹೆಣ್ಣು ಕರುವನ್ನು ನೆರೆಮನೆಯವರಿಗೆ ಉಡುಗೊರೆಯಾಗಿ ನೀಡಬೇಕು. ಇದರಿಂದ ಜೀವನೋಪಾಯಕ್ಕೆ ನೆರವಾಗುತ್ತದೆ ಎನ್ನುವುದು ರ್ವಾಮಡಾ ಗಿರಿಂಕಾ ಯೋಜನೆಯ ನಿಯಮವಾಗಿದೆ.

narendra modi five days visits to rwanda, uganda and south africa

ಭಾರತದ ಸಂಸತ್‌ನಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡುವ ಕುರಿತು ಚರ್ಚೆ ನಡೆಯುತ್ತಿದೆ. ಆದರೆ, ರ್ವಾಂಡಾದಂತಹ ದೇಶದಲ್ಲಿ ಮೂರನೇ ಎರಡಷ್ಟು ಸಂಸತ್ ಸದಸ್ಯರು ಮಹಿಳೆಯರೇ ಆಗಿದ್ದಾರೆ.

ರ್ವಾಂಡಾದಲ್ಲಿ ಮೋದಿ ಅವರು ಸ್ವಾಗತ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ರ್ವಾಂಡಾ ಅಧ್ಯಕ್ಷರೊಂದಿಗೆ ಮುಖಾಮುಖಿ ಹಾಗೂ ನಿಯೋಗ ಮಟ್ಟದ ಮಾತುಕತೆ ನಡೆಸಲಿದ್ದಾರೆ.

ರ್ವಾಂಡಾದೊಂದಿಗೆ ಕೆಲವು ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. ಇದರ ನಂತರ ರ್ವಾಂಡಾ ಅಧ್ಯಕ್ಷರು ಆಯೋಜಿಸುವ ಔತಣಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮೋದಿ ಅವರು ಮಂಗಳವಾರ ರ್ವಾಂಡಾದ ಹತ್ಯಾಕಾಂಡ ಸ್ಮಾರಕಕ್ಕೆ ಭೇಟಿ ನೀಡಲಿದ್ದು, ನಂತರ ಗಿರಿಂಕಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+