ಸಿಎಂ ಆಗಲಿರುವ ನವೀನ್, ಜಗನ್ ಗೆ ಮೋದಿ ಅಭಿನಂದನೆ
ನವದೆಹಲಿ, ಮೇ 23: ಗೆಲುವಿನ ಅಲೆಯಲ್ಲಿ ತೇಲುತ್ತಿರುವ ನರೇಂದ್ರ ಮೋದಿ ಅವರು, ಆಂಧ್ರ ಪ್ರದೇಶ ಮತ್ತು ಒಡಿಶಾದ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಜಗನ್‌ಮೋಹನ್ ರೆಡ್ಡಿ ಮತ್ತು ನವೀನ್ ಪಟ್ನಾಯಕ್ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.
ಒಡಿಶಾದಲ್ಲಿ ನವೀನ್ ಪಟ್ನಾಯಕ್ ಅವರ ಬಿಜೆಡಿ ಪಕ್ಷವು 170ರಲ್ಲಿ 103 ಸ್ಥಾನಗಳನ್ನು ಗಳಿಸಿ ಜಯಭೇರಿ ಬಾರಿಸಿದೆ. ನವೀನ್ ಪಟ್ನಾಯಕ್ ಅವರು ಮತ್ತೊಮ್ಮೆ ಸಿಎಂ ಆಗುವುದು ಬಹುತೇಕ ಖಚಿತವಾಗಿದೆ.

ಆಂಧ್ರ ಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ಅವರ ವೈಎಸ್‌ಆರ್‌ಸಿಪಿ ಪಕ್ಷವು 175 ಕ್ಷೇತ್ರಗಳಲ್ಲಿ 144 ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ಭಾರಿ ಜಯಗಳಿಸಿದೆ. ಅವರೂ ಸಹ ಸಿಎಂ ಆಂಧ್ರಪ್ರದೇಶದ ಸಿಎಂ ಆಗಲಿದ್ದಾರೆ.
Dear @ysjagan,
— Chowkidar Narendra Modi (@narendramodi) May 23, 2019
Congratulations on the remarkable win in Andhra Pradesh. Best wishes to you for a successful tenure.
ప్రియమైన @ysjagan, ఆంధ్ర ప్రదేశ్ లో ఘన విజయాన్ని సాధించినందుకు అభినందనలు. మీ పదవీ కాలం విజయవంతం కావాలని ఆకాంక్షిస్తున్నాను. మీకు ఇవే శుభాకాంక్షలు.
ಇವರಿಬ್ಬರಿಗೂ ಪ್ರಧಾನಿ ಮೋದಿ ಅವರು ಟ್ವಿಟ್ಟರ್‌ನಲ್ಲಿ ಶುಭಾಶಯ ಹೇಳಿದ್ದು, ಇಬ್ಬರಿಗೂ ಅವರ ಪ್ರಾದೇಶಿಕ ಭಾಷೆಯಲ್ಲಿ ಟ್ವೀಟ್ ಮಾಡಿ ಶುಭಾಶಯ ಕೋರಿದ್ದಾರೆ.
Congratulations to Naveen Babu for yet another victory in Odisha. Wishing
— Chowkidar Narendra Modi (@narendramodi) May 23, 2019
him the very best for the next term.
ଓଡିଶାରେ ପୁଣିଥରେ ବିଜୟ ପାଇଁ ନବୀନ ବାବୁଙ୍କୁ ଅଭିନନ୍ଦନ । ଆଗାମୀ ଶାସନକାଳ ପାଇଁ ତାଙ୍କୁ ଅଜସ୍ର ଶୁଭେଛା । @Naveen_Odisha
ಈ ಇಬ್ಬರೂ ನಾಯಕರು ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಎನ್‌ಡಿಎಗೆ ಭಾಗವಾಗುವ ನಿರೀಕ್ಷೆ ಇತ್ತು. ಆದರೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಏಕಾಂಗಿಯಾಗಿಯೇ ಬಹುಮತ ಗಳಿಸಿದೆ. ಈಗ ಈ ನಾಯಕರು ಎನ್‌ಡಿಎಯ ಭಾಗವಾಗುತ್ತಾರಾ ಇಲ್ಲವಾ ಕಾದು ನೋಡಬೇಕಿದೆ.












Click it and Unblock the Notifications