'ನಮೋ ಟಿವಿ' ಹಿಂದಿ ಸುದ್ದಿ ವಾಹಿನಿ ಅಲ್ಲ: ಟಾಟಾ ಸ್ಕೈ ಸ್ಪಷ್ಟನೆ
ನವದೆಹಲಿ, ಏಪ್ರಿಲ್ 4: ತೀವ್ರ ವಿವಾದ ಸೃಷ್ಟಿಸಿರುವ 'ನಮೋ ಟಿವಿ' ಕುರಿತಂತೆ ಡಿಟಿಎಚ್ ಸೇವಾದಾರ ಸಂಸ್ಥೆ ಟಾಟಾ ಸ್ಕೈ ಸ್ಪಷ್ಟೀಕರಣ ನೀಡಿದೆ.
'ನಮೋ ಟಿವಿ' ಹಿಂದಿ ಸುದ್ದಿ ವಾಹಿನಿ ಅಲ್ಲ. ಅದು ಅಂತರ್ಜಾಲದ ಮೂಲಕ ನೀಡುವ ವಿಶೇಷ ಸೇವೆಯಾಗಿದ್ದು, ಅದಕ್ಕೆ ಸರ್ಕಾರದ ಪರವಾನಗಿಯ ಅಗತ್ಯವಿಲ್ಲ ಎಂದು ವಿವರಣೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಗಳು ಮತ್ತು ಬಿಜೆಪಿ ಪರ ವಿಚಾರಗಳನ್ನು ಬಿಂಬಿಸಲೆಂದೇ ಇರುವ ಚಾನೆಲ್ ಅನ್ನು ಪ್ರಸಾರ ಮಾಡುತ್ತಿರುವ ಟಾಟಾ ಸ್ಕೈ, ಅದರ ಬಗ್ಗೆ ಮಾಡಿದ್ದ ಟ್ವೀಟ್ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
Channel no 512 is NAMO TV, it is a Hindi news service which provides the latest breaking news on national politics 'udra
— Tata Sky (@TataSky) 28 March 2019
'ನಮೋ ಟಿವಿ ಹಿಂದಿ ಸುದ್ದಿ ವಾಹನಿಯಾಗಿದ್ದು, ರಾಷ್ಟ್ರ ರಾಜಕಾರಣಕ್ಕೆ ಸಂಬಂಧಿಸಿದ ಇತ್ತೀಚಿನ ಬ್ರೇಕಿಂಗ್ ನ್ಯೂಸ್‌ಗಳನ್ನು ಒದಗಿಸುತ್ತದೆ' ಎಂದು ಟಾಟಾ ಸ್ಕೈ ಈ ಮೊದಲು ಟ್ವೀಟ್ ಮಾಡಿತ್ತು.
ಬಳಿಕ ಸ್ಪಷ್ಟೀಕರಣ ನೀಡಿರುವ ಟಾಟಾ ಸ್ಕೈ ಸಿಇಒ ಹರಿತ್ ನಾಗಪಾಲ್, 'ನಮೋ ಟಿವಿ ಹಿಂದಿ ಸುದ್ದಿ ವಾಹಿನಿಯಲ್ಲ. ಟಾಟಾ ಸ್ಕೈನಲ್ಲಿ ಮುಂಚೂಣಿಯಲ್ಲಿರುವ ಯಾರಾದರೂ ಅದನ್ನು ಸುದ್ದಿ ವಾಹಿನಿಯೆಂದು ಟ್ವೀಟ್ ಮಾಡಿದ್ದರೆ ಅದು ತಪ್ಪು. ನಮೋ ಟಿವಿ ಯಾವುದೇ ಪ್ರಕಾರಕ್ಕೆ ಸೇರಿಲ್ಲ. ಅದು ಬಿಜೆಪಿಯಿಂದ ಅಂತರ್ಜಾಲದ ಮೂಲಕ ಬರುತ್ತಿದೆ' ಎಂದು ತಿಳಿಸಿದ್ದಾರೆ.

ವಿಶೇಷ ಸೇವೆಗಳಿಗೆ ಯಾವುದೇ ಪರವಾನಗಿಯ ಅಗತ್ಯವಿರುವುದಿಲ್ಲ ಎಂದು ಅವರು ವಿವರಿಸಿದ್ದಾರೆ.
The day we were most looking forward to is here!
— Chowkidar Narendra Modi (@narendramodi) 31 March 2019
At 5 PM, lakhs of Chowkidars from different parts of India will interact in the historic #MainBhiChowkidar programme.
This is an interaction you must not miss.
Watch it live on the NaMoApp or NaMo TV. pic.twitter.com/XXKkLUuE7X
ನಮೋ ಟಿವಿಯನ್ನು ಪ್ರಚಾರ ಮಾಡುವ ಸಲುವಾಗಿ ಬಿಜೆಪಿ ಬಳಸುತ್ತಿದೆ. ಇದು ನೀತಿ ಸಂಹಿತೆ ಉಲ್ಲಂಘನೆ ಎಂದು ವಿರೋಧಪಕ್ಷಗಳು ಆರೋಪಿಸಿದ್ದವು. ಹೀಗಾಗಿ ಈ ಬಗ್ಗೆ ವರದಿ ನೀಡುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಚುನಾವಣಾ ಆಯೋಗ ಕೇಳಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications