Rapid Railway: ಕರ್ನಾಟಕದ ಅಂತರ್ ನಗರಗಳ ಮಧ್ಯೆ ಗೇಮ್‌ಚೇಂಜರ್ ರೈಲು ಸೇವೆ

ಬೆಂಗಳೂರು, ಅಕ್ಟೋಬರ್ 18: ಭಾರತ ಸರ್ಕಾರ ಹೊಸ ಹೊಸ ಮತ್ತು ಐಶಾರಾಮಿ ಹಾಗೂ ವೇಗ ರೈಲುಗಳನ್ನು ಪರಿಚಯಿಸುವ ಮೂಲಕ ದೇಶದ ರೈಲ್ವೆ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರುತ್ತಿದೆ. ಅದೇ ರೀತಿ ಇತ್ತೀಚೆಗೆ 'ನಮೋ ಭಾರತ್ ರಾಪಿಡ್ ರೈಲ್' (Namo Bharat Rapid Rail) ಅನ್ನು ಯಶಸ್ವಿಯಾಗಿ ಕಾರ್ಯಾಚರಣೆಗೆ ತರಲಾಗಿದೆ. ಈ ರೈಲು ಮುಂದಿನ ದಿನಗಳಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳನ್ನು ಮತ್ತಷ್ಟು ಹತ್ತಿರವಾಗಿಸಲಿದೆ ಎಂಬ ಸಿಹಿ ಸುದ್ದಿ ಬಹಿರಂಗಗೊಂಡಿದೆ.

ಹೌದು, 'ನಮೋ ಭಾರತ್ ರಾಪಿಡ್ ರೈಲು' ಇದೊಂದು ಹೊಸದಾದ ಅರೆ-ಹೈ-ಸ್ಪೀಡ್ ರೈಲುಗಳ ಪಟ್ಟಿಗೆ ಸೇರಿದೆ. ದೇಶದ ಪ್ರಮುಖ ನಗರಗಳು ಅಂದರೆ, 100-250 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕಡಿಮೆ ದೂರದಲ್ಲಿರುವ ಎರಡು ನಗರಗಳ ಮಧ್ಯೆ ಸಂಚರಿಸುತ್ತದೆ. ಇದೊಂದು ಮೇಕ್ ಇನ್ ಇಂಡಿಯಾದ ಭಾಗವೇ ಆಗಿದೆ.

Namo Bharat Rapid Rail Service will Begin In Karnataka Intercity See Updates

ಬೆಂಗಳೂರಲ್ಲಿ ಈ ರೈಲು ಸೇವೆ ಆರಂಭ ಶೀಘ್ರ

ಇದೇ ವರ್ಷ 2024 ರ ಏಪ್ರಿಲ್ ತಿಂಗಳಲ್ಲಿ ಕಪುರ್ತಲಾದಲ್ಲಿರುವ ರೈಲ್ ಕೋಚ್ ಫ್ಯಾಕ್ಟರಿ (ಆರ್‌ಸಿಎಫ್) ನಮೋ ಭಾರತ್ ರಾಪಿಡ್ ರೈಲಿನ ಮೊದಲ ಮೂಲ ಘಟಕ ಆರಂಭಿಸಿದೆ. ಅಲ್ಲದೇ ಸೆಪ್ಟೆಂಬರ್ ತಿಂಗಳಲ್ಲಿ ಅಹಮದಾಬಾದ್-ಭುಜ್ ಎರಡು ನಗರಗಳ ಮಧ್ಯೆ ಕಳೆದ ಸೆಪ್ಟಂಬರ್ 16ರಂದು 'ನಮೋ ಭಾರತ್ ರಾಪಿಡ್' ರೈಲು' ವಾಣಿಜ್ಯ ಕಾರ್ಯಾಚರಣೆ ಆರಂಭಿಸಿದೆ. ಈ ನೂತನ ಸೇವೆಯು ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಶೀಘ್ರವೇ ಪ್ರಾರಂಭವಾಗಲಿದೆ ಎಂದು ಕೇಂದ್ರ ರೈಲ್ವೆ ಇಲಾಖೆ ತಿಳಿಸಿದೆ.

ರೈಲ್ ಕೋಚ್ ಫ್ಯಾಕ್ಟರಿ (ಆರ್‌ಸಿಎಫ್)ಭವಿಷ್ಯದಲ್ಲಿ ಈ 'ನಮೋ ಭಾರತ್ ರಾಪಿಡ್' ರೈಲನ್ನು ಬೆಂಗಳೂರಿನಲ್ಲಿ ಅರಂಭಿಸಲಿದೆ. ಬೆಂಗಳೂರಿನಿಂದ ತುಮಕೂರು, ಮೈಸೂರು ನಗರಗಳಿಗೆ ಈ ರೈಲು ಸೇವೆ ನೀಡುವಂತೆ ಮಾಡಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಇದಿಷ್ಟು ಮಾತ್ರವಲ್ಲದೇ ಇತರ ನಗರಗಳನ್ನು ಹತ್ತಿರವಾಗಿಸಲಿದೆ. ಇದರಿಂದ ಸ್ಥಳೀಯ ಉತ್ಪಾದನೆ, ಹೊಸ ಸಾರಿಗೆ ಸೇವೆ ನೀಡುವ ಗುರಿ ಕೇಂದ್ರ ಸರ್ಕಾರದ್ದಾಗಿದೆ.

ಮೆಮು ರೈಲುಗಳ ಸ್ಥಾನ ತುಂಬಲಿವೆ

ನೋಡಲು ವಂದೇ ಭಾರತ್ ರೀತಿ ಕಾಣುವು ಈ ನೂತನ ನಮೋ ಭಾರತ್ ರೈಲುಗಳು ಸ್ವಯಂ ಚಾಲಿತ ರೈಲುಗಳಾಗಿವೆ. ಈಗಾಗಲೇ ದಶಕಗಳಿಂದ ಬಳಕೆ ಆಗುತ್ತಿರುವ, ನಗರಗಳ ಮಧ್ಯೆ ಸಂಪರ್ಕ ಸೇತುವೆಯಾಗಿರುವ MEMU ರೈಲುಗಳ ಸ್ಥಾನವನ್ನು ಈ ರ್ಯಾಪಿಡ್ ರೈಲುಗಳು ತುಂಬಲಿವೆ.

ರೈಲು ಪ್ರಯಾಣಿಕರಿಗೆ ವೇಗ ಮತ್ತು ಅತ್ಯುತ್ತಮ ಪ್ರಯಾಣದ ಅನುಭವ ನೀಡುತ್ತವೆ. ಎರಡು ನಗರಗಳ ಮಧ್ಯೆ ಎಕ್ಸ್‌ಪ್ರೆಸ್‌ ವೇಗೆ ಹೇಗೆ ಸಂಚಾರ ಸಮಯ ಉಳಿಸುತ್ತದೆಯೋ ಅದೇ ರೀತಿ ಈ ರಾಪಿಡ್ ರೈಲು ಮಾಡಲಿದೆ. ಪ್ರಯಾಣದ ಅವಧಿ ಉಳಿಸಲಿದೆ. ಇಂತಹ ರೈಲುಗಳನ್ನು ಕರ್ನಾಟಕದ ದಕ್ಷಿಣ ಭಾಗದಲ್ಲಿ ಆರಂಭಿಸಲಾಗುವುದು ಎಂದು ಇತ್ತೀಚೆಗೆ ಅಶ್ವಿನಿ ವೈಷ್ಣವ್ ತಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+