
ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ನಾಗಪುರ ಮೆಟ್ರೋ ಸೇರ್ಪಡೆ
ನಾಗಪುರ, ಡಿಸೆಂಬರ್ 6: ಮಹಾರಾಷ್ಟ್ರದ ನಾಗ್ಪುರ ಮೆಟ್ರೋ ವಾರ್ಧಾ ರಸ್ತೆಯಲ್ಲಿ 3.14 ಕಿಮೀ ಉದ್ದದ ಡಬಲ್ ಡೆಕ್ಕರ್ ವಯಡಕ್ಟ್ ಮೆಟ್ರೋವನ್ನು ರಚಿಸಿದಕ್ಕಾಗಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ.
ಬೆಂಗಳೂರಿಗರ ಪ್ರಯಾಣ ಸುಲಭಗೊಳಿಸಲಿರುವ ಈ ನಾಲ್ಕು ಮೆಟ್ರೋ ಮಾರ್ಗಗಳ ಬಗ್ಗೆ ತಿಳಿಯಿರಿ
ಮಂಗಳವಾರ ನಾಗ್ಪುರದ ಮೆಟ್ರೋ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮೆಟ್ರೋ ಎಂಡಿ ಬ್ರಿಜೇಶ್ ದೀಕ್ಷಿತ್ ಅವರು ಗಿನ್ನೆಸ್ ವಿಶ್ವ ದಾಖಲೆಯ ತೀರ್ಪುಗಾರ ರಿಷಿ ನಾಥ್ ಅವರಿಂದ ಸಾಧನೆಗಾಗಿ ಪ್ರಮಾಣಪತ್ರವನ್ನು ಸ್ವೀಕರಿಸಿದರು. ಡಬಲ್ ಡೆಕ್ಕರ್ ವಯಾಡಕ್ಟ್ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಕ್ರಮವಾಗಿ ಈಗಾಗಲೇ ಏಷ್ಯಾ ಮತ್ತು ಭಾರತದಲ್ಲೇ ಅತಿ ಉದ್ದದ ರಚನೆ ಎಂದು ಪ್ರಮಾಣೀಕರಿಸಲ್ಪಟ್ಟಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಬ್ರಿಜೇಶ್ ದೀಕ್ಷಿತ್, ವಾರ್ಧಾ ರಸ್ತೆಯಲ್ಲಿ ಯೋಜನೆ ಕಾರ್ಯಗತಗೊಳಿಸುವುದು ದೊಡ್ಡ ಸವಾಲಾಗಿತ್ತು. ಇದು ಮೂರು ಹಂತದ ರಚನೆಯ ಭಾಗವಾಗಿದೆ. ಅಂದರೆ ಮೇಲೆ ಮೆಟ್ರೋ ರೈಲು, ಮಧ್ಯದಲ್ಲಿ ಹೆದ್ದಾರಿ ಮೇಲ್ಸೇತುವೆ ಮತ್ತು ನೆಲದ ಮಟ್ಟದಲ್ಲಿ ಅಸ್ತಿತ್ವದಲ್ಲಿರುವ ರಸ್ತೆ ಇರುತ್ತದೆ.

ನಾಗ್ಪುರ ಮೆಟ್ರೋ ಸಂಸ್ಥೆಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಪ್ರತಿಷ್ಠಿತ ಸ್ಥಾನವನ್ನು ಸಾಧಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಅಧಿಕೃತ ಪ್ರಕಟಣೆಯ ಪ್ರಕಾರ, 3.14 ಕಿಮೀ ಅಳತೆಯ ಡಬ್ಬಲ್ ಡೆಕ್ಕರ್ ವಯಡಕ್ಟ್ ವಿಶ್ವದ ಮೆಟ್ರೋ ರೈಲು ವ್ಯವಸ್ಥೆಯಲ್ಲಿ ಅತಿ ಉದ್ದದ ರಚನೆಯಾಗಿದೆ. ಇದು ಮೂರು ನಿಲ್ದಾಣಗಳನ್ನು ಹೊಂದಿದೆ. ಮಹಾ ಮೆಟ್ರೋ ಈ ಹಿಂದೆ ಏಷ್ಯಾ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗಳನ್ನು ಅತಿ ಉದ್ದದ ಡಬಲ್ ಡೆಕ್ಕರ್ ವೇಡಕ್ಟ್‌ಗಾಗಿ ಮಾತ್ರವಲ್ಲದೆ, ಡಬಲ್ ಡೆಕ್ಕರ್ ವೇಡಕ್ಟ್‌ನಲ್ಲಿ ನಿರ್ಮಿಸಲಾದ ಗರಿಷ್ಠ ಮೆಟ್ರೋ ನಿಲ್ದಾಣಗಳಿಗೂ ಸಹ ಪ್ರವೇಶಿಸಿದೆ ಎಂದು ಅದು ಹೇಳಿದೆ.