ಶನಿವಾರ 3 ರಾಜ್ಯಗಳ ಚುನಾವಣಾ ಫಲಿತಾಂಶ, ಬಿಜೆಪಿಯತ್ತ ಎಲ್ಲರ ಚಿತ್ತ
ಶಿಲ್ಲಾಂಗ್/ಅಗರ್ತಲಾ/ಕೊಹಿಮಾ, ಮಾರ್ಚ್ 2: ಈಶಾನ್ಯ ಭಾರತದ ರಾಜ್ಯಗಳಾದ ಮೇಘಾಲಯ, ನಾಗಾಲ್ಯಾಂಡ್ ಮತ್ತು ತ್ರಿಪುರಾ ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಶನಿವಾರ ಹೊರ ಬೀಳಲಿದೆ.
ಮೂರು ರಾಜ್ಯಗಳಲ್ಲಿ ತಲಾ 60 ವಿಧಾನಸಭೆ ಸ್ಥಾನಗಳಿದ್ದು ಬೇರೆ ಬೇರೆ ಕಾರಣಗಳಿಗೆ ಮೂರೂ ರಾಜ್ಯಗಳಲ್ಲಿ 59 ಕ್ಷೇತ್ರಗಳಿಗೆ ಮಾತ್ರ ಫೆಬ್ರವರಿ ತಿಂಗಳ ಬೇರೆ ಬೇರೆ ದಿನಗಳಂದು ಚುನಾವಣೆ ನಡೆದಿತ್ತು. ಹೀಗಾಗಿ 59 ಕ್ಷೇತ್ರಗಳ ಫಲಿತಾಂಶ ಶನಿವಾರ ತಿಳಿದು ಬರಲಿದೆ.
ಮೂರು ರಾಜ್ಯಗಳಲ್ಲಿ ಬಿಜೆಪಿ ಅಗ್ನಿ ಪರೀಕ್ಷೆಗೆ ಇಳಿದಿದ್ದು, ಕೇಸರಿ ಪಕ್ಷದ ಸೋಲು-ಗೆಲುವಿನ ಬಗ್ಗೆ ಕುತೂಹಲ ನೆಟ್ಟಿದೆ. ವಿಶೇಷವೆಂದರೆ ಈ ಯಾವ ರಾಜ್ಯಗಳಲ್ಲೂ ಬಿಜೆಪಿಗೆ ಭದ್ರ ನೆಲೆ ಇಲ್ಲ.

ಸವಾಲು ಒಡ್ಡಿದೆ ಬಿಜೆಪಿ
ಕಳೆದ 25 ವರ್ಷಗಳಿಂದ ತ್ರಿಪುರಾದಲ್ಲಿ ಸಿಪಿಐಎಂ ಆಡಳಿತವಿದ್ದರೆ, ಮೇಘಾಲಯವನ್ನು ಕಳೆದ 10 ವರ್ಷಗಳಿಂದ ಕಾಂಗ್ರೆಸ್ ಆಳುತ್ತಿದೆ. ಇನ್ನು ನಾಗಾಲ್ಯಾಂಡ್ ನಲ್ಲಿ ಕಳೆದ 15 ವರ್ಷಗಳಿಂದ ನಾಗಾ ಪೀಪಲ್ಸ್ ಫ್ರಂಟ್ ಸರಕಾರವಿದೆ.
ಈಗಾಗಲೇ ಅಸ್ಸಾಂ, ಮಣಿಪುರ ಮತ್ತು ಅರುಣಾಚಲ ಪ್ರದೇಶದಲ್ಲಿ ಸರಕಾರ ರಚಿಸಿರುವ ಭಾರತೀಯ ಜನತಾ ಪಕ್ಷ ಈಶಾನ್ಯ ರಾಜ್ಯಗಳಲ್ಲಿ ಮತ್ತಷ್ಟು ಗಟ್ಟಿಯಾಗಿ ಬೇರೂರಲು ಇಚ್ಛಿಸಿದೆ. ಇದು ಎಷ್ಟರ ಮಟ್ಟಿಗ ಸಫಲವಾಗಲಿದೆ ಎಂಬುದಕ್ಕೆ ಶನಿವಾರದ ಫಲಿತಾಂಶ ಸಾಕ್ಷಿಯಾಗಲಿದೆ.
ಈ ಹಿಂದೆ 2013ರಲ್ಲಿ ನಡೆದ ಚುನಾವಣೆಯ ಬಲಾಬಲಗಳನ್ನು ನೋಡುವುದಾದರೆ,

ಮೇಘಾಲಯ
ಒಟ್ಟು ಸ್ಥಾನ - 60
ಕಾಂಗ್ರೆಸ್ - 29
ಯುಡಿಪಿ - 8
ಎನ್ ಪಿಪಿ - 2
ಎಚ್ ಎಸ್ ಪಿಡಿಪಿ - 4
ಎನ್ ಸಿಪಿ - 2
ಎನ್ ಇಎಸ್ ಡಿಪಿ - 1
ಜಿಎಸ್ ಸಿ - 1
ಪಕ್ಷೇತರ - 13
ಬಿಜೆಪಿ - 0

ತ್ರಿಪುರಾ
ಒಟ್ಟು ಸ್ಥಾನ - 60
ಸಿಪಿಎಂ - 49
ಕಾಂಗ್ರೆಸ್ - 10
ಸಿಪಿಐ - 1
ಬಿಜೆಪಿ - 0

ನಾಗಾಲ್ಯಾಂಡ್
ಒಟ್ಟು ಸ್ಥಾನ - 60
ಎನ್ ಪಿಎಫ್ - 38
ಕಾಂಗ್ರೆಸ್ - 8
ಎನ್ ಸಿಪಿ - 4
ಜೆಡಿಯು - 1
ಬಿಜೆಪಿ - 1
ಪಕ್ಷೇತರ - 8












Click it and Unblock the Notifications