ನಾಗಲ್ಯಾಂಡ್‌ನಲ್ಲಿ ನಾಯಿ ಮಾಂಸ ಮಾರಾಟ, ಆಮದು ನಿಷೇಧ
ಕೊಹಿಮಾ, ಜುಲೈ 3: ಸಾಮಾಜಿಕ ಜಾಲತಾಣದಲ್ಲಿ ನಾಯಿಗಳ ಮಾರಾಟದ ಫೋಟೋ ವೈರಲ್ ಆದ ಬಳಿಕ ರಾಜ್ಯದಲ್ಲಿ ನಾಯಿ ಮಾಂಸ ಮಾರಾಟ ನಿಷೇಧ ಮಾಡಲಾಗಿದೆ ಎಂದು ನಾಗಲ್ಯಾಂಡ್ ರಾಜ್ಯ ಸರ್ಕಾರ ಶುಕ್ರವಾರ ಘೋಷಿಸಿದೆ.
ನಾಗಾಲ್ಯಾಂಡ್‌ನ ದಿಮಾಪುರದ ನಾಯಿ ಮಾರುಕಟ್ಟೆಯಲ್ಲಿ ಮಾಂಸಕ್ಕಾಗಿ ನಾಯಿಗಳನ್ನು ಮಾರಾಟಕ್ಕೆ ಇಡಲಾಗಿದ್ದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಯಿತು.
ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ, ಪ್ರಾಣಿಗಳ ಮೇಲಿನ ದೌರ್ಜನ್ಯ ಮತ್ತು ವಧೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಫೆಡರಲ್ ಸರ್ಕಾರದ ಭಾರತೀಯ ಪ್ರಾಣಿ ಸಂರಕ್ಷಣಾ ಸಂಸ್ಥೆಗಳು (ಎಫ್‌ಐಎಪಿಒ) ನಾಗಲ್ಯಾಂಡ್ ಸರ್ಕಾರವನ್ನು ಒತ್ತಾಯಿಸಿತ್ತು.

ಇದರ ಪರಿಣಾಮ ''ನಾಗಲ್ಯಾಂಡ್ ಸರ್ಕಾರವೂ ವಾಣಿಜ್ಯ ಉದ್ದೇಶಕ್ಕೆ ನಾಯಿಗಳ ಆಮದು ಹಾಗೂ ವ್ಯಾಪಾರವನ್ನು ನಿಷೇಧಿಸಿದೆ. ನಾಯಿ ಮಾಂಸದ ಆಹಾರ ಅಥವಾ ಹಸಿ ನಾಯಿ ಮಾಂಸದ ಮಾರಾಟವನ್ನು ನಿಷೇಧಿಸಿದೆ'' ಎಂದು ಸರ್ಕಾರ ಮುಖ್ಯ ಕಾರ್ಯದರ್ಶಿ ಟ್ವೀಟ್ ಮಾಡಿದ್ದಾರೆ.
ಅಂದ್ಹಾಗೆ, ಈ ನಾಯಿಗಳನ್ನು ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಿಂದ ಅಕ್ರಮವಾಗಿ ನಾಗಲ್ಯಾಂಡ್‌ಗೆ ಸಾಗಿಸಲಾಗಿತ್ತು ಎಂದು ಹೇಳಲಾಗಿದೆ. ಕೇಂದ್ರದ ಕಾನೂನಿ ಪ್ರಕಾರ, ನಾಯಿ ಮಾಂಸ್ ಸೇವಿಸುವುದು ಮತ್ತು ಮಾರಾಟ ಮಾಡುವುದು ಅಪರಾಧ.
ನಾಯಿ ಮಾಂಸ ಹೆಚ್ಚಿನ ಪೌಷ್ಠಿಕಾಂಶ ಒದಗಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಒಳಗೊಂಡಿದೆ ಎಂದು ಇಲ್ಲಿನ ಜನರು ನಂಬುತ್ತಾರೆ ಎನ್ನಲಾಗಿದೆ. ಇದಕ್ಕೂ ಮುಂಚೆ ಮಿಜೋರಾಂ ರಾಜ್ಯದಲ್ಲಿ ನಾಯಿ ಮಾಂಸ ಮಾರಾಟ, ಆಮದು ನಿಷೇಧ ಮಾಡಲಾಗಿತ್ತು.












Click it and Unblock the Notifications