Nagaland Election Results 2023: ಬಿಜೆಪಿ ಮೈತ್ರಿಕೂಟಕ್ಕೆ ಬಹುಮತ- ಆರಂಭಿಕ ಅಂಕಿಅಂಶಗಳು ಹೇಳುತ್ತಿರುವುದೇನು?
ಬಿಜೆಪಿ ನೇತೃತ್ವದ ಒಕ್ಕೂಟವು ನಾಗಾಲ್ಯಾಂಡ್‌ನ 60 ಸ್ಥಾನಗಳಲ್ಲಿ 38 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಫೆಬ್ರವರಿ 27 ರಂದು ನಡೆದ ಚುನಾವಣೆಯ ಮತಗಳ ಎಣಿಕೆ ಪ್ರಾರಂಭವಾಗುತ್ತಿದ್ದಂತೆ ಆರಂಭಿಕ ಅಂಕಿಅಂಶಗಳ ಪ್ರಕಾರ, ಬಿಜೆಪಿ ಮುನ್ನೆಡೆ ಸಾಧಿಸಿದೆ.
ನವದೆಹಲಿ, ಮಾರ್ಚ್ 02: ಬಿಜೆಪಿ ನೇತೃತ್ವದ ಒಕ್ಕೂಟವು ನಾಗಾಲ್ಯಾಂಡ್‌ನ 60 ಸ್ಥಾನಗಳಲ್ಲಿ 38 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಫೆಬ್ರವರಿ 27 ರಂದು ನಡೆದ ಚುನಾವಣೆಯ ಮತಗಳ ಎಣಿಕೆ ಪ್ರಾರಂಭವಾಗುತ್ತಿದ್ದಂತೆ ಆರಂಭಿಕ ಅಂಕಿಅಂಶಗಳ ಪ್ರಕಾರ, ಬಿಜೆಪಿ ಮುನ್ನೆಡೆ ಸಾಧಿಸಿದೆ.
ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ಮೂರು ಸ್ಥಾನಗಳಲ್ಲಿ ಮುಂದಿದೆ. ಕಾಂಗ್ರೆಸ್ ಪಕ್ಷವು 2 ಕ್ಷೇತ್ರದಲ್ಲಿ ಮುಂದಿದೆ. 60 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತದ ಸಂಖ್ಯೆ 31.

ಬಿಜೆಪಿಯು 20 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಮಿತ್ರಪಕ್ಷವಾದ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ಎನ್‌ಡಿಪಿಪಿ) 40 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದೆ. ಕೇಸರಿ ಪಕ್ಷವು ಮೈತ್ರಿಕೂಟದ ಕಿರಿಯ ಪಾಲುದಾರ. ಮುಖ್ಯಮಂತ್ರಿ ನೆಫಿಯು ರಿಯೊ ನೇತೃತ್ವದ ಎನ್‌ಡಿಪಿಪಿ ಕಳೆದ ಚುನಾವಣೆಯಲ್ಲಿಯೂ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಕಳೆದ ಚುನಾವಣೆಯು 2018 ರಲ್ಲಿ ನಡೆದಿತ್ತು.
ಕಾಂಗ್ರೆಸ್ ಮತ್ತು ಎನ್‌ಪಿಎಫ್ ಕ್ರಮವಾಗಿ 23 ಮತ್ತು 22 ಸ್ಥಾನಗಳಲ್ಲಿ ಸ್ಪರ್ಧಿಸಿವೆ.
ಫೆಬ್ರವರಿ 27 ರಂದು 59 ಸ್ಥಾನಗಳಿಗೆ ಚುನಾವಣೆಗಳು ನಡೆದವು. ಜುನ್ಹೆಬೊಟೊ ಜಿಲ್ಲೆಯ ಅಕುಲುಟೊ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಶಾಸಕ ಕಜೆಟೊ ಕಿನಿಮಿ ಅವರು ಅವಿರೋಧವಾಗಿ ಆಯ್ಕೆಯಾದರು.

ಇಲ್ಲಿ ಗಮನಿಸಬೇಕಿರುವ ಸಂಗತಿ ಎಂದರೆ, 1963 ರಲ್ಲಿ ರಚನೆಯಾದ ನಾಗಾಲ್ಯಾಂಡ್‌ನಲ್ಲಿ ಈ ವರೆಗೂ 14 ವಿಧಾನಸಭಾ ಚುನಾವಣೆಗಳು ನಡೆದಿವೆ. ಈ ವರೆಗೆ ಯಾವುದೇ ಮಹಿಳಾ ಅಭ್ಯರ್ಥಿ ಗೆಲುವು ಸಾಧಿಸಿಲ್ಲ. ಈ ವರ್ಷದ ಚುನಾವಣೆಯಲ್ಲಿ ಸ್ಪರ್ಧಿಸಿದ 183 ಅಭ್ಯರ್ಥಿಗಳಲ್ಲಿ ನಾಲ್ಕು ಮಹಿಳೆಯರು ಇದ್ದಾರೆ.
ಇಂಡಿಯಾ ಟುಡೇ ಅಂಕಿಅಂಶಗಳ ಪ್ರಕಾರ, ಬಿಜೆಪಿ 35, ಎನ್‌ಪಿಎಫ್ 9, ಕಾಂಗ್ರೆಸ್ 2 ಮತ್ತು ಇತರರು 13 ರಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಟೈಮ್ಸ್ ನೌ ಅಂಕಿಅಂಶಗಳ ಪ್ರಕಾರ, ಬಿಜೆಪಿ ಎನ್‌ಡಿಪಿಪಿ 49 ರಲ್ಲಿ ಮುಂದಿದೆ. ಎನ್‌ಪಿಎಫ್ 7 ರಲ್ಲಿ ಮುಂದಿದೆ. ಕಾಂಗ್ರೆಸ್ 2 ರಲ್ಲಿ ಮುಂದಿದೆ. ಇತರರು 2 ರಲ್ಲಿ ಮುಂದಿದ್ದಾರೆ.
ಎನ್‌ಡಿಟಿವಿ ಅಂಕಿಅಂಶಗಳ ಪ್ರಕಾರ, ಬಿಜೆಪಿ- ಎನ್‌ಡಿಪಿಪಿ 49 ರಲ್ಲಿ ಮುಂದಿದೆ, ಎನ್‌ಪಿಎಫ್ 7 ರಲ್ಲಿ ಮುಂದಿದೆ, ಕಾಂಗ್ರೆಸ್ 1 ರಲ್ಲಿ ಮುಂದಿದೆ, ಇತರರು 3 ರಲ್ಲಿ ಮುಂದಿದ್ದಾರೆ.
1 ಡಿಸೆಂಬರ್ 1963 ರಂದು ಭಾರತದ ರಾಜ್ಯವಾಗಿ ನಾಗಾಲ್ಯಾಂಡ್ ಅಸ್ತಿತ್ವಕ್ಕೆ ಬಂದಿತು. ಮೊದಲ ನಾಗಾಲ್ಯಾಂಡ್ ವಿಧಾನಸಭೆಯನ್ನು 11 ಫೆಬ್ರವರಿ 1964 ರಂದು ರಚಿಸಲಾಯಿತು. 1974 ರಲ್ಲಿ, ವಿಧಾನಸಭೆಯ ಬಲವನ್ನು 40 ರಿಂದ ಈಗಿನ 60 ಸದಸ್ಯರ ಬಲಕ್ಕೆ ಹೆಚ್ಚಿಸಲಾಯಿತು.












Click it and Unblock the Notifications