ನನ್ನ ಅಪ್ಪುಗೆ ಮೋದಿಯೊಳಗಿನ ದ್ವೇಷವನ್ನು ಕಡಿಮೆ ಮಾಡಿತು: ರಾಹುಲ್ ಗಾಂಧಿ
ಅಜ್ಮೇರ್, ಫೆಬ್ರವರಿ 14: ನನ್ನ ಅಪ್ಪುಗೆ ಮೋದಿ ಅವರಲ್ಲಿ ನನ್ನ ಬಗ್ಗೆ ಇದ್ದ ದ್ವೇಷವನ್ನು ಕಿತ್ತೊಗೆದಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಂಸತ್‌ನಲ್ಲಿ ಮೋದಿ ಅವರನ್ನು ಅಪ್ಪಿಕೊಂಡಿದ್ದನ್ನು ಸಮರ್ಥಿಸಿಕೊಂಡರು.
ರಾಜಸ್ಥಾನದ ಅಜ್ಮೇರ್‌ನಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ದ್ವೇಷವನ್ನು ಕಾಂಗ್ರೆಸ್ ಕಾರ್ಯಕರ್ತರು ಪ್ರೀತಿಯಿಂದ ಎದುರಿಸಬೇಕು ಎಂದರು.
ನಾವು 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುತ್ತೇವೆ ಆದರೆ ಅದನ್ನು ನಿರ್ನಾಮ ಮಾಡುವುದಿಲ್ಲ ಎಂದರು. ಬಿಜೆಪಿಯ ದ್ವೇಷ ರಾಜಕಾರಣಕ್ಕೆ ಬದಲಾಗಿ ನಾವು ಪ್ರೀತಿಯ ರಾಜಕಾರಣ ಮಾಡುತ್ತೇವೆ ಎಂದು ಹೇಳಿದರು.

ಮೋದಿ ಅವರು ಸದಾ ನನ್ನ ಮತ್ತು ನನ್ನ ಕುಟುಂಬದ ಮೇಲೆ ವಾಗ್ದಾಳಿ ಮಾಡುತ್ತೇ ಇರುತ್ತಾರೆ, ಕಾಂಗ್ರೆಸ್ ಅನ್ನು ಕಿತ್ತೊಗೆಯುತ್ತೇನೆ ಎನ್ನುತ್ತಾರೆ, ಆದರೆ ನಾನು ಅವರನ್ನು ಅಪ್ಪಿಕೊಂಡೆ ನನಗೆ ದ್ವೇಷದ ರಾಜಕಾರಣ ಬೇಕಿಲ್ಲ ಎಂದು ಭಾವುಕವಾಗಿ ರಾಹುಲ್ ಮಾತನಾಡಿದರು.
ನಿನ್ನೆ ಲೋಕಸಭೆಯಲ್ಲಿ ಮೋದಿಯವರ ಕೊನೆಯ ಭಾಷಣದಲ್ಲಿ ರಾಹುಲ್ ಗಾಂಧಿ ಅವರ ಅಪ್ಪುಗೆಯ ಬಗ್ಗೆ ವ್ಯಂಗ್ಯ ಮಾಡಿದ ಮೋದಿ, 'ಈ ಲೋಕಸಭೆಯಲ್ಲಿ ನನಗೆ ಆಲಿಂಗಿಸಿಕೊಳ್ಳುವುದು ಮತ್ತು ಕೊರಳಿಗೆ ನೇತು ಬೀಳುವುದು' (ಗಲೆ ಮಿಲ್ನಾ ಔರ್ ಗಲೇ ಲಗ್ನಾ) ನಡುವೆ ವ್ಯತ್ಯಾಸ ಗೊತ್ತಾಯಿತು' ಎಂದಿದ್ದರು.












Click it and Unblock the Notifications