Get Updates
Get notified of breaking news, exclusive insights, and must-see stories!

ನನ್ನ ಚಳವಳಿಯಿಂದ ಮತ್ತೊಬ್ಬ ಕೇಜ್ರಿವಾಲ್ ಹುಟ್ಟುವುದಿಲ್ಲ: ಅಣ್ಣಾ ಹಜಾರೆ

Recommended Video

      ನನ್ನ ಚಳುವಳಿಯಿಂದ ಇನ್ನೊಬ್ಬ ಕೇಜ್ರಿವಾಲ್ ಹುಟ್ಟುವುದಿಲ್ಲ ಎಂದ ಅಣ್ಣಾ ಹಜಾರೆ

      ನವದೆಹಲಿ, ಫೆಬ್ರವರಿ 06: "ನನ್ನ ಚಳವಳಿ ಮತ್ತೊಬ್ಬ ಕೇಜ್ರಿವಾಲ್ ರನ್ನು ಹುಟ್ಟಿಸುವುದಿಲ್ಲ" ಎನ್ನುವ ಮೂಲಕ ಮತ್ತೊಮ್ಮೆ ಕೇಜ್ರಿವಾಲ್ ಬಗೆಗಿನ ತಮ್ಮ ಮುನಿಸನ್ನು ಹೊರಹಾಕಿದ್ದಾರೆ ಅಣ್ಣಾ ಹಜಾರೆ.

      ಕೇಂದ್ರ ಸರ್ಕಾರದ ವಿರುದ್ಧ ಮಾರ್ಚ್ 23 ರಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಸಲಿರುವ ಭ್ರಷ್ಟಾಚಾರ ವಿರೋಧಿ ಹೋರಾಟಗಾರ, ಗಾಂಧಿವಾದಿ ಅಣ್ಣಾ ಹಜಾರೆ, ತಮ್ಮ ಜೊತೆ ಪ್ರತಿಭಟನೆಯಲ್ಲಿ ಕೈಜೋಡಿಸುವವರು ನಂತರ ಯಾವುದೇ ಕಾರಣಕ್ಕೂ ರಾಜಕೀಯ ಸೇರುವಂತಿಲ್ಲ ಎಂದು ಮೊದಲೇ ಅಫಿಡವಿಟ್ ಗೆ ಸಹಿ ಮಾಡಬೇಕಾಗಿ ಹೇಳಿದ್ದಾರೆ.

      2011ರಲ್ಲಿ ಭ್ರಷ್ಟಾಚಾರದ ವಿರುದ್ಧ ಉಪವಾಸ ಸತ್ಯಾಗ್ರಹ ಆರಂಭಿಸಿದ್ದ ಅಣ್ಣಾ ಹಜಾರೆಯವರೊಂದಿಗೆ ಗುರುತಿಸಿಕೊಂಡಿದ್ದ ಅರವಿಂದ್ ಕೇಜ್ರಿವಾಲ್ ದೆಹಲಿಯ ಮುಖ್ಯಮಂತ್ರಿಯಾಗಿದ್ದು ಈಗ ಇತಿಹಾಸ. ಆದರೆ ತಮ್ಮ ಚಳವಳಿ ರಾಜಕೀಯ ಹಿತಾಸಕ್ತಿಯನ್ನು ಸಾಧಿಸಿಕೊಳ್ಳುವುದಕ್ಕೆ ಸಾಧನವಾಗಬಾರದು ಎಂಬ ಉದ್ದೇಶದಿಂದ ಅರವಿಂದ್ ಕೇಜ್ರಿವಾಲ್ ಈ ಬಾರಿ ಸತ್ಯಾಗ್ರಹ ಆರಂಭಿಸುವ ಮುನ್ನವೇ, ''ರಾಜಕೀಯಕ್ಕಾಗಿ ಚಳವಳಿಯಲ್ಲಿ ಭಾಗವಹಿಸಬೇಡಿ' ಎಂದು ಖಡಕ್ಕಾಗಿ ಹೇಳಿಬಿಟ್ಟಿದ್ದಾರೆ.

      My agitation won’t give rise to another Kejriwal, says Anna Hazare

      ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಟೀಕಾಸ್ತ್ರ ಪ್ರಯೋಗಿಸಿದ ಹಜಾರೆ, 2014 ರಲ್ಲಿ ಅಧಿಕಾರಕ್ಕೆ ಬರುವ ಮುನ್ನ ಪ್ರಧಾನಿ ಮೋದಿ 'ಅಚ್ಚೆ ದಿನ್' ಎಂದಿದ್ದರು. ಆದರೆ ಎಲ್ಲವೂ ಹುಸಿಯಾಗಿದೆ ಎಂದರು.

      ಯುಪಿಎ ಸರ್ಕಾರದ ಅವಧಿಯಲ್ಲಿ 80 ವರ್ಷದ ಅಣ್ಣಾ ಹಜಾರೆ ನಡೆಸಿದ ಭ್ರಷ್ಟಾಚಾರ ವಿರೋಧಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಅರವಿಂದ್ ಕೇಜ್ರಿವಾಲ್, ಕಿರಣ್ ಬೇಡಿ ಮತ್ತು ಮನಿಶ್ ಸಿಸೊಡಿಯಾ ಇದೀಗ ರಾಜಕೀಯದಲ್ಲಿ ಸಕ್ರಿಯರಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+