Ganga Vilas: ವಿಶ್ವದ ಅತಿ ಉದ್ದದ ನದಿಯಾನ ಹಡಗು 'ಗಂಗಾ ವಿಲಾಸ್'ಗೆ ಪ್ರಧಾನಿ ಚಾಲನೆ: ವಿಶೇಷತೆ, ಮಾರ್ಗ, ಪ್ರಯಾಣ ದರ ತಿಳಿಯಿರಿ
ವಾರಣಾಸಿ, ಜನವರಿ 13: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ವರ್ಚುವಲ್ ಆಗಿ ವಾರಣಾಸಿಯಲ್ಲಿ ವಿಶ್ವದ ಅತಿ ಉದ್ದದ ಕ್ರೂಸ್ ಹಡಗು ಗಂಗಾ ವಿಲಾಸ್‌ಗೆ ಚಾಲನೆ ನೀಡಲಿದ್ದಾರೆ. ಇದರೊಂದಿಗೆ ಹಲವಾರು ಇತರ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ವಿಶ್ವದ ಅತಿ ಉದ್ದದ ರಿವರ್ ಕ್ರೂಸ್ ಗಂಗಾ ವಿಲಾಸ್ ಭಾರತದಲ್ಲಿ ತಯಾರಾದ ಮೊದಲ ವಿಹಾರ ನೌಕೆಯಾಗಿದೆ. ಇದು ರಿವರ್ ಕ್ರೂಸ್‌ನಲ್ಲಿ ಆತ್ಮನಿರ್ಭರ ಭಾರತದ ಸಂಕೇತವಾಗಿದೆ ಎಂದು ಬಂದರು, ಹಡಗು ಮತ್ತು ಜಲಮಾರ್ಗಗಳ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಂಗಾ ವಿಲಾಸ್ ಉತ್ತರ ಪ್ರದೇಶದ ವಾರಣಾಸಿಯಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ ಮತ್ತು ಬಾಂಗ್ಲಾದೇಶದ ಮೂಲಕ ಅಸ್ಸಾಂನ ದಿಬ್ರುಗಢವನ್ನು ತಲುಪುತ್ತದೆ. ಇದು 51 ದಿನಗಳಲ್ಲಿ 3,200 ಕಿ.ಮೀ ದೂರವನ್ನು ಕ್ರಮಿಸಲಿದೆ.

ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಇತರ ಸಚಿವರು ಮತ್ತು ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಈ ಹಡಗಿಗೆ ಚಾಲನೆ ನೀಡಲಾಗುತ್ತದೆ.
'ಗಂಗಾ ವಿಲಾಸ್ ತನ್ನ ಚೊಚ್ಚಲ ಯಾನದಲ್ಲಿ ಸ್ವಿಟ್ಜರ್ಲೆಂಡ್‌ನಿಂದ 32 ಪ್ರವಾಸಿಗರನ್ನು 27 ನದಿ ವ್ಯವಸ್ಥೆಗಳ ಮೂಲಕ ಹೊತ್ತೊಯ್ಯಲಿದೆ ಮತ್ತು ವಾರಣಾಸಿ, ಪಾಟ್ನಾ, ಕೋಲ್ಕತ್ತಾ, ಬಾಂಗ್ಲಾದೇಶದ ನದಿಯ ದಡದಲ್ಲಿರುವ ವಿವಿಧ ಪ್ರಮುಖ ಸ್ಥಳಗಳ ಮೂಲಕ ಪ್ರಯಾಣಿಸಲಿದೆ. ಗುವಾಹಟಿ ಮತ್ತು ಸಿಬ್ಸಾಗರ್/ದಿಬ್ರುಗಢವನ್ನೂ ಪ್ರವೇಶಿಸಲಿದೆ' ಎಂದು ಬಂದರು ಮತ್ತು ಜಲಮಾರ್ಗಗಳ ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ್ ಎಎನ್‌ಐಗೆ ತಿಳಿಸಿದರು.
'ಈ ಪ್ರಯಾಣವು ಭಾರತ ಮತ್ತು ಬಾಂಗ್ಲಾದೇಶದ ಕಲೆ, ಸಂಸ್ಕೃತಿ, ಇತಿಹಾಸ ಮತ್ತು ಆಧ್ಯಾತ್ಮಿಕತೆಯಲ್ಲಿ ಪಾಲ್ಗೊಳ್ಳಲು ವಿದೇಶಿ ಪ್ರಯಾಣಿಕರಿಗೆ ಅವಕಾಶವನ್ನು ನೀಡುತ್ತದೆ' ಎಂದು ಸೋನೊವಾಲ್ ಹೇಳಿದರು.
ಜಲಮಾರ್ಗಗಳನ್ನು ರಾಷ್ಟ್ರದ ಅಭಿವೃದ್ಧಿಯ ಮೂಲವನ್ನಾಗಿ ಮಾಡುವ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಫಲಿತಾಂಶವೇ ಈ ಕ್ರೂಸ್ ಎಂದು ಕೇಂದ್ರ ಸಚಿವರು ತಿಳಿಸಿದರು.

ಜಲಮಾರ್ಗದ ಪರಿಸರ ವ್ಯವಸ್ಥೆಯ ಅಭಿವೃದ್ಧಿಗೆ ಅನುಕೂಲವಾಗುವಂತೆ ಭಾರತದಾದ್ಯಂತ ವಿವಿಧ ಸ್ಥಳಗಳಲ್ಲಿ 100 ಕ್ಕೂ ಹೆಚ್ಚು ಜಲಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಹೆಚ್ಚು ಕ್ರೂಸ್ ಪ್ರವಾಸೋದ್ಯಮಕ್ಕೆ ಕಾರಣವಾಗುತ್ತದೆ. ನದಿ ದಡದಲ್ಲಿ ಸ್ಥಳೀಯ ವ್ಯವಹಾರಗಳನ್ನು ಉತ್ತೇಜಿಸುತ್ತದೆ. ಸ್ಥಳೀಯ ಆರ್ಥಿಕತೆಯ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
ಭಾರತೀಯ ಮತ್ತು ಅಂತರಾಷ್ಟ್ರೀಯ ವಿನ್ಯಾಸದಿಂದ ನಿರ್ಮಿಸಲಾದ ಆಧುನಿಕ ಹಡಗು 62 ಮೀಟರ್ ಉದ್ದ ಮತ್ತು 12 ಮೀಟರ್ ಅಗಲವಿದೆ. ಇದಕ್ಕೆ 1.4 ಮೀಟರ್ ಡ್ರಾಫ್ಟ್ ಅಗತ್ಯವಿದೆ. 18 ಸೂಟ್‌ಗಳು ಮತ್ತು ಎಲ್ಲಾ ಸಂಬಂಧಿತ ಸೌಕರ್ಯಗಳೊಂದಿಗೆ, ನೌಕೆಯು ಒಟ್ಟು 36 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.
ವಿಹಾರ ಮಾರ್ಗ: ಗಂಗಾ-ಭಾಗೀರಥಿ-ಹೂಗ್ಲಿ ನದಿ (ರಾಷ್ಟ್ರೀಯ ಜಲ ಮಾರ್ಗ 1), ಕೋಲ್ಕತ್ತಾದಿಂದ ಧುಬ್ರಿ (ಇಂಡೋ ಬಾಂಗ್ಲಾ ಪ್ರೋಟೋಕಾಲ್ ಮಾರ್ಗ) ಮತ್ತು ಬ್ರಹ್ಮಪುತ್ರ (ರಾಷ್ಟ್ರೀಯ ಜಲಮಾರ್ಗ 2). ಈ ದಾರಿಯಲ್ಲಿ 27 ನದಿಗಳು ಬರಲಿವೆ.

ದಾರಿಯಲ್ಲಿ ಬೀಳುವ ಪ್ರಮುಖ ನದಿಗಳು- ಗಂಗಾ, ಭಾಗೀರಥಿ, ಹೂಗ್ಲಿ, ವಿದ್ಯಾವತಿ, ಮಟ್ಲಾ, ಸುಂದರಬನ್ಸ್ ನದಿ ವ್ಯವಸ್ಥೆಗಳು-5, ಮೇಘನಾ, ಪದ್ಮ, ಜಮುನಾ ಮತ್ತು ಬ್ರಹ್ಮಪುತ್ರ.
ಈ ವಿಹಾರ 5 ರಾಜ್ಯಗಳು ಮತ್ತು ಬಾಂಗ್ಲಾದೇಶ-ಯುಪಿ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಬಾಂಗ್ಲಾದೇಶದ ಮೂಲಕ ಹಾದುಹೋಗುತ್ತದೆ.
50 ಪ್ರಮುಖ ಪ್ರವಾಸಿ ತಾಣಗಳನ್ನು ಒಳಗೊಂಡಂತೆ ವಾರಣಾಸಿ, ಪಾಟ್ನಾ, ಕೋಲ್ಕತ್ತಾ, ಢಾಕಾ, ಗುವಾಹಟಿ, ದಿಬ್ರುಗಢ್ - ವಿಹಾರದ ದಾರಿಯಲ್ಲಿ ಪ್ರಮುಖ ನಿಲುಗಡೆಗಳು.
ಇಡೀ ಪ್ರವಾಸದ ದರ - ಒಬ್ಬ ವ್ಯಕ್ತಿಗೆ 19 ಲಕ್ಷ ರೂ. ಸೂಟ್‌ನ ಬಾಡಿಗೆ 38 ಲಕ್ಷ ರೂ. ಈ ದರವು ಜಾಗಕ್ಕೆ ಅನುಗುಣವಾಗಿ ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು.
-
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ












Click it and Unblock the Notifications