ರಾಮ ಮಂದಿರವನ್ನು ಹೆಚ್ಚಿನ ಮುಸ್ಲಿಮರು ವಿರೋಧಿಸುತ್ತಿಲ್ಲ : ರವಿಶಂಕರ್
ಅಯೋಧ್ಯೆ, ನವೆಂಬರ್ 16: ರಾಮ ಮಂದಿರ ನಿರ್ಮಾಣವನ್ನು ಹೆಚ್ಚಿನ ಮುಸ್ಲಿಮರು ವಿರೋಧಿಸುತ್ತಿಲ್ಲ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಹೇಳಿದ್ದಾರೆ.
ಇಂದು ಅಯೋಧ್ಯೆಗೆ ಭೇಟಿ ನೀಡಿದ ಅವರು, "ನನಗೆ ಗೊತ್ತು ಕೆಲವರು ಇದನ್ನು ಒಪ್ಪಿಕೊಳ್ಳಲಿಕ್ಕಿಲ್ಲ. ಆದರೆ ಹೆಚ್ಚಿನ ಮುಸ್ಲಿಮರು ರಾಮ ಮಂದಿರ ನಿರ್ಮಾಣವನ್ನು ವಿರೋಧಿಸುತ್ತಿಲ್ಲ," ಎಂದು ಹೇಳಿದ್ದಾರೆ.

"ಕೆಲವೊಮ್ಮೆ ಪರಿಹಾರ ಸಾಧ್ಯವಿಲ್ಲ ಎಂದು ಅನಿಸುತ್ತದೆ. ಆದರೆ ನಮ್ಮ ಜನರು, ಯುವಕರು ಮತ್ತು ಎರಡೂ ಸಮುದಾಯಗಳ ನಾಯಕರು ಇದನ್ನು ಸಾಧ್ಯವಾಗಿಸಬಹುದು," ಎಂದು ಅಭಿಪ್ರಾಯಪಟ್ಟರು.
ಎರಡೂ ಪಂಗಡಗಳು ಒಪ್ಪಿಕೊಂಡಲ್ಲಿ ಆಯೋಧ್ಯೆ ವಿವಾದ ಬಗೆಹರಿಸಲು ಮಧ್ಯವರ್ತಿಯಾಗಲು ತಾವು ಸಿದ್ಧ ಎಂದು ಶ್ರೀ ಶ್ರೀ ರವಿಶಂಕರ್ ಕೆಲವು ದಿನಗಳ ಹಿಂದೆ ಹೇಳಿದ್ದರು. ಆದರೆ ರವಿಶಂಕರ್ ಸಂಧಾನ ಪ್ರಯತ್ನಕ್ಕೆ ಬಿಜೆಪಿ ನಾಯಕರು, ವಿಶ್ವ ಹಿಂದೂ ಪರಿಷತ್ ಸೇರಿ ಹಲವರಿಂದ ವಿರೋಧ ವ್ಯಕ್ತವಾಗಿತ್ತು.












Click it and Unblock the Notifications