ಇಂಧೋರ್‌ನಲ್ಲಿ ಭೋಜನಕ್ಕೆ ಬಂದ ಮುಸ್ಲಿಂ ಹುಡುಗಿ, ಹಿಂದೂ ಹುಡುಗನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ
ಭೋಜನಕ್ಕೆ ಬಂದ ಮುಸ್ಲಿಂ ಹುಡುಗಿ, ಹಿಂದೂ ಹುಡುಗನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ಕಳೆದ ರಾತ್ರಿ ಇಂಧೋರ್‌ನಲ್ಲಿ ನಡೆದಿದೆ. ಮಧ್ಯಪ್ರದೇಶದ ಇಂದೋರ್‌ನ ಹೋಟೆಲ್‌ನಿಂದ ಹೊರ ಬರುವಾಗ ಗುಂಪೊಂದು ಮುಸ್ಲಿಂ ಯುವತಿ ಮತ್ತು ಹಿಂದೂ ಹುಡುಗನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ಇವರಿಬ್ಬರ ರಕ್ಷಣೆಗೆ ಬಂದ ಇಬ್ಬರು ವ್ಯಕ್ತಿಗಳಿಗೆ ಇರಿತದ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನಗರದಲ್ಲಿ ಗುರುವಾರ ರಾತ್ರಿ ಈ ಗಟನೆ ನಡೆದಿದೆ. ಘಟನೆ ನಡೆದ ಬಳಿಕ ಗುಂಪಿನ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ.

ಯುವತಿ ಮತ್ತು ಯುವಕ ಆಹಾರ ಸೇವಿಸಿ ಹೋಟೆಲ್‌ನಿಂದ ಹೊರಬಂದಾಗ, ಗುಂಪು ಅವರನ್ನು ಹಿಂಬಾಲಿಸಿ ಸುತ್ತುವರೆದಿದೆ. ಬೇರೆ ಧರ್ಮದ ವ್ಯಕ್ತಿಯ ಸಹವಾಸ ಏಕೆ ಮಾಡಿದ್ದೀಯ ಎಂದು ಯುವತಿಯನ್ನು ಗುಂಪು ಪ್ರಶ್ನೆ ಮಾಡಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಹಲೆ ಮಾಡಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ರಾಜೇಶ್ ರಘುವಂಶಿ ಹೇಳಿದ್ದಾರೆ.
In Indore, MP MusIim mobs beat a couple because the girl was a MusIim & the boy was a Hindu.
— Mr Sinha (@MrSinha_) May 26, 2023
It's becoming a new normal!
Imagine the amount of national-international outrage if any Hindu group starts doing this with M boy & H girl couples.. pic.twitter.com/Is0nis1QbJ
"ತನ್ನ ಪೋಷಕರಿಗೆ ತಿಳಿಸಿದ ನಂತರ ತಾನು ಯುವಕನೊಂದಿಗೆ ಊಟಕ್ಕೆ ಬಂದಿದ್ದೇನೆ ಎಂದು ಯುವತಿ ತಿಳಿಸಿದ್ದಾಳೆ. ಆಕೆ ಯುವಕರ ಗುಂಪಿನ ದುರ್ವರ್ತನೆಯನ್ನು ಸಹ ಆಕ್ಷೇಪಿಸಿದ್ದಾಳೆ. ಈ ಮಧ್ಯೆ, ಗುಂಪಿನಿಂದ ಯಾರೋ ಚಾಕುವನ್ನು ಹೊರತೆಗೆದಿದ್ದಾರೆ ಈ ವೇಳೆ ಇವರಿಬ್ಬರಿಗೆ ರಕ್ಷಣೆಗೆ ಬಂದ ಇಬ್ಬರು ಗಾಯಗೊಂಡಿದ್ದಾರೆ" ಎಂದು ಹೆಚ್ಚುವರಿ ಡಿಸಿಪಿ ಹೇಳಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆಗೆ ಯತ್ನ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಇದರಂತೆ ಇದುವರೆಗೆ ಏಳು ಆರೋಪಿಗಳನ್ನು ಗುರುತಿಸಲಾಗಿದೆ ಎಂದು ತುಕೋಗಂಜ್ ಪೊಲೀಸ್ ಠಾಣೆಯ ಉಸ್ತುವಾರಿ ಕಮಲೇಶ್ ಶರ್ಮಾ ತಿಳಿಸಿದ್ದಾರೆ.
23-26 ವಯೋಮಾನದ ಆರೋಪಿಗಳಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಗುಂಪು ರಚಿಸಿದ್ದ ಉಳಿದ 20 ಮಂದಿಯನ್ನು ಗುರುತಿಸಿ ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಶರ್ಮಾ ತಿಳಿಸಿದ್ದಾರೆ. ವಿವಿಧ ಧರ್ಮದ ಯುವಕ ಯುವತಿಗೆ ಕಿರುಕುಳ ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಂಸದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪೊಲೀಸರಿಗೆ ಸೂಚಿಸಿದ್ದಾರೆ.












Click it and Unblock the Notifications