ಆಟೋ ಡ್ರೈವರ್ ಫ್ಲೈಯಿಂಗ್ ಕಿಸ್ ಕೊಟ್ಟು ಕೆಟ್ಟ

Mumbai pregnant got auto driver arrested for flying kiss
ಮುಂಬೈ, ನ.14: ಆಟೋ ರಿಕ್ಷಾ ಡ್ರೈವರಿನ ಲೈಂಗಿಕ ಕಿರುಕುಳ ಸಹಿಸದಾದ ಮಹಿಳೆಯೊಬ್ಬರು ಅವನನ್ನು ಸೀದಾ ಠಾಣೆಗೆ ಎಳೆದೊಯ್ದು ಜೈಲುಶಿಕ್ಷೆಗೆ ಗುರಿಪಡಿಸಿದ್ದಾರೆ.

ಸೋಮವಾರ ಮಧ್ಯಾಹ್ನ ಗರ್ಭಿಣಿಯೊಬ್ಬರು ತನ್ನ ತಾಯಿಯನ್ನು ಜತೆಗೆ ಕರೆದುಕೊಂಡು ಆಸ್ಪತ್ರೆಗೆ ಹೋಗಲು ಅಣಿಯಾಗಿದ್ದಾರೆ. ಆ ವೇಳೆ ಎದುರಿಗೆ ಸಿಕ್ಕಿದ ಆಟೋ ಹತ್ತಿದ್ದಾರೆ. ಆದರೆ ಆ ಆಟೋದಲ್ಲಿದ್ದ 45 ವರ್ಷದ ಡ್ರೈವರ್ ಸ್ವಲ್ಪ ದೂರ ಸಾಗುತ್ತಿದ್ದಂತೆ ಹಿಂಬದಿ ಸೀಟಿನಲ್ಲಿ ಕುಳಿತ 33 ವರ್ಷದ ಗರ್ಭಿಣಿಯನ್ನು ರೇರ್ ಮಿರರ್ ಮೂಲಕ ಒಂದೇ ಸಮನೆ ಕಾಕದೃಷ್ಟಿಯಿಂದ ನೋಡಿದ್ದಾನೆ. ಸಾಲದು ಅಂತ ಆ ಮಹಿಳೆಗೆ ಇರುಸುಮುರುಸು ಆಗುವಂತೆ ಫ್ಲೈಯಿಂಗ್ ಕಿಸ್ಸುಗಳನ್ನು ಹಾರಿಬಿಟ್ಟಿದ್ದಾನೆ.

ಇದರಿಂದ ಬೇಸರಗೊಂಡ ಮಹಿಳೆ, ಆಟೋ ಡ್ರೈವರಿಗೆ ಎಚ್ಚರಿಕೆ ಕೊಟ್ಟು ಸರಿಯಾಗಿರುವಂತೆ ತಿಳಿಯಹೇಳಿದ್ದಾರೆ. ಆದರೆ ಅವನು ಏನೂ ಆಗೇ ಇಲ್ಲ ಎಂಬಂತೆ ಮತ್ತೆ ತನ್ನ ದುರ್ವರ್ತನೆ ಮುಂದುವರಿಸಿದ್ದಾನೆ. ಇದರಿಂದ ಮತ್ತಷ್ಟು ಕಸಿವಿಸಿಗೊಂಡ ಮಹಿಳೆ ಅವನ ಜತೆ ಜಗಳ ಮಾಡಿ, ಸೀದಾ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾಳೆ.

ಅಲ್ಲಿ ಪೊಲೀಸರ ಮುಂದೆ ತಾನು ಬೀಡಿ ಸೇದುತ್ತಿದ್ದಾಗಿ ಹೇಳಿ ಆಟೋ ಡ್ರೈವರ್, ಮಹಿಳೆ ಅದನ್ನು ತಪ್ಪು ತಿಳಿದುಕೊಂಡು ರಂಪ ಮಾಡುತ್ತಿದ್ದಾರೆ ಎಂದು ಸಬೂಬು ಹೇಳಲು ಶುರು ಮಾಡಿದ್ದಾನೆ. ಆದರೆ ಮಹಿಳೆ ಪಟ್ಟು ಹಿಡಿದು ಇಲ್ಲ ಅವನು ಬೇಕಂತಲೇ ತನ್ನನ್ನು ನೋಡಿ ಅಸಹ್ಯವಾಗಿ ನಡೆದುಕೊಂಡ ಎಂದು ದೂರು ಬರೆದುಕೊಟ್ಟಿದ್ದಾರೆ.

ಪೊಲೀಸರು ಸಹ ಆಟೋ ಡ್ರೈವರಿನ ಮಾತನ್ನು ನಂಬದಾದರು. ಕೊನೆಗೆ ಮಹಿಳೆಯ ದೂರಿನನ್ವಯ ಡ್ರೈವರನನ್ನು ಎತ್ತಿ ಒಳಗೆ ಹಾಕಿದ್ದಾರೆ. Indian Penal Code Section 354 (a) (assault or criminal force to woman with intent to outrage her modesty) ಅನುಸಾರ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅವನನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿ ಜಾಮೀನಿನ ಮೇಲೆ ಆಟೋ ಡ್ರೈವರನನ್ನು ನ್ಯಾಯಾಲಯ ಬಿಟ್ಟುಕಳುಹಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+