ಮುಂಬೈ ದಾಳಿ ಪಾತಕಿ ಡೇವಿಡ್ ಹೆಡ್ಲಿ ಬಾಯ್ಬಿಟ್ಟ ಸತ್ಯಗಳು

Subscribe to Oneindia Kannada

ಮುಂಬೈ, ಫೆಬ್ರವರಿ, 13: ಮುಂಬೈ ಉಗ್ರರ ದಾಳಿ 26/11 ರೂವಾರಿ ಡೇವಿಡ್ ಹೆಡ್ಲಿ ಸುದೀರ್ಘ ವಿಚಾರಣೆ ನಡೆಯುತ್ತಿದ್ದು ಅನೇಕ ಸ್ಫೋಟಕ ಮಾಹಿತಿಗಳನ್ನು ಬಾಯಿ ಬಿಡುತ್ತಿದ್ದಾನೆ. ಉಗ್ರರರಿಗೆ ಸಂಬಂಧಿಸಿದ ಟೇಪ್ ನಲ್ಲಿರುವ ಧ್ವನಿಯನ್ನು ಗುರುತಿಸಿದ್ದಾನೆ.

ಐಸ್ಐಎಸ್ ಐಗೆ ಪೂರ್ಣ ಮಾಹಿತಿ ನೀಡಲು ಭಾರತೀಯ ಸೇನೆಯಲ್ಲಿ ಒಬ್ಬ ಗೂಢಚಾರಿಯನ್ನು ನೇಮಕ ಮಾಡು ಎಂದು ಐಎಸ್ ಐ ಮೇಜರ್ ಇಕ್ಬಾಲ್ ಸೂಚಿಸಿದ್ದರು. ಸಿದ್ದಿವಿನಾಯಕ ದೇವಾಲಯ ಮತ್ತು ನೌಕಾ ವಾಯುನೆಲೆ ಮೇಲೆ ದಾಳಿ ನಡೆಸುವ ಎಲ್ ಇಟಿ ಪ್ರಯತ್ನವನ್ನು ನಾನೇ ತಡೆದಿದ್ದೆ. ಎಲ್ಲಾ ಹತ್ತು ಉಗ್ರರು ಒಂದೇ ಸ್ಥಳದ ಮೇಲೆ ಗಮನ ಕೇಂದ್ರಿಕರಿಸಬೇಕು ಎಂದು ತಿಳಿಸಿದ್ದೆ ಎಂದು ಹೇಳಿದ್ದಾನೆ.[ಡೇವಿಡ್ ಹೆಡ್ಲಿ ಹೇಳಿದ ರೋಚಕ ಸತ್ಯಗಳು]

mumbai

ಲಷ್ಕರ್ ಇ ತೋಯ್ಬಾದ ಕಮಾಂಡರ್ ಹಫೀಜ್ ಸಯೀದ್ ಮತ್ತು ಕಾರ್ಯಾಚರಣೆ ಕಮಾಂಡರ್ ಝಕೀರ್ ರೆಹಮಾನ್ ಲಖ್ವಿಯನ್ನು ಭೇಟಿ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಮುಂದಿನ ವಿಚಾರಣೆಯನ್ನು ಫೆಬ್ರವರಿ 22 ಕ್ಕೆ ಕಾಯ್ದಿರಿಸಲಾಗಿದೆ.[ಮುಂಬೈ ದಾಳಿ ರುವಾರಿ ಹೆಡ್ಲಿಗೆ 35 ವರ್ಷ ಶಿಕ್ಷೆ]

ಡೆಡ್ಲಿ ಬಾಯಿಬಿಟ್ಟ ಸತ್ಯಗಳು
* ಭಾರತದ ಸೇನಾ ಅಧಿಕಾರಿಗಳನ್ನು ಸೇನಾ ನಮ್ಮ ಕೆಲಸಕ್ಕೆ ಬಳಸಿಕೊಳ್ಳಬೇಕು ಎಂಬ ಆಲೋಚನೆ ಹೊಂದಿದ್ದೆವು.
* ಅಧಿಕಾರಿಗಳನ್ನು ನೇಮಕ ಮಾಡಿಕೊಂಡು, ಅವರಿಂದಲೇ ಮಾಹಿತಿ ಕಲೆ ಹಾಕುವ ಇರಾದೆಯನ್ನೂ ಪಾಕಿಸ್ತಾನದ ಐಎಸ್ಐ ಹೊಂದಿತ್ತು.[ಇಶ್ರತ್ ಜಹಾನ್ ಲಷ್ಕರ್ ನ ಮಾನವ ಬಾಂಬರ್]
* 2009ರ ಮಾರ್ಚ್ 16 ಮತ್ತು 17 ರ ದಿನಾಂಕದ ನಡುವೆ ದಾಳಿ ಮಾಡಬೇಕು ಎಂಬ ಕಟ್ಟಡಗಳ ಸಮೀಕ್ಷೆ ನಡೆಸಿ, ವಿಡಿಯೋ ಮಾಡಿಕೊಂಡಿದ್ದೆ. ಅದಕ್ಕೂ ಮೊದಲು ಮಾರ್ಚ್ 15ರಂದು ಗೋವಾದ ಚಾಬಾದ್ ಹೌಸ್, ಮಾರ್ಚ್ 11, 13ರಂದು ಪುಷ್ಕರ್ ನಲ್ಲಿ ಬೇಟಿ ನೀಡಿದ್ದೆ.
* ಪುಣೆಯ ವಾಯುನೆಲೆಯ ವಿಡಿಯೋ ಮಾಡಿ ಅದನ್ನು ಇಕ್ಬಾಲ್ ಗೆ ಹಸ್ತಾಂತರಿಸಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
On Day 6 David Headley deposed before the Mumbai court and informed that he had visited the Indian Army installation after Major Iqbal Rana asked him to do so. Here are the Day 6 updates of the terrorist on video conference.
Please Wait while comments are loading...