• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Mulayam Singh Yadav : ಮುಲಾಯಂ ಸಿಂಗ್ ಯಾದವ್ ಜೀವನ ಚರಿತ್ರೆ

|
Google Oneindia Kannada News

ಲಕ್ನೋ, ಅಕ್ಟೋಬರ್ 10: ಭಾರತ ಕಂಡ ಶ್ರೇಷ್ಠ ನಾಯಕರ ಪಂಕ್ತಿಯಲ್ಲಿ ನಿಲ್ಲುವ ಮತ್ತೊಬ್ಬ ನಾಯಕ ಸೋಮವಾರ ವಿಧಿವಶರಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಅಗ್ರಮಾನ್ಯ ನಾಯಕರಾಗಿ ಮಿಂಚಿದ ಮುಲಾಯಂ ಸಿಂಗ್ ಯಾದವ್ ಇಂದು ಮರೆಯಾಗಿದ್ದಾರೆ.

ಕಳೆದ ಕೆಲವು ವಾರಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮುಲಾಯಂ ಸಿಂಗ್ ಯಾದವ್ (82) ಸೋಮವಾರ ಉತ್ತರ ಪ್ರದೇಶ ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ವಿಧಿವಶರಾದರು. ಇವರು ಪತ್ನಿ ಸಾಧನಾ ಯಾದವ್ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

Breaking; ಮುಲಾಯಂ ಸಿಂಗ್ ಯಾದವ್ ನಿಧನBreaking; ಮುಲಾಯಂ ಸಿಂಗ್ ಯಾದವ್ ನಿಧನ

ಸಮಾಜವಾದಿ ಪಕ್ಷದ ಮೂಲಕ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಮುಲಾಯಂ ಸಿಂಗ್ ಹೋರಾಟದ ಹಾದಿ ಅಷ್ಟು ಸುಲಭವಾಗಿರಲಿಲ್ಲ. ರಾಷ್ಟ್ರೀಯ ಪಕ್ಷಗಳ ಎದುರು ಸೆಡ್ಡು ಹೊಡೆದು ನಿಲ್ಲುತ್ತಿದ್ದ ಸಮಾಜವಾದಿ ಪಕ್ಷದ ಈ ಮಾಸ್ ಲೀಡರ್, ರಾಜಕಾರಣ ವೈಖರಿ ಇತರ ನಾಯಕರಿಗಿಂತ ಭಿನ್ನವಾಗಿತ್ತು. ರಾಜಕಾರಣದೊಂದಿಗೆ ಮುಲಾಯಂ ಸಿಂಗ್ ಯಾದವ್ ನಡೆದು ಬಂದ ಬದುಕಿನ ದಾರಿ ಹೇಗಿತ್ತು ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ವರದಿಯಲ್ಲಿ ತಿಳಿದುಕೊಳ್ಳಿರಿ.

ಬಾಲ್ಯ ಮತ್ತು ಶೈಕ್ಷಣಿಕ ಬದುಕು

ಬಾಲ್ಯ ಮತ್ತು ಶೈಕ್ಷಣಿಕ ಬದುಕು

ಮುಲಾಯಂ ಸಿಂಗ್ ಯಾದವ್ 1939ರ ನವೆಂಬರ್ 21ರಂದು ಉತ್ತರ ಪ್ರದೇಶದ ಎತುವಾ ಜಿಲ್ಲೆಯ ಸೈಫೈ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಸುಘರ್ ಸಿಂಗ್ ಯಾದವ್ ತಾಯಿ ಮುರ್ತಿ ದೇವಿ. ಸ್ನಾತರೋತ್ತರ ಪದವಿ ವ್ಯಾಸಂಗ ಮಾಡಿರುವ ಇವರು, ಕೃಷಿ, ಸಾಮಾಜಿಕ ಸೇವೆ ಹಾಗೂ ರಾಜಕೀಯದಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದರು.

ಮುಲಾಯಂ ಸಿಂಗ್ ಯಾದವ್ ರಾಜಕೀಯ ಹಾದಿ

ಮುಲಾಯಂ ಸಿಂಗ್ ಯಾದವ್ ರಾಜಕೀಯ ಹಾದಿ

ಸಮಾಜವಾದಿ ಪಕ್ಷದ ಸಂಸ್ಥಾಪಕರಾದ ಮುಲಾಯಂ ಸಿಂಗ್ ಯಾದವ್ ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿರುವ ಭಾರತೀಯ ರಾಜಕಾರಣಿಗಳ ಸಾಲಿಗೆ ಸೇರುತ್ತಾರೆ. ಅವರು 1989 ರಿಂದ 1991, 1993 ರಿಂದ 1995 ಮತ್ತು 2003 ರಿಂದ 2007ರವರೆಗೆ ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ತಂದೆಯಾಗಿರುವ ಮುಲಾಯಂ ಸಿಂಗ್ ಯಾದವ್, ಪ್ರಸ್ತುತ ಅಜಂಗಢ ಕ್ಷೇತ್ರದ ಸಂಸದರಾಗಿದ್ದರು. ಅವರು 1996-1998ರಲ್ಲಿ ಭಾರತದ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದರು. 1974-2007 ರ ನಡುವೆ ಏಳು ಅವಧಿಗೆ ಉತ್ತರ ಪ್ರದೇಶದ ಶಾಸಕರಾಗಿ ಆಯ್ಕೆಯಾಗಿದ್ದರು. ಮುಲಾಯಂ ಸಿಂಗ್ 1992ರಲ್ಲಿ ಸ್ಥಾಪಿಸಿದ ರಾಜಕೀಯ ಪಕ್ಷವಾದ ಸಮಾಜವಾದಿ ಪಕ್ಷದಲ್ಲಿ ಅಂತಿಮವಾಗಿ ತಮ್ಮ ಟೋಪಿಯನ್ನು ನೇತುಹಾಕಲು ನಿರ್ಧರಿಸುವವರೆಗೂ ವಿವಿಧ ರಾಜಕೀಯ ಪಕ್ಷಗಳೊಂದಿಗೆ ವಿಚಿತ್ರವಾದ ಮೈತ್ರಿಯನ್ನು ಹೊಂದಿದ್ದರು.

ಮುಲಾಯಂ ರಾಜಕೀಯದ ಪ್ರಮುಖ ಘಟನಾವಳಿಗಳು

ಮುಲಾಯಂ ರಾಜಕೀಯದ ಪ್ರಮುಖ ಘಟನಾವಳಿಗಳು

* 1974 ರಲ್ಲಿ ಮುಲಾಯಂ ಸಿಂಗ್ ಯಾದವ್ ಜಸ್ವಂತ್‌ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಕೆಡಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರು, ಅಲ್ಲಿ ವಿಶಂಭರ್ ಸಿಂಗ್ ಯಾದವ್ ಅವರನ್ನು 14,258 ಮತಗಳ ಅಂತರದಿಂದ ಸೋಲಿಸಿದರು.

* 1977 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಜಸ್ವಂತನಗರ ಕ್ಷೇತ್ರದಿಂದ ಮತ್ತೊಮ್ಮೆ ಜೆಎನ್‌ಡಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಸ್ವತಂತ್ರ ಗೋರಿ ಲಾಲ್ ಶಾಕ್ಯಾ ಅವರನ್ನು ಸೋಲಿಸುವ ಮೂಲಕ ವಿಜಯಶಾಲಿಯಾಗಿದ್ದು, ಶೇ.64.62% ಮತಗಳನ್ನು ಗಳಿಸಿದರು.

* 1985ರಲ್ಲಿ ಎಲ್‌ಕೆಡಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಸ್ವಂತನಗರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಮರು ಆಯ್ಕೆಯಾದರು. ಅವರು ಶಿವರಾಜ್ ಸಿಂಗ್ ಯಾದವ್ ಅವರನ್ನು ಸೋಲಿಸಿದ್ದು, ಶೇ.57.32ರಷ್ಟು ಮತಗಳನ್ನು ಪಡೆದರು.

* 1989ರಲ್ಲಿ ಅವರು ಐಎನ್‌ಸಿಯ ದರ್ಶನ್ ಸಿಂಗ್ ಅವರನ್ನು ಶೇ.59.26% ಮತಗಳೊಂದಿಗೆ ಸೋಲಿಸುವ ಮೂಲಕ ಜಸ್ವಂತನಗರ ಕ್ಷೇತ್ರದ ಶಾಸಕರಾಗಿ ಮತ್ತೊಮ್ಮೆ ಆಯ್ಕೆಯಾದರು.

* 1989ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಿ ಆಯ್ಕೆಯಾದರು.

* 1991ರಲ್ಲಿ ಮುಲಾಯಂ ಸಿಂಗ್ ಯಾದವ್ ವಿಧಾನಸಭಾ ಚುನಾವಣೆಯಲ್ಲಿ ಎರಡನೇ ಬಾರಿಗೆ ದರ್ಶನ್ ಸಿಂಗ್ ಅವರನ್ನು ಸೋಲಿಸಿ ಮರು ಆಯ್ಕೆಯಾದರು.

* 1993 ರಲ್ಲಿ ಅವರು ನಿಧೌಲಿ ಕಲಾನ್ ಕ್ಷೇತ್ರದಿಂದ ಎಸ್‌ಪಿ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಬಿಜೆಪಿಯ ಸುಧಾಕರ್ ವರ್ಮಾ ಅವರನ್ನು 7063 ಮತಗಳ ಅಂತರದಿಂದ ಸೋಲಿಸಿದರು.

* 1993 ರಲ್ಲಿ ಎರಡನೇ ಅವಧಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಮುಲಾಯಂ ಸಿಂಗ್ ಆಯ್ಕೆಯಾದರು.

* 1996 ರಲ್ಲಿ ಮುಲಾಯಂ ಸಹಸ್ವಾನ್ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು, ಶೇ.61.92ರಷ್ಟು ಮತಗಳನ್ನು ಗಳಿಸಿದರು.

* 1996 ರಲ್ಲಿ ಮೈನ್‌ಪುರಿ ಕ್ಷೇತ್ರದಿಂದ ಬಿಜೆಪಿಯ ಉಪದೇಶ್ ಸಿಂಗ್ ಚೌಹಾಣ್ ಅವರನ್ನು 51,958 ಮತಗಳ ಅಂತರದಿಂದ ಸೋಲಿಸುವ ಮೂಲಕ 11ನೇ ಲೋಕಸಭೆಗೆ ಸ್ಪರ್ಧಿಸಿ ಆಯ್ಕೆಯಾದರು.

* 1998ರಲ್ಲಿ ಸಂಭಾಲ್ ಕ್ಷೇತ್ರದಿಂದ 12ನೇ ಲೋಕಸಭೆ ಚುನಾವಣೆಗೆ ಚುನಾಯಿತರಾದರು, ಅಲ್ಲಿ ಅವರು ಡಿ.ಪಿ ಯಾದವ್ ಅವರನ್ನು 1,66,628 ಮತಗಳ ಅಂತರದಿಂದ ಸೋಲಿಸಿದರು.

* 1999ರಲ್ಲಿ 13ನೇ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಕನ್ನೌಜ್ ಕ್ಷೇತ್ರದಿಂದ 2,91,617 ಮತಗಳನ್ನು ಪಡೆದು ಮರು ಆಯ್ಕೆಯಾದರು.

* 2003ರಲ್ಲಿ ಮೂರನೇ ಅವಧಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.

* 2004ರಲ್ಲಿ ಮೈನ್‌ಪುರಿ ಕ್ಷೇತ್ರದಿಂದ 14ನೇ ಬಾರಿ ಲೋಕಸಭೆಗೆ ಆಯ್ಕೆಯಾದರು, ಅಲ್ಲಿ ಬಿಎಸ್‌ಪಿಯ ಅಶೋಕ್ ಶಾಕೇಯಾ ಅನ್ನು 3,37,870 ಮತಗಳ ಅಂತರದಿಂದ ಸೋಲಿಸಿದರು. ಅವರು ರಾಜೀನಾಮೆ ನೀಡಿದ ಅದೇ ವರ್ಷದಲ್ಲಿ ಉಪಚುನಾವಣೆಗಳು ನಡೆದವು, ಅಲ್ಲಿ ಎಸ್ಪಿಯ ಧರ್ಮೇಂದ್ರ ಯಾದವ್ ಅವರು ಗೆದ್ದರು.

* 2009ರಲ್ಲಿ 15ನೇ ಬಾರಿ ಲೋಕಸಭೆ ಚುನಾವಣೆಯಲ್ಲಿ ಮೈನ್‌ಪುರಿ ಕ್ಷೇತ್ರದಿಂದ ಆಯ್ಕೆಯಾದರು.

* 2009ರಲ್ಲಿ ಗನ್ನೂರು ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು.

* 2014ರಲ್ಲಿ ಅಜಂಗಢ ಕ್ಷೇತ್ರದ ಹಾಲಿ ಸಂಸದರಾಗಿ, ಬಿಜೆಪಿಯ ರಮಾಕಾಂತ್ ಯಾದವ್ ಅನ್ನು 63,204 ಮತಗಳ ಅಂತರದಿಂದ ಸೋಲಿಸಿದರು.

* 2014ರಲ್ಲಿ ಗೃಹ ವ್ಯವಹಾರಗಳ ಸಚಿವಾಲಯದ ಕಾರ್ಮಿಕ ಮತ್ತು ಸಲಹಾ ಸಮಿತಿಯ ಸ್ಥಾಯಿ ಸಮಿತಿಯ ಸದಸ್ಯರಾದರು.

* 29 ಜನವರಿ 2015 ರಂದು, ಅವರು ಸಾಮಾನ್ಯ ಉದ್ದೇಶಗಳ ಸಮಿತಿಯ ಸದಸ್ಯರಾದರು.

 ಮುಲಾಯಂ ಸಿಂಗ್ ಹೊಂದಿರುವ ಆಸ್ತಿ ಎಷ್ಟು?

ಮುಲಾಯಂ ಸಿಂಗ್ ಹೊಂದಿರುವ ಆಸ್ತಿ ಎಷ್ಟು?

ಒಟ್ಟು ಆಸ್ತಿ ಮೌಲ್ಯ: 20.56 ಕೋಟಿ ರು(2014ರಲ್ಲಿ 15.95 ಕೋಟಿ ರು)

ಸ್ಥಿರಾಸ್ತಿ: 16.21 ಕೋಟಿ ರು(2014ರಲ್ಲಿ 12.54 ಕೋಟಿ ರು)

ಚರಾಸ್ತಿ: 4.34 ಕೋಟಿ ರು (2014ರಲ್ಲಿ 3.41 ಕೋಟಿ ರು)

ಬಂಡವಾಳ ಹೂಡಿಕೆ : 50.09 ಲಕ್ಷ ರು

ಬ್ಯಾಂಕಿನಲ್ಲಿ ಠೇವಣಿ :

40.13 ಲಕ್ಷ ರು (11.25 ಲಕ್ಷ ಮುಲಾಯಂ ಹಾಗೂ 28.88 ಲಕ್ಷ ರು ಪತ್ನಿ ಹೆಸರಿನಲ್ಲಿ )

ಸಾಲ : 2.20 ಕೋಟಿ ರು

ಕ್ರಿಮಿನಲ್ ಕೇಸ್ : ಲಕ್ನೋದಲ್ಲಿ 1 ಕ್ರಿಮಿನಲ್ ಮೊಕದ್ದಮೆ.

ಜಮೀನು :

* 10.77 ಎಕರೆ 7.89 ಕೋಟಿ ರು ಮೌಲ್ಯ

* 5,000 ಚದರ ಅಡಿ, 5974 ಚದರ ಅಡಿ ನಿವೇಶನ

* 16,010 ಚದರಡಿ ಹಾಗೂ 3230 ಚದರಡಿ ಎರಡು ಮನೆ.

ಮುಲಾಯಂ ಸಿಂಗ್ ಯಾದವ್
Know all about
ಮುಲಾಯಂ ಸಿಂಗ್ ಯಾದವ್
English summary
Mulayam Singh Yadav Age, Caste, Family, Education, Net Worth and Political Career. Know More. ಮುಲಾಯಂ ಸಿಂಗ್ ಯಾದವ್ ವಯಸ್ಸು, ಜಾತಿ, ಕುಟುಂಬ, ಶಿಕ್ಷಣ, ನಿವ್ವಳ ಮೌಲ್ಯ ಮತ್ತು ರಾಜಕೀಯ ವೃತ್ತಿ. ಇನ್ನಷ್ಟು ತಿಳಿಯಿರಿ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X