ಕತುವಾ ಪ್ರಕರಣ: ಮುಫ್ತಿ ರಾಜೀನಾಮೆಗೆ ಬಿಜೆಪಿ ಮಾಜಿ ಸಚಿವರ ಆಗ್ರಹ

Posted By:
Subscribe to Oneindia Kannada

ಕತುವಾ, ಏಪ್ರಿಲ್ 16: ಕತುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಬಿಜೆಪಿ ಸಚಿವರೊಬ್ಬರು ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ರಾಜೀನಾಮೆಗೆ ಆಗ್ರಹಿಸಿದ್ದಾರೆ.

ಕತುವಾ ಅತ್ಯಾಚಾರ ಪ್ರಕರಣದ ನಂತರ ಆರೋಪಿಗಳನ್ನು ಬೆಂಬಲಿಸಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಜೆಪಿಯ ಇಬ್ಬರು ಸಚಿವರು ಕಾಣಿಸಿಕೊಂಡು ವಿವಾದ ಸೃಷ್ಟಿಸಿದ್ದರು. ಇದರಿಂದಾಗಿ ತಮ್ಮ ಮಂತ್ರಿ ಸ್ಥಾನವನ್ನೂ ಕಳೆದುಕೊಂಡಿದ್ದರು.

ಕತುವಾ ಅತ್ಯಾಚಾರ ಖಂಡಿಸಿ ದೇಶ್ಯಾದ್ಯಂತ ತೀವ್ರಗೊಂಡ ಹೋರಾಟ:ಚಿತ್ರಗಳು

ಲಾಲ್ ಸಿಂಗ್ ಮತ್ತು ಚಂದ್ರ ಪ್ರಕಾಶ್ ಗಂಗಾ ಎಂಬ ಈ ಇಬ್ಬರು ಸಚಿವರು, 'ದೇಶದಲ್ಲಿ ಸಾಕಷ್ಟು ಮಹಿಳೆಯರ ಮೇಲೆ ಇಂಥ ದೌರ್ಜನ್ಯ ನಡೆಯುತ್ತದೆ. ಆದರೆ ಯಾವ ಪ್ರಕರಣದಲ್ಲೂ ತೋರದ ಮುತುವರ್ಜಿ ಈ ಪ್ರಕರಣಕ್ಕೆ ಏಕೆ?' ಎಂದು ಪ್ರಶ್ನಿಸಿದ್ದಾರೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಜಮ್ಮು ಕಾಶ್ಮೀರದಲ್ಲಿ ಜಂಗಲ್ ರಾಜ್ ಆರಂಭವಾಗಿದೆ. ಮೊದಲು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ರಾಜೀನಾಮೆ ನೀಡಬೇಕು ಎಂದು ಲಾಲ್ ಸಿಂಗ್ ಆಗ್ರಹಿಸಿದ್ದಾರೆ.

Mufti shoud resign: Resigned BJP Minister over Kathua rape and murder case

ನಮಗೂ ಮಹಿಳೆಯರ ಬಗ್ಗೆ ಗೌರವವಿದೆ. ಈ ದೇಶದ ಮಹಿಳೆಯರು ಸುರಕ್ಷಿತವಾಗಿರಬೇಕು ಎಮಬ ಕಳಕಳಿಯಿದೆ. ಆದರೆ ತನಿಖೆ ಪೂರ್ವಗ್ರಹ ಪೀಡಿತವಾಗಿರಬಾರದು. ಈ ಪ್ರಕರಣವನ್ನು ಸೂಕ್ತವಾಗಿ ನಿರ್ವಹಿಸಲು ಸಾಧ್ಯವಾಗದ ಕಾರಣಕ್ಕೆ ನೈತಿಕ ಹೊಣೆ ಹೊತ್ತು ಮುಫ್ತಿ ರಾಜೀನಾಮೆ ನೀಡಬೇಕು ಎಂದು ಅವರು ಹೇಳಿದ್ದಾರೆ.

ಸಮವಸ್ತ್ರವೇ ನನ್ನ ಧರ್ಮ ಎನ್ನುತ್ತಾರೆ ಈ ಅಧಿಕಾರಿಣಿ

ಜನವರಿ ತಿಂಗಳಿನಲ್ಲಿ ಎಂತು ವರ್ಷದ ಬಾಲಕಿಯನ್ನು ಅಪಹರಿಸಿ, ದೇವಾಲಯವೊಂದರಲ್ಲಿ ಮತ್ತು ಬರುವ ಔಷಧ ನೀಡಿ ಹಲವು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣ ಇದಾಗಿದೆ. ಈ ಸಂಬಂಧ ಈಗಾಗಲೇ ಜಮ್ಮು-ಕಾಶ್ಮೀರ ಸರ್ಕಾರ ಎಂಟು ಜನರನ್ನು ಬಂಧಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kathua Rape and Murder case: After resigning from the Jammu and Kashmir government former BJP minister Lal Singh said that Chief Minister Mehbooba Mufti must take responsibility of the incident and quit.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ