ಮಧ್ಯಪ್ರದೇಶ ಸೇರಿ 10 ರಾಜ್ಯದಲ್ಲಿ ರಾಷ್ಟ್ರೀಯ ಸರಾಸರಿಗೂ ಅಧಿಕ ಆರ್‌ ಮೌಲ್ಯ: ದೇಶದಲ್ಲಿ 1 ಕ್ಕೆ ಏರಿಕೆ

ನವದೆಹಲಿ, ಆ.07: ಹೆಚ್ಚು ಸಾಂಕ್ರಾಮಿಕವೆಂದು ಪರಿಗಣಿಸಲ್ಪಟ್ಟಿರುವ ಕೊರೊನಾ ವೈರಸ್‌ ಸೋಂಕಿನ ಡೆಲ್ಟಾ ರೂಪಾಂತರವು ಒಂದು ತಿಂಗಳ ಹಿಂದೆ 0.93 ರಷ್ಟಿದ್ದ ಭಾರತದ ಆರ್‌ ಮೌಲ್ಯವನ್ನು ಒಂದಕ್ಕಿಂತ ಅಧಿಕ ಆರ್‌ ಮೌಲ್ಯದತ್ತ ತಳ್ಳಿದೆ. ಕೊರೊನಾ ಸೋಂಕಿತ ವ್ಯಕ್ತಿಯಿಂದ ಹರಡಿ ಕೊರೊನಾ ವೈರಸ್‌ ಸೋಂಕಿಗೆ ತುತ್ತಾಗುವ ಸರಾಸರಿ ಜನರ ಸಂಖ್ಯೆಯನ್ನು ಆರ್‌ ಮೌಲ್ಯ ಸೂಚಿಸುತ್ತದೆ.

ಕೊರೊನಾವೈರಸ್‌ ಪ್ರಕರಣಗಳು ವೇಗವಾಗಿ ಬೆಳೆಯುತ್ತಿವೆಯೇ ಅಥವಾ ತ್ವರಿತವಾಗಿ ಕುಗ್ಗುತ್ತಿವೆಯೇ ಎಂದು ಪರೀಕ್ಷಿಸಲು ಆರ್ ಮೌಲ್ಯವನ್ನು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಮತ್ತು ನೀತಿ ನಿರೂಪಕರು ಬಳಸುತ್ತಿದ್ದಾರೆ. ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ಪ್ರಕಾರ ಆರ್‌ ಮೌಲ್ಯವು ಒಂದಕ್ಕಿಂತ ಕಡಿಮೆ ಇರಬೇಕು ಹಾಗೂ ಒಂದನ್ನು ದಾಟಿದರೆ ಹೆಚ್ಚು ಅಪಾಯ. ಆದರೆ ಭಾರತದಲ್ಲಿ, ಪ್ರಸ್ತುತ ದರ 1.01 ರಲ್ಲಿದೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ವೆಲ್ಲೂರು ಮೂಲದ ಹಿರಿಯ ವೈರಾಲಜಿಸ್ಟ್ ಡಾ ಟಿ ಜೇಕಬ್ ಜಾನ್‌, "ಪ್ರಸ್ತುತ ದೇಶದಲ್ಲಿ ಆರ್‌ ಮೌಲ್ಯವು 1.01 ರಷ್ಟು ಇದೆ. ಇದರರ್ಥ ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ವ್ಯಕ್ತಿಗಳಿಗೆ ಕೊರೊನಾ ವೈರಸ್‌ ಸೋಂಕು ಹರಡಬಲ್ಲ ಎಂಬುವುದಾಗಿದೆ," ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

MP including 10 States Above National Average; Indias R Value Gradually Surges to 1

ದೇಶದಲ್ಲಿ ಮಾರ್ಚ್‌ನಲ್ಲಿ, ಆರ್ ಮೌಲ್ಯವು1.4 ರಷ್ಟಿತ್ತು. ಆದರೆ ದೇಶದಲ್ಲಿ ಕೋವಿಡ್‌ನ ಎರಡನೇ ಅಲೆಯು ಉತ್ತುಂಗಕ್ಕೆ ಏರುತ್ತಲ್ಲಿದ್ದ ಸಂದರ್ಭದಲ್ಲಿ ಅಂದರೆ ಮೇ ತಿಂಗಳಿನಲ್ಲಿ ದೇಶದಲ್ಲಿ ಪ್ರಸರಣ ಮೌಲ್ಯವಾದ ಆರ್‌ ಮೌಲ್ಯವು 0.7 ಕ್ಕೆ ಇಳಿಯಿತು. ಆದರೆ ಈಗ ಮತ್ತೆ ಆರ್‌ ಮೌಲ್ಯವು ಅಧಿಕಗೊಂಡಿದೆ. ಈ ಸಂಖ್ಯೆಯು ಚಿಂತೆಗೆ ಕಾರಣವಾದರೂ, ಆರ್ ಮೌಲ್ಯ ಹೆಚ್ಚುತ್ತಿರುವುದರಿಂದ ರಾಜ್ಯ ಅಥವಾ ಜಿಲ್ಲೆಯನ್ನು ಕೆಂಪು ವಲಯ ಮಾಡಲು ಸಾಧ್ಯವಿಲ್ಲ ಎಂದು ತಜ್ಞರು ಹೇಳುತ್ತಾರೆ.

ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ನಿರ್ದೇಶಕ ಡಾ.ಮನೋಜ್ ಮುರ್ಹೇಕರ್, ''ಕೊರೊನಾ ವೈರಸ್‌ ಸೋಂಕಿನ ಬೆಳವಣಿಗೆ ದರ, ಹೆಚ್ಚುತ್ತಿರುವ ಸಾವುಗಳು ಮತ್ತು ಆಸ್ಪತ್ರೆಯ ಆಕ್ಯುಪೆನ್ಸಿ ದರ ಸೇರಿದಂತೆ ಕೋವಿಡ್‌ ಸಾಂಕ್ರಾಮಿಕ ರೋಗಗಳ ಅಂಶಗಳ ಸಂಯೋಜನೆಯು ಅಪಾಯವನ್ನು ವಿವರಿಸುತ್ತದೆ. ಪ್ರಸ್ತುತ, ಕನಿಷ್ಠ 10 ರಾಜ್ಯಗಳು ರಾಷ್ಟ್ರೀಯ ಸರಾಸರಿ 1.01 ಗಿಂತ ಹೆಚ್ಚಿನ ಆರ್ ಮೌಲ್ಯವನ್ನು ಹೊಂದಿವೆ. ದೆಹಲಿ ಮತ್ತು ಮಹಾರಾಷ್ಟ್ರಗಳು ರಾಷ್ಟ್ರೀಯ ಸರಾಸರಿಗೆ ಹತ್ತಿರವಾಗಿವೆ," ಎಂದು ಹೇಳಿದರು.

ಮಧ್ಯಪ್ರದೇಶ ರಾಜ್ಯದ ಅತ್ಯಧಿಕ ಆರ್ ಮೌಲ್ಯವು 1.31 ರಷ್ಟು ಆಗಿದೆ. ಹಾಗೆಯೇ ಹಿಮಾಚಲ ಪ್ರದೇಶದ ಆರ್‌ ಮೌಲ್ಯವು 1.3 ರಷ್ಟಿದೆ. ಇನ್ನು ನಾಗಾಲ್ಯಾಂಡ್ ಆರ್‌ ಮೌಲ್ಯ 1.09 ರಷ್ಟು ಆಗಿದೆ. ಈ ರಾಜ್ಯಗಳಲ್ಲಿ ಆರ್‌ ಮೌಲ್ಯವು ಒಂದು ರಾಜ್ಯವನ್ನು ಮತ್ತೊಂದು ರಾಜ್ಯ ಮೀರಿಸುವಂತಿದೆ. ಆದರೆ ಈ ನಡುವೆ ದೇಶದಲ್ಲೇ ಅಧಿಕ ದೈನಂದಿನ ಕೊರೊನಾ ವೈರಸ್‌ ಸೋಂಕು ಪ್ರಕರಣಗಳನ್ನು ವರದಿ ಮಾಡುತ್ತಿರುವ ಕೇರಳ ರಾಜ್ಯದಲ್ಲಿ ಆರ್‌ ಮೌಲ್ಯವು ಈ ರಾಜ್ಯಗಳಿಗಿಂತ ಕಡಿಮೆ ಇದೆ. ಕೇರಳದ ಪ್ರಸ್ತುತ ಆರ್‌ ಮೌಲ್ಯವು 1.06 ರಷ್ಟಿದೆ.

ಆದಾಗ್ಯೂ, ಪ್ರತಿ ರಾಜ್ಯದಲ್ಲಿನ ಆರ್ ಮೌಲ್ಯಗಳಿಗೆ ಅಪಾಯದ ಅಂಶವನ್ನು ಈ ಅನುಪಾತವು ಹೊಂದಿಲ್ಲ. ಅತಿ ಹೆಚ್ಚು ಆರ್ ಮೌಲ್ಯ ಹೊಂದಿರುವ ಮಧ್ಯಪ್ರದೇಶವು ದಿನಕ್ಕೆ 30 ಕ್ಕಿಂತ ಕಡಿಮೆ ಕೊರೊನಾ ವೈರಸ್‌ ಪ್ರಕರಣಗಳನ್ನು ವರದಿ ಮಾಡುತ್ತಿದೆ ಎಂದು ವರದಿ ಹೇಳಿದೆ. ಮತ್ತೊಂದೆಡೆ ತಮಿಳುನಾಡಿನಂತಹ ಕೆಲವು ರಾಜ್ಯಗಳು ಕೊರೊನಾ ವೈರಸ್‌ ಸೋಂಕು ಬೆಳವಣಿಗೆ ದರವನ್ನು ಹೆಚ್ಚಿಸಿವೆ. ತಮಿಳುನಾಡಿನಲ್ಲಿ ಅಧಿಕ ಕೊರೊನಾ ವೈರಸ್‌ ಪ್ರಕರಣಗಳು ದಾಖಲಾಗುತ್ತಿದೆ.

ಇನ್ನು ಹಲವಾರು ರಾಜ್ಯಗಳಲ್ಲಿ ಕೊರೊನಾ ವೈರಸ್‌ ಪ್ರಕರಣಗಳು ಒಮ್ಮೆ ತೀವ್ರ ಹೆಚ್ಚಳ, ಒಮ್ಮೆ ಇಳಿಕೆ ಕಾಣುತ್ತಲಿದೆ. ಹಾಗಾಗಿ ಕೊರೊನಾ ವೈರಸ್‌ ಪ್ರಕರಣಗಳ ನಿರಂತರ ಏರಿಕೆ ಆಗುವವರೆಗೂ ಮೂರನೇ ಕೋವಿಡ್‌ ಅಲೆ ಪ್ರಾರಂಭ ಆಗಿದೆ ಎಂದು ಹೇಳಲಾಗದು ಎಂದು ತಜ್ಞರು ಹೇಳುತ್ತಾರೆ.

(ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+