ಸ್ಟೇಷನಿಗೆ ಬೆಂಕಿ ಹಚ್ಚಿ: ಮಧ್ಯಪ್ರದೇಶ ಕಾಂಗ್ರೆಸ್ ಮುಖಂಡರ ಪ್ರಚೋದನೆ?

ಮಧ್ಯಪ್ರದೇಶದಲ್ಲಿ ರೈತರ ಹಿಂಸಾತ್ಮಕ ಹೋರಾಟದ ಹಿಂದೆ ವಿರೋಧ ಪಕ್ಷ ಕಾಂಗ್ರೆಸ್ ಮುಖಂಡರ 'ಕೈ'ವಾಡವಿದೆಯೇ? ಇದಕ್ಕೆ ಪುಷ್ಟಿ ನೀಡುವ ವಿಡಿಯೋ ಒಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ಭೋಪಾಲ್, ಜೂ 10: ಮಧ್ಯಪ್ರದೇಶದಲ್ಲಿ ರೈತರ ಹಿಂಸಾತ್ಮಕ ಹೋರಾಟದ ಹಿಂದೆ ವಿರೋಧ ಪಕ್ಷ ಕಾಂಗ್ರೆಸ್ ಮುಖಂಡರ 'ಕೈ'ವಾಡವಿದೆಯೇ? ಇದಕ್ಕೆ ಪುಷ್ಟಿ ನೀಡುವ ವಿಡಿಯೋ ಒಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ಮಧ್ಯಪ್ರದೇಶ ಕಾಂಗ್ರೆಸ್ ಘಟಕದ ಇಬ್ಬರು ಮುಖಂಡರು, ಪೊಲೀಸ್ ಸ್ಟೇಷನಿಗೆ ಬೆಂಕಿ ಹಚ್ಚಿ ಎಂದು ಪ್ರಚೋದಿಸುವ ದೃಶ್ಯದ ತುಣುಕು ಬಹಿರಂಗಗೊಂಡಿದೆ. ಆದರೆ, ರೈತರ ಹಿಂಸಾತ್ಮಕ ಹೋರಾಟಕ್ಕೂ ನಮಗೂ ಸಂಬಂಧವಿಲ್ಲ ಎಂದು ಕಾಂಗ್ರೆಸ್ ಹೇಳಿದೆ.

MP farmers' protest: Congress MLAs caught on camera inciting violence

ಮಧ್ಯಪ್ರದೇಶದ ಕರೈನಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಶಕುಂತಳಾ ಖಾತಿಕ್, ಸ್ಥಳೀಯ ಪೊಲೀಸ್ ಸ್ಟೇಷನಿಗೆ ಬೆಂಕಿ ಹಚ್ಚಿ ಎಂದು ಶಿವಪುರಿಯಲ್ಲಿ ಹೇಳಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಪೊಲೀಸರ ಜೊತೆ ತೀವ್ರ ವಾಗ್ವಾದ ನಡೆಸುತ್ತಿದ್ದ ಈ ಶಾಸಕಿಯನ್ನು ಅಲ್ಲಿಂದ ಕಳುಹಿಸುವಲ್ಲಿ ಪೊಲೀಸರು ತೀವ್ರ ತ್ರಾಸ ಪಡಬೇಕಾಯಿತು. ಠಾಣೆಪೇ ಆಗ್ ಲಗಾದೋ ಎಂದು ಎರಡೆರಡು ಬಾರಿ ಶಾಸಕಿ ಶಕುಂತಳಾ, ಪ್ರತಿಭಟನಾಕಾರರಿಗೆ ಪ್ರಚೋದಿಸುತ್ತಿದ್ದದ್ದು ಸೆರೆಯಾಗಿದೆ.

ಇನ್ನೊಂದು ವಿಡಿಯೋದಲ್ಲಿ ಕಾಂಗ್ರೆಸ್ಸಿನ ರಾವ್ ಕ್ಷೇತ್ರದ ಶಾಸಕ ಜೀತು ಪತ್ವಾರಿ ತನ್ನ ಅಪಾರ ಬೆಂಬಲಿಗರೊಂದಿಗೆ ಬಂದು, ಎಪಿಎಂಸಿ ಮಾರುಕಟ್ಟೆಯನ್ನು ಧ್ವಂಸಗೊಳಿಸುವ ದೃಶ್ಯಕೂಡಾ ವಿಡಿಯೋದಲ್ಲಿ ಸೆರೆಯಾಗಿದೆ.

ನಾವು ಮಹಾತ್ಮ ಗಾಂಧಿಯವರ ಸಿದ್ದಾಂತವನ್ನು ಪಾಲಿಸಿಕೊಂಡು ಬರುವವರು, ಹಿಂಸಾತ್ಮಕ ಹೋರಾಟದಲ್ಲಿ ನಮಗೆ ನಂಬಿಕೆಯಿಲ್ಲ ಎಂದು ಮಧ್ಯಪ್ರದೇಶ ಅಸೆಂಬ್ಲಿಯ ವಿರೋಧ ಪಕ್ಷದ ನಾಯಕ ಅಜಯ್ ಸಿಂಗ್, ಘಟನೆಯಲ್ಲಿ ಕಾಂಗ್ರೆಸ್ ಕೈವಾಡವನ್ನು ತಳ್ಳಿಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+