ಬಾವ-ಬಾಮೈದ ನಡುವೆ ಕಿತ್ತಾಟಕ್ಕೆ ಕಿಚ್ಚು ಹಚ್ಚಿದ ಕಾಂಗ್ರೆಸ್

ಭೋಪಾಲ್, ನವೆಂಬರ್ 05: ಮಧ್ಯಪ್ರದೇಶದಲ್ಲಿ ಮೋದಿ ಬಲದಿಂದ ಶಿವರಾಜ್ ಸಿಂಗ್ ಮತ್ತೊಮ್ಮೆ ಮಹಾರಾಜನಂತೆ ಅಧಿಕಾರ ಪಡೆಯಬಹುದು ಎಂಬ ವರದಿಗಳು ಬರುತ್ತಿದ್ದಂತೆ ಕಾಂಗ್ರೆಸ್ ಎಚ್ಚೆತ್ತುಕೊಂಡಿದೆ. ಶಿವರಾಜ್ ಸಿಂಗ್ ಸೋಲಿಸಲು ಅವರ ಬಾಮೈದ(ಹೆಂಡತಿ ತಮ್ಮ) ಸಂಜಯ್ ಸಿಂಗ್ ರನ್ನು ಕರೆ ತಂದಿದೆ.

ದೀಪಾವಳಿ ವಿಶೇಷ ಪುರವಣಿ

ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಅವರ ಯೋಜನೆಯಂತೆ, ಸಂಜಯ್ ಸಿಂಗ್ ರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಂಡು ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಅವರನ್ನು ಕೆಡವಲು ಸಿದ್ಧತೆ ನಡೆಸಲಾಗಿದೆ. ಆದರೆ, ಕಾಂಗ್ರೆಸ್ ತಂತ್ರಗಾರಿಕೆಯಲ್ಲಿ ಸಂಜಯ್ ಸಿಂಗ್ ಕೇವಲ ಮಧ್ಯವರ್ತಿಯಾಗುವ ಸಾಧ್ಯತೆಯೂ ಇದೆ. ಈ ಮುಂಚೆ ಬಿಜೆಪಿಯಲ್ಲಿದ್ದ ಸಂಜಯ್ ಸಿಂಗ್ ಅವರು ಪಕ್ಷ ಬದಲಾಯಿಸಿರುವುದು ಭಾರಿ ಸಂಚಲನ ಉಂಟು ಮಾಡುವ ಸಾಧ್ಯತೆಗಳಿವೆ.

ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಧಾರ್ಮಿಕ, ಆಧಾತ್ಮ ಮುಖಂಡರ ಭೀತಿ!

ಶಿವರಾಜ್ ಸಿಂಗ್ ಅವರ ಪಾರ್ಟ್ನರ್ : ಸಿಎಂ ಶಿವರಾಜ್ ಸಿಂಗ್ ಅವರ ಅನೇಕ ಯೋಜನೆಗಳು, ವ್ಯಾಪಾರ, ವಹಿವಾಟುಗಳಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಂಜಯ್ ಸಿಂಗ್ ಪಾಲುದಾರರಾಗಿದ್ದು, ಶಿವರಾಜ್ ಅವರ ವ್ಯವಹಾರದ ಒಳಹೊರಗನ್ನು ಬಲ್ಲವರಾಗಿದ್ದಾರೆ.

ರಾಹುಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಸಿಎಂ ಪುತ್ರ!

ಶಿವರಾಜ್ ಸಿಂಗ್ ಅವರ ಮೇಲಿನ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಂಜಯ್ ಸಿಂಗ್ ಮಸಾನಿ ಹೆಸರು ಕೂಡಾ ಕೇಳಿ ಬಂದಿತ್ತು. ಆದರೆ, ಈ ವಿಷಯ ಗೊತ್ತಿದ್ದು ಗೊತ್ತಿಲ್ಲದ್ದಂತೆ ದಿಗ್ವಿಜಯ್ ಸಿಂಗ್, ಕೆಕೆ ಮಿಶ್ರಾ ಅವರು ನಡೆದುಕೊಂಡಿದ್ದು, ಕಮಲನಾಥ್ ಪಕ್ಕದಲ್ಲಿ ಸಂಜಯ್ ಅವರನ್ನು ಕೂರಿಸಿದ್ದಾರೆ.

ಬಿಜೆಪಿಯಲ್ಲಿದ್ದ ಸಂಜಯ್ ಸಿಂಗ್

ಬಿಜೆಪಿಯಲ್ಲಿದ್ದ ಸಂಜಯ್ ಸಿಂಗ್

ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಅವರನ್ನು ಕೆಡವಲು ಸಿದ್ಧತೆ ನಡೆಸಲಾಗಿದೆ. ಆದರೆ, ಕಾಂಗ್ರೆಸ್ ತಂತ್ರಗಾರಿಕೆಯಲ್ಲಿ ಸಂಜಯ್ ಸಿಂಗ್ ಕೇವಲ ಮಧ್ಯವರ್ತಿಯಾಗುವ ಸಾಧ್ಯತೆಯೂ ಇದೆ. ಈ ಮುಂಚೆ ಬಿಜೆಪಿಯಲ್ಲಿದ್ದ ಸಂಜಯ್ ಸಿಂಗ್ ಅವರು ಪಕ್ಷ ಬದಲಾಯಿಸಿರುವುದು ಭಾರಿ ಸಂಚಲನ ಉಂಟು ಮಾಡುವ ಸಾಧ್ಯತೆಗಳಿವೆ.

ಸಂಜಯ್ ಸಿಂಗ್ ಮಸಾನಿ ಬೇಡಿಕೆ ಏನಿದೆ?

ಸಂಜಯ್ ಸಿಂಗ್ ಮಸಾನಿ ಬೇಡಿಕೆ ಏನಿದೆ?

ಮೂಲಗಳ ಪ್ರಕಾರ, ಮಸಾನಿ ಅವರು ಬರಾಸಿವಾನಿ ಕ್ಷೇತ್ರದಿಂದ ಅಸೆಂಬ್ಲಿ ಟಿಕೆಟ್ ಬಯಸಿದ್ದಾರೆ. ಆದರೆ, ಬಿಜೆಪಿಯಲ್ಲಿ ಈ ಬೇಡಿಕೆಗೆ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಮುಖ್ಯವಾಗಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಅವರೇ ಟಿಕೆಟ್ ಕೈತಪ್ಪಿಸಿದರು ಎಂಬ ಅಪವಾದವಿದೆ.

ಮಸಾನಿ ಸೋದರಿ ಕೋಕಿಲಾ ಪಾತ್ರವೇನು?

ಮಸಾನಿ ಸೋದರಿ ಕೋಕಿಲಾ ಪಾತ್ರವೇನು?

ಮಸಾನಿ ಅವರ ಸೋದರಿ ಕೋಕಿಲಾ(ಶಿವರಾಜ್ ಸಿಂಗ್ ಚೌಹಾಣ್ ಅವರ ಪತ್ನಿ ಸಾಧನಾ ಸಿಂಗ್ ಅವರ ಹಿಂದಿನ ಹೆಸರು) ಅವರು ಆರ್ಥಿಕ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಶಿವರಾಜ್ ಸಿಂಗ್ ಹಾಗೂ ಮಸಾನಿ ನಡುವಿನ ಆರ್ಥಿಕ ವ್ಯವಹಾರ ಹದಗೆಡಲು ಕೋಕಿಲಾ ಅವರೇ ಕಾರಣ ಎಂಬ ಸುದ್ದಿಯೂ ಇದೆ. ಈಗ ರಾಜಕೀಯ ಎದುರಾಳಿಗಳಾಗಿದ್ದಾರೆ.

ಟ್ಯಾಕ್ಸಿ ಚಾಲಕನಾಗಿದ್ದ ಮಸಾನಿ

ಟ್ಯಾಕ್ಸಿ ಚಾಲಕನಾಗಿದ್ದ ಮಸಾನಿ

ದಿವಂಗತ ಪ್ರಮೋದ್ ಮಹಾಜನ್ ಅವರು ಕೇಂದ್ರ ಸಚಿವರಾಗಿದ್ದ ಕಾಲದಲ್ಲಿ ಚೌಹಾಣ್ ಅವರು ಲೋಕಸಭಾ ಸದಸ್ಯರಾಗಿದ್ದರು. 8-10 ಟ್ಯಾಕ್ಸಿಗಳನ್ನು ನಿಭಾಯಿಸುತ್ತಿದ್ದರು.

ಆದರೆ, ನಂತರ ಮಹಾಜನ್ ಅವರ ಸಹಾಯಕ ವಿವೇಕ್ ಮೊಯಿತ್ರಾ ಜತೆ ಮನಸ್ತಾಪ ಉಂಟಾಗಿ, ಮಧ್ಯಪ್ರದೇಶದ ರಾಜಕೀಯದತ್ತ ಮುಖ ಮಾಡಿದರು. ಶಿವರಾಜ್ ಅವರು ಸಿಎಂ ಆದ ಬಳಿಕ ಸರ್ಕಾರದ ಟೆಂಡರ್, ಬಿಡ್ಡಿಂಗ್ ನಲ್ಲಿ ಮಸಾನಿ ಕೈ ಹಾಕತೊಡಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+