ಚಂಬಲ್ ನದಿ- ಸ್ನಾನ ಮಾಡುತ್ತಿದ್ದಾಗ 10 ವರ್ಷದ ಬಾಲಕನನ್ನು ನುಂಗಿದ ಮೊಸಳೆ
ಶಿಯೋಪುರ ಜುಲೈ 12: ಮಧ್ಯಪ್ರದೇಶದ ಶಿಯೋಪುರದಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಇಲ್ಲಿನ ಚಂಬಲ್ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ 10 ವರ್ಷದ ಬಾಲಕನನ್ನು ಮೊಸಳೆ ನುಂಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಸೋಮವಾರ ಬೆಳಗ್ಗೆ ಚಂಬಲ್ ನದಿಯಲ್ಲಿ ಸ್ನಾನಕ್ಕೆ ತೆರಳುತ್ತಿದ್ದ ವೇಳೆ ಮೊಸಳೆ ಬಾಲಕನ ಮೇಲೆ ದಾಳಿ ಮಾಡಿದೆ. ಮೊಸಳೆ ಬಾಲಕನನ್ನು ನದಿಗೆ ಎಳೆದೊಯ್ದಿದೆ. ಬಳಿಕ ಬಾಲಕನನ್ನು ನುಂಗಿದೆ ಎಂದು ಹೇಳಲಾಗುತ್ತಿದೆ. ಸ್ಥಳದಲ್ಲಿದ್ದ ಸ್ಥಳೀಯರು ಕೂಡಲೇ ಆತನ ಕುಟುಂಬ ಹಾಗೂ ಸಂಬಂಧಿಕರಿಗೆ ಕರೆ ಮಾಡಿ ದೊಣ್ಣೆ, ಹಗ್ಗ ಹಾಗೂ ಬಲೆಯಿಂದ ಮೊಸಳೆಯನ್ನು ಹಿಡಿದಿದ್ದಾರೆ. ಬಳಿಕ ಮೊಸಳೆಯನ್ನು ನದಿಯಿಂದ ಹೊರಗೆ ಎಳೆದಂತಿದ್ದಾರೆ.

ಅಷ್ಟರಲ್ಲಿ ಘಟನೆಯ ಬಗ್ಗೆ ಮಾಹಿತಿ ಪಡೆದ ಅಲಿಗೇಟರ್ ವಿಭಾಗದ ತಂಡ ಮತ್ತು ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿದೆ. ಎರಡೂ ತಂಡಗಳು ಮೊಸಳೆಯನ್ನು ಗ್ರಾಮಸ್ಥರ ಹಿಡಿತದಿಂದ ರಕ್ಷಿಸಲು ಯತ್ನಿಸಿದವು. ಆದರೆ, ಸಂಜೆಯವರೆಗೂ ಬಾಲಕನ ಕುಟುಂಬಸ್ಥರು ಇದಕ್ಕೆ ಒಪ್ಪಿರಲಿಲ್ಲ. 10 ವರ್ಷದ ಮಗುವಿನ ಕುಟುಂಬಸ್ಥರು ಮೊಸಳೆಯ ಹೊಟ್ಟೆಯಲ್ಲಿ ಮಗು ಜೀವಂತವಾಗಿರಬಹುದೆಂಬ ನಿರೀಕ್ಷೆಯಲ್ಲಿದ್ದರು. ಮಗುವನ್ನು ಉಗುಳಿದಾಗ ಮಾತ್ರ ಮೊಸಳೆಯನ್ನು ಬಿಡುತ್ತೇವೆ ಎಂದು ಒತ್ತಾಯಿಸಿದರು.

ರಘುನಾಥಪುರ ಪೊಲೀಸ್ ಠಾಣೆಯ ಉಸ್ತುವಾರಿ ಶ್ಯಾಮ್ ವೀರ್ ಸಿಂಗ್ ತೋಮರ್ ಪ್ರಕಾರ, "ಬಾಲಕ ಸ್ನಾನ ಮಾಡುವಾಗ ನದಿಯ ಆಳಕ್ಕೆ ಹೋದನು. ಮಗುವನ್ನು ಮೊಸಳೆ ನುಂಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ನಂತರ ಬಲೆ ಮತ್ತು ಕೋಲುಗಳನ್ನು ಬಳಸಿ ಮೊಸಳೆಯನ್ನು ಹಿಡಿದಿದ್ದಾರೆ. ಅಲಿಗೇಟರ್ ಇಲಾಖೆ ಈ ವಿಷಯದಲ್ಲಿ ಕ್ರಮವನ್ನು ಪ್ರಾರಂಭಿಸಿದೆ. ಬಳಿಕ ಪೊಲೀಸ್ ಅಧಿಕಾರಿಗಳು ಹಾಗೂ ಅಲಿಗೇಟರ್ ಇಲಾಖೆ ಮನವೊಲಿಸಿ ಗ್ರಾಮಸ್ಥರು ಮೊಸಳೆಯನ್ನು ಬಿಡಿಸಿದ್ದಾರೆ.












Click it and Unblock the Notifications