ಶಾಂಪೂ ಖರೀದಿಸಲು EMI ಸೌಲಭ್ಯ: ಈ ದುಬಾರಿ ಶಾಂಪೂ ಸೆಟ್‌ನ ಅಸಲಿ ಬೆಲೆ ಕೇಳಿ ಗ್ರಾಹಕ ಶಾಕ್
ಬೆಂಗಳೂರು, ನವೆಂಬರ್ 20: ಈಗಿನ ಆಧುನಿಕ ಜಗದಲ್ಲಿ ಎಲ್ಲವೂ ಸುಲಭ. ವ್ಯಕ್ತಿ ಕೂತಲ್ಲಿಯೇ ಆತನ ಅಗತ್ಯಗಳನ್ನು ಪೂರೈಸುವಷ್ಟರ ಮಟ್ಟಿಗೆ ಜಗತ್ತು ಬೆಳೆದಿದೆ. ಅಂಗೈಯೊಳಗಿನ ಮಾಂತ್ರಿಕ ಮೊಬೈಲ್‌ನಿಂದ ಜಗತ್ತೇ ಕೈಯಲ್ಲಿರುವ ಅನುಭವ ಜನರಲ್ಲಿದೆ. ಇನ್ನು ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್‌ಗಳಂತೂ ದಿನದಿಂದ ದಿನಕ್ಕೆ ಖರೀದಿ ಕೆಲಸಗಳನ್ನು ಸುಲಭ ಮಾಡುತ್ತಿದ್ದೆ.
ಉಚಿತ, ರಿಯಾಯಿತಿ, ಆಫರ್‌ಗಳ ಹೆಸರಿನಲ್ಲಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಜನರನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಬೇಕಾದ ವಸ್ತುವು ಜಸ್ಟ್ ಒಂದು ಕ್ಲಿಕ್‌ನಿಂದ ನಮ್ಮ ಮನೆ ಬಾಗಿಲಿಗೆ ಬಂದು ಸೇರುತ್ತದೆ. ಹೀಗಾಗಿ ಜನರು ಕೂಡ ಆನ್‌ಲೈನ್ ಶಾಪಿಂಗ್ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ. ಜನರು ಮಾರುಕಟ್ಟೆಗಿಂತ ಕಡಿಮೆ ಬೆಲೆಯಲ್ಲಿ ಆನ್‌ಲೈನ್‌ನಲ್ಲಿ ವಸ್ತುಗಳನ್ನು ಖರೀದಿಸುತ್ತಾರೆ.

ಇಷ್ಟಾದರೂ ಸಹ ಆನ್‌ಲೈನ್‌ನಲ್ಲಿ ನೀಡುವ ರಿಯಾಯಿತಿ ಹಾಗೂ ಆಫರ್‌ಗಳು ಜನರನ್ನು ದಿಗ್ಭ್ರಮೆಗೊಳಿಸುತ್ತದೆ. ಇತ್ತೀಚಿಗೆ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್‌ವೊಂದರಲ್ಲಿ ಶಾಂಪೂ ಹಾಗೂ ಅದೇ ಕಂಪನಿಯ ಕಂಡೀಷನರ್ ಖರೀದಿಗೆ ಇಎಂಐ ಸೌಲಭ್ಯ ನೀಡಲಾಗಿದೆ. ಪ್ರತಿ ತಿಂಗಳು 387 ರೂಪಾಯಿಗಳ ಇಎಂಐ ಸೌಲಭ್ಯದಲ್ಲಿ ದುಬಾರಿ ಬೆಲೆಯ ಈ ಶಾಂಪೂ ಹಾಗೂ ಕಂಡೀಷನರ್‌ನ್ನು ಖರೀದಿಸಬಹುದಾಗಿದೆ. ಲೋರಿಯಲ್ ಶಾಂಪುವಿಗೆ ಈ ಆಫರ್ ನೀಡಲಾಗಿದೆ ಎಂದು ವರದಿಯಾಗಿದೆ.
ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರಕಾರ ಲೋರಿಯಲ್ ಕಂಪನಿಯ ಈ ಶಾಂಪೂ ಹಾಗೂ ಕಂಡಿಷನರ್‌ನ 373 ಮಿ.ಲಿ ಬಾಟಲ್‌ಗೆ ಬೆಲೆ ರೂ 9,999 ರೂಪಾಯಿ ಇದೆ. ಆದರೆ ಆನ್‌ಲೈನ್‌ನಲ್ಲಿ ಇದು 20% ರಷ್ಟು ರಿಯಾಯಿತಿಯಲ್ಲಿ ಲಭ್ಯವಿದೆ. ರಿಯಾಯಿತಿಯ ನಂತರ, ಈ ಲೋರಿಯಲ್ ಸೆಟ್‌ನ ಬೆಲೆ 7,987 ರೂಪಾಯಿ ಆಗಿದೆ. ಈ ಆಫರ್ ಜೊತೆಗೆ ಇಎಂಐಗೆ ಬಳಸುವ ಬ್ಯಾಂಕ್‌ಗಳ ಮೇಲು ರಿಯಾಯಿತಿ ದೊರೆಯಲಿದೆ. ಈ ಶಾಂಪೂವಿನ ತೂಕ 839 ಗ್ರಾಂ ಇದ್ದು, ಇದರ ಬೆಲೆ ಹಾಗೂ ಇದರ ಮಾರಾಟಕ್ಕೆ ಆನ್‌ಲೈನ್ ಪ್ಲಾಟ್‌ಫಾರ್ಮ್ ನೀಡಿರುವ ಇಎಂಐ ಸೌಲಭ್ಯ ನೋಡಿ ಗ್ರಾಹಕರು ಶಾಕ್ ಆಗಿದ್ದಾರೆ.
ಈ ಲೋರಿಯಲ್ ಸೆಟ್‌ಗೆ ಗ್ರಾಹಕರ ವಿಮರ್ಶೆಯು 5 ರಲ್ಲಿ 4.4 ಆಗಿದೆ. 69% ಜನರು ಅದಕ್ಕೆ ಫೈವ್‌ಸ್ಟಾರ್ ರೇಂಟಿಂಗ್ ನೀಡಿದ್ದಾರೆ. ಶಾಂಪೂ ಸೆಟ್‌ನ ಗುಣಮಟ್ಟ ಗ್ರಾಹಕರಿಗೆ ಇಷ್ಟವಾಗಿದ್ದು, ಈ ದುಬಾರಿ ಶಾಂಪೂವನ್ನು ಖರೀದಿಸುವವರ ಸಂಖ್ಯೆ ಕೂಡ ಹೆಚ್ಚಿದೆ. ಹೀಗಾಗಿ ಅಮೆಜಾನ್‌ನ ಕಮೆಂಟ್ ಹಾಗೂ ರಿವ್ಯೂ ವಿಭಾಗದಲ್ಲಿ ಇದರ ಬೆಲೆಯ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ.
ಇನ್ನು ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಶಾಂಪಿಂಗ್ ಹೆಚ್ಚಾಗುತ್ತಿದೆ. ಮನೆಯ ದಿನಸಿಯಿಂದ ಹಿಡಿದು ಬಟ್ಟೆ, ಆಭರಣಗಳು, ಮೊಬೈಲ್, ಟಿವಿ, ಫ್ರಿಡ್ಜ್ ಹೀಗೆ ದಿನ ಬಳಕೆಯ ವಸ್ತುಗಳು ಸಹ ಆನ್‌ಲೈನ್‌ನಲ್ಲೇ ಸಿಗುತ್ತಿದ್ದು, ಜನರಿಗೆ ಖರೀದಿಗೆ ಸುಲಭವಾಗಿದೆ. ಹೀಗಾಗಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಹೆಚ್ಚುತ್ತಿದೆ. ದಿನ ದಿನ ವಿಶೇಷವಾದ ಆಫರ್ ಹಬ್ಬಗಳ ಸಮಯದಲ್ಲಿ ಹೆಚ್ಚಿನ ಆಫರ್‌ಗಳನ್ನು ನೀಡುತ್ತಾ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿವೆ.












Click it and Unblock the Notifications