ಅವಮಾನಿಸಿದಷ್ಟೂ ಕಾಂಗ್ರೆಸ್ ವಿರುದ್ಧ ಹೆಚ್ಚು ಕೆಲಸ ಮಾಡುತ್ತೇನೆ: ಸ್ಮೃತಿ ಇರಾನಿ

ನವದೆಹಲಿ, ಏಪ್ರಿಲ್ 12: ಲೋಕಸಭೆ ಚುನಾವಣೆಯ ನಾಮಪತ್ರದೊಂದಿಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ನಮೂದಿಸಲಾದ ಪದವಿ ಬಗ್ಗೆ ಕಾಂಗ್ರೆಸ್ ಟೀಕೆಗೆ ಬಿಜೆಪಿ ಅಭ್ಯರ್ಥಿ, ಸಚಿವೆ ಸ್ಮೃತಿ ಇರಾನಿ ಪ್ರತಿ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

'ಕಳೆದ ಐದು ವರ್ಷಗಳಲ್ಲಿ ಅವರು ಪ್ರತಿ ಸಾಧ್ಯವಾದ ರೀತಿಯಲ್ಲೆಲ್ಲಾ ನನ್ನ ಮೇಲೆ ದಾಳಿ ನಡೆಸಿದ್ದಾರೆ. ಮಹಿಳೆಯಾಗಿರುವ ಕಾರಣಕ್ಕೆ ನನ್ನ ಮೇಲೆ ಟೀಕಾಪ್ರಹಾರ ನಡೆಸಿಲ್ಲ ಎಂದು ಹೇಳಲಾಗದು. ಅವರಿಗೆ ನನ್ನ ಒಂದೇ ಒಂದು ಸಂದೇಶವಿದೆ. ನೀವು ನನ್ನನ್ನು ಹೆಚ್ಚು ಹೆಚ್ಚು ಅವಮಾನಿಸಿದಷ್ಟೂ, ಹೆಚ್ಚು ದಾಳಿ ನಡೆಸಿದಷ್ಟೂ ಅಮೇಥಿಯಲ್ಲಿ ಕಾಂಗ್ರೆಸ್ ವಿರುದ್ಧ ಇನ್ನಷ್ಟು ಕಠಿಣವಾಗಿ ಕೆಲಸ ಮಾಡುತ್ತೇನೆ' ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಉತ್ತರ ಪ್ರದೇಶದ ಅಮೇಥಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ನಾಮಪತ್ರ ಸಲ್ಲಿಸಿದ ನಂತರ, ಅವರ ಪದವಿಗೆ ಸಂಬಂಧಿಸಿದ ವಿವಾದ ಮತ್ತೆ ಹುಟ್ಟಿಕೊಂಡಿದೆ. ಅಫಿಡವಿಟ್‌ನಲ್ಲಿ ಅವರು ತಾವು ಪದವಿಯನ್ನು ಪೂರ್ಣಗೊಳಿಸಿಲ್ಲ ಎಂದು ನಮೂದಿಸಿದ್ದಾರೆ.

More you insult me, the harder i will work against Congress in Amethi Smriti Irani on graduation controversy

ಹಿಂದಿನ ಚುನಾವಣೆಯಲ್ಲಿ ಅಫಿಡವಿಟ್ ಸಲ್ಲಿಸುವಾಗ ಅವರು ದೆಹಲಿ ವಿಶ್ವವಿದ್ಯಾಲಯದಲ್ಲಿ ದೂರಶಿಕ್ಷಣ ಮೂಲಕ ಪದವಿ ಗಳಿಸಿದ್ದಾಗಿ ನಮೂದಿಸಿದ್ದರು. ಈಗ, ಮೂರು ವರ್ಷದ ಡಿಗ್ರಿಯನ್ನು ಪೂರ್ತಿಗೊಳಿಸಿಲ್ಲ ಎಂದು ಸ್ಮೃತಿ ಇರಾನಿ ಅವರು ತಿಳಿಸಿರುವುದು ಕಾಂಗ್ರೆಸ್ಸಿಗರ ಟೀಕೆಗೆ ಗುರಿಯಾಗಿದೆ.

"ಕ್ಯೂಂಕಿ ಮಂತ್ರಿ ಭಿ ಕಭಿ ಗ್ರಾಜ್ಯುವೇಟ್ ಥಿ (ಏಕೆಂದರೆ ಮಂತ್ರಿ ಕೂಡ ಮೊದಲು ಪದವಿಧರೆ ಆಗಿದ್ದರು)" ಎಂಬ ಮೆಗಾ ಧಾರಾವಾಹಿ ಸದ್ಯದಲ್ಲಿಯೇ ಬರಲಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪದವಿಯ ವಿವಾದಕ್ಕೆ ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಗೇಲಿ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+