ಮೊರ್ಬಿ ಸೇತುವೆ ಪ್ರಕರಣ: ಬಿಡುಗಡೆಗೊಂಡು ಕೆಲವೇ ಗಂಟೆಗಳಲ್ಲಿ ಸಾಕೇತ್ ಗೋಖಲೆ ಬಂಧನ

ಅಹಮದಾಬಾದ್ ಡಿಸೆಂಬರ್ 9: ಗುಜರಾತ್‌ನ ಮೊರ್ಬಿ ಸೇತುವೆ ಪ್ರಕರಣದ ಬಗ್ಗೆ ಸುಳ್ಳು ಟ್ವೀಟ್ ಮಾಡಿದ ಆರೋಪದ ಮೇಲೆ ಟಿಎಂಸಿಯ ವಕ್ತಾರ ಸಾಕೇತ್ ಗೋಖಲೆ ಅವರನ್ನು ಬಂಧಿಸಲಾಗಿತ್ತು. ಅವರಿಗೆ ನಿನ್ನೆ ಜಾಮೀನು ನೀಡಿದ ಕೆಲವೇ ಗಂಟೆಗಳ ಬಳಿಕ ಗುಜರಾತ್ ಪೊಲೀಸರು ಮತ್ತೆ ಬಂಧಿಸಿದ್ದಾರೆ ಎಂದು ಟಿಎಂಸಿ ಹಿರಿಯ ನಾಯಕ ಡೆರೆಕ್ ಓಬ್ರಿಯಾನ್ ಆರೋಪಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ಪಕ್ಷದ ವಕ್ತಾರ ಸಾಕೇತ್ ಗೋಖಲೆ ಅವರಿಗೆ ಜಾಮೀನು ನೀಡಿದ ನಂತರವೂ ಗುಜರಾತ್ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಓಬ್ರಿಯಾನ್ ಆರೋಪಿಸಿದ್ದಾರೆ. ಸೇತುವೆ ಕುಸಿತದ ಘಟನೆಯ ನಂತರ ಮೋರ್ಬಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಬಗ್ಗೆ ಸುಳ್ಳು ಸುದ್ದಿಯನ್ನು ಅನುಮೋದಿಸಿ ಟ್ವೀಟ್ ಮಾಡಿದ್ದಕ್ಕಾಗಿ ಸಾಕೇತ್ ಗೋಖಲೆ ಅವರನ್ನು ಬಂಧಿಸಲಾಗಿದೆ.

Morbi Bridge case: Saket Gokhale arrested within hours of release

''ಗುರುವಾರ ಜಾಮೀನು ಪಡೆದ ನಂತರ ಕೆಲವೇ ಗಂಟೆಗಳಲ್ಲಿ ಸಾಕೇತ್ ಗೋಖಲೆ ಅವರಿಗೆ ಗುಜರಾತ್ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಡಿಸೆಂಬರ್ 8 ರಂದು ರಾತ್ರಿ 8.45 ಕ್ಕೆ ಮತ್ತೆ ಅವರನ್ನು ಬಂಧಿಸಲಾಗಿದೆ ಎನ್ನಲಾಗಿದೆ. ಅವರು ಅಹಮದಾಬಾದ್‌ನ ಸೈಬರ್ ಪಿಎಸ್‌ನಿಂದ ಹೊರಡುತ್ತಿದ್ದಾಗ, ಯಾವುದೇ ಸೂಚನೆ/ವಾರೆಂಟ್ ಇಲ್ಲದೆ ಪೊಲೀಸ್ ತಂಡ ಅವರನ್ನು ಬಂಧಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಇದು ಖಂಡನೀಯ (sic)" ಎಂದು ಡೆರೆಕ್ ಓಬ್ರಿಯಾನ್ ಗುರುವಾರ ಟ್ವೀಟ್ ಮಾಡಿದ್ದಾರೆ.

ಅಕ್ಟೋಬರ್‌ನಲ್ಲಿ ತೂಗುಸೇತುವೆ ಕುಸಿದ ನಂತರ ಮೊರ್ಬಿ ಪಟ್ಟಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಕುರಿತು ಸುಳ್ಳು ಸುದ್ದಿ ವರದಿಯನ್ನು ಅನುಮೋದಿಸಿ ಟ್ವೀಟ್ ಮಾಡಿದ್ದಕ್ಕಾಗಿ ಟಿಎಂಸಿ ನಾಯಕ ಸಾಕೇತ್ ಗೋಖಲೆ ಅವರನ್ನು ಮಂಗಳವಾರ ಬಂಧಿಸಲಾಗಿತ್ತು. ಅವರನ್ನು ಡಿಸೆಂಬರ್ 8ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು.

ಗುರುವಾರ ಸಂಜೆ ಡೆರೆಕ್ ಓಬ್ರಿಯಾನ್ ಅವರು ತೃಣಮೂಲ ಪಕ್ಷದ ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ ಅವರಿಗೆ ಜಾಮೀನು ನೀಡಲಾಗಿದೆ ಎಂದು ಟ್ವೀಟ್ ಮಾಡಿದ್ದರು. ಸಾಕೇತ್ ಬಿಡುಗಡೆ ಬಳಿಕ ಡೆರೆಕ್ ಓಬ್ರಿಯಾನ್ ಅವರು "ಉತ್ತಮ ಹೋರಾಟಕ್ಕಾಗಿ ಹೋರಾಡಲು ಪಕ್ಷ ಯಾವಾಗಲೂ ಸಿದ್ಧವಾಗಿರುತ್ತದೆ" ಎಂದು ಹೇಳಿ ಟ್ವೀಟ್ ಮಾಡಿದ್ದರು.

ಮೇಲಿನ ಟ್ವೀಟ್ ಮಾಡಿದ ಕೆಲವೇ ಗಂಟೆಗಳ ನಂತರ, ಸಾಕೇತ್ ಗೋಖಲೆ ಅವರನ್ನು ಗುಜರಾತ್ ಪೊಲೀಸರು ಮತ್ತೆ ಬಂಧಿಸಿದ್ದಾರೆ ಮತ್ತು ಅಜ್ಞಾತ ಸ್ಥಳಕ್ಕೆ ಅವರನ್ನು ಕರೆದೊಯ್ಯಲಾಗಿದೆ ಎಂದು ಡೆರೆಕ್ ಓಬ್ರಿಯಾನ್ ಆರೋಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+