ರಾಹುಲ್ ಅಪ್ಪುಗೆ, ಮೋದಿ ಮಾತು, ರಮ್ಯಾ ಮೇಡಂ ಸರಣಿ ಟ್ವೀಟು!
Recommended Video

'ರಾಹುಲ್ ಗಾಂಧಿ ಪ್ರಬುದ್ಧತೆ ತೋರಿಸಿದರೆ, ನರೇಂದ್ರ ಮೋದಿ ಬಾಲಿಶತನ ತೋರಿದ್ದಾರೆ...' ನಿನ್ನೆಯ ಅವಿಶ್ವಾಸ ನಿರ್ಣಯ ಪ್ರಹಸನದ ಬಗ್ಗೆ ಕಾಂಗ್ರೆಸ್ ಮಿಡಿಯಾ ಸೆಲ್ ಮುಖ್ಯಸ್ಥೆ ರಮ್ಯಾ ಮೇಡಂ ನೀಡಿದ ಪ್ರತಿಕ್ರಿಯೆ ಇದು!
ರಾಹುಲ್ ಗಾಂಧಿ ಭಾಷಣ, ಅಪ್ಪುಗೆ, ಕಣ್ಣೇಟು ಎಲ್ಲ ಪ್ರಹಸನದ ಸಮಯದಲ್ಲಿ ಸುಮ್ಮನಿದ್ದ ರಮ್ಯಾ, ಪ್ರಧಾನಿ ಮೋದಿ ಭಾಷಣ ಮಾಡುತ್ತಿದ್ದಂತೆಯೇ ಸಿಕ್ಕಾಬಟ್ಟೆ active ಆಗಿ ಸರಣಿ ಟ್ವೀಟ್ ಮಾಡುವುದಕ್ಕೆ ಆರಂಭಿಸಿದರು. ತಮ್ಮ ಟ್ವೀಟಿನುದ್ದಕ್ಕೂಎಂದಿನಂತೆ ಪ್ರಧಾನಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡರು!
ಯಾರು ಏನೇ ಹೇಳಲಿ, ನಿರೀಕ್ಷೆಯಂತೆ ಎನ್ ಡಿಎ ಸರ್ಕಾರ ವಿಶ್ವಾಸ ಮತ ಗೆದ್ದಾಗಿದೆ. ನಿನ್ನೆ ಇಡೀ ದಿನ ಯಾವುದೋ ಇಂಟರೆಸ್ಟಿಗ್ ಸಿನೆಮಾ ಎಂಬಂತೆ ಭಾರತೀಯರನ್ನು ಟಿವಿ ಮುಂದೆ ಹಿಡಿದಿಟ್ಟಿದ್ದು ಅಧಿವೇಶನದ ವೈಶಿಷ್ಟ್ಯ!
ಈ ಕುರಿತು ರಮ್ಯಾ ಮಾಡಿದ ಸರಣಿ ಟ್ವೀಟ್ ಇಲ್ಲಿದೆ ನೋಡಿ.
|
ರಾಹುಲ್ ಮಾತು ಪ್ರಬುದ್ಧತೆಯ ಸಂಕೇತ
ರಾಹುಲ್ ಗಾಂಧಿ ಅವರು ಪ್ರಬುದ್ಧತೆ ಮತ್ತು ಧೈರ್ಯವನ್ನು ತೋರಿಸಿದರೆ, ಪ್ರಧಾನಿ ನರೇಂದ್ರ ಮೋದಿ ಅವರು ಅಭದ್ರತೆ ಮತ್ತು ಬಾಲಿಶತನವನ್ನು ತೋರಿಸಿದ್ದಾರೆ ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.
|
ದುರಹಂಕಾರದ ಪರಮಾವಧಿ
ಪ್ರಧಾನಿ ನರೇಂದ್ರ ಮೋದಿ ಅವರ ಮಾತು ದುರಹಂಕಾರದ ಪರಮಾವಧಿ. ಅವರು ಆತ್ಮರತಿಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅನ್ನಿಸುತ್ತದೆ ಎಂದಿದ್ದಾರೆ ರಮ್ಯಾ.
|
ಸುಳ್ಳಿನ ಕಂತೆ!
ಎಂಥ ಸುಳ್ಳಿನ ಮಾತು! ನರೇಂದ್ರ ಮೋದಿ ಅವರ ಭಾಷಣದ ತುಂಬ ಸುಳ್ಳಿನ ಕಂತೆಯೇ ತುಂಬಿದೆ ಎಂದು ಮೋದಿ ವಿರುದ್ಧ ಟ್ವೀಟಾಸ್ತ್ರ ಪ್ರಯೋಗಿಸಿದ್ದಾರೆ ರಮ್ಯಾ.
|
ಸಂಸತ್ತಿನಲ್ಲಿರುವವರೆಲ್ಲ ನಿದ್ರಿಸುತ್ತಿದ್ದಾರೆ!
ಸಂಸತ್ತಿನಲ್ಲಿರುವವರೆಲ್ಲ ಸದ್ಯಕ್ಕೆ(ಮೋದಿ ಭಾಷಣದ ಸಮಯದಲ್ಲಿ) ನಿದ್ರಿಸುತ್ತಿದ್ದಾರೆ ಎಂದು ತೂಕಡಿಸುತ್ತಿರುವ ಕಾರ್ಟೂನ್ ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದಾರೆ ರಮ್ಯಾ.
|
ನರೇಂದ್ರ ಮೋದಿ ಒಬ್ಬ ಅದ್ಭುತ ನಟ
ನಾಟಕೀಯ ಮತ್ತು ಹುರುಳಿಲ್ಲದ ಭಾಷಣದ ಪ್ರತಿ. ಆದರೆ ಪ್ರಧಾನಿ ನರೇಂದ್ರ ಮೋದಿ ಒಬ್ಬ ಅದ್ಭುತ ನಟ ಎಂದು ರಮ್ಯಾ ತಮ್ಮ ಮುನಿಸನ್ನು ಹೊರಹಾಕಿದ್ದಾರೆ.
|
ಪಾರ್ಲಿಮೆಂಟಿನ ಕ್ಯಾಮರಾಗಳೂ ತಾರತಮ್ಯ ಮಾಡುತ್ತವೆ!
ಪಾರ್ಲಿಮೆಂಟಿನ ಕ್ಯಾಮರಾಗಳೂ ತಾರತಮ್ಯ ಮಾಡುತ್ತವೆ ಅನ್ನಿಸುತ್ತೆ! ತಮ್ಮ ವಿದ್ಯಾರ್ಥಿ ಬಗ್ಗೆ ಮುಖ್ಯೋಪಾಧ್ಯಾಯಿನಿ ಪೂರ್ವಗ್ರಹ ಹೊಂದಿದ್ದಾರೆ! ಅವರು ಮಾತನಾಡುವಾಗ ಸೊಲ್ಲೆತ್ತುವುದಿಲ್ಲ! ಎಂದು ರಮ್ಯಾ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅಬವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.












Click it and Unblock the Notifications