ಮುಂಗಾರು ಪ್ರವೇಶ ಇನ್ನು ಎರಡು ದಿನ ತಡ

ನವದೆಹಲಿ, ಜೂನ್, 07: ಮಾನ್ಸೂನ್ ಮಾರುತಗಳು ಎರಡು ದಿನ ತಡವಾಗಿ ಕೇರಳ ಸಮುದ್ರ ತೀರ ಅಪ್ಪಳಿಸಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮಂಗಳವಾರ ತಿಳಿಸಿದೆ.

ಜೂನ್ 7ಕ್ಕೆ ಆಗಿಸಬೇಕಿದ್ದ ಮಾನ್ಸೂನ್ ಮಾರುತಗಳು ಜೂನ್ 9ಕ್ಕೆ ಆಗಮನ ಮಾಡಲಿವೆ. ಅಂದರೆ ಎರಡು ದಿನ ತಡವಾಗಿ ಮಾನ್ಸೂನ್ ಮಾರುತಗಳು ಆಗಮನ ಮಾಡಿದಂತೆ ಆಗುತ್ತದೆ.[ಜೂನ್ 8 ಅಥವಾ 9 ಕ್ಕೆ ರಾಜ್ಯದಲ್ಲಿ ಮುಂಗಾರು ಮಳೆ ಸಿಂಚನ]

monsoon

ಜೂನ್ 15 ರ ನಂತರ ಮಾರುತಗಳು ಭಾರೀ ಮಳೆ ಸುರಿಸಲಿವೆ. ಎಲ್ ನಿನೋ ಪ್ರಭಾವ ಇರದಿದ್ದರೆ ಸೆಪ್ಟೆಂಬರ್ ತಿಂಗಳಲ್ಲೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ವಾರದ ಮೇಲೆ ಎಡು ದಿನ ಮುಂಗಾರು ವಿಳಂಬ ಆದಂತೆ ಆಗಿದೆ. ಜೂ.5ರ ವೇಳೆಗೆ ಮುಂಗಾರು ಕರ್ನಾಟಕಕ್ಕೆ ಕಾಲಿಡಬೇಕಿತ್ತು. ಆದರೆ ರಾಜ್ಯದ ಹಲವು ಭಾಗಗಳಲ್ಲಿ ಉತ್ತಮ ಮುಂಗಾರು ಪೂರ್ವ ಮಳೆಯಾಗುತ್ತಿದೆ. ಹುಬ್ಬಳ್ಳಿಯಲ್ಲಿಯೂ ಧಾರಾಕಾರ ಮಳೆ ಸುರಿದಿದ್ದು ಸೋಮವಾರ ಜನಜೀವನಕ್ಕೆ ತೊಂದರೆ ಉಂಟುಮಾಡಿತ್ತು.[ದೇಶಕ್ಕಿಲ್ಲ ಮಳೆ ಕೊರತೆ ಚಿಂತೆ, ರೈತರಿಗೂ ನಿಶ್ಚಿಂತೆ]

ಉತ್ತರ ಕನ್ನಡ ಜಿಲ್ಲೆಯ ಮಂಕಿಯಲ್ಲಿ 10 ಸೆಂಮೀ, ಹಳಿಯಾಳದಲ್ಲಿ 8 ಸೆಂಮೀ ಮಳೆ ದಾಖಲಾಗಿದೆ. ಸೋಮವಾರ ಬೆಂಗಳೂರು ನಗರ, ದಾವಣಗೆರೆ, ಅಂಕೋಲಾ, ಹುಬ್ಬಳ್ಳಿ ಧಾರವಾಡ, ಶಿವಮೊಗ್ಗ, ಉಡುಪಿ, ಸಂತೆಬೆನ್ನೂರು, ತಿಪಟೂರು , ಕೊರಟಗೆರೆಯಲ್ಲಿ ಮಳೆ ಬಿದ್ದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+