ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಾದ್ಯಂತ ವಾಡಿಕೆಗಿಂತ ಹೆಚ್ಚು ಮುಂಗಾರು ಮಳೆ

|
Google Oneindia Kannada News

ನವದೆಹಲಿ, ಜೂ. 15: ದೇಶದ ರೈತರಲ್ಲಿ ಆತಂಕ ಮೂಡಿಸಿದ್ದ ಮುಂಗಾರು ವಾಡಿಕೆಗಿಂತ ಹೆಚ್ಚಿನ ಮಳೆ ಸುರಿಸಿದೆ. ದೇಶಾದ್ಯಂತ ವಾಡಿಕೆಗಿಂತ ಶೇ. 11 ರಷ್ಟು ಹೆಚ್ಚಿನ ಮಳೆ ಬಿದ್ದಿದೆ.

ಆದರೆ ಕೆಲವೆಡೆ ವ್ಯಾಪಕ ಮಳೆ ಬಿದ್ದಿದ್ದು, ಹಲವೆಡೆ ಮಳೆಯಾಗಿಲ್ಲ. ಕಳೆದ ಮೂರು ದಿನಗಳಲ್ಲಿ ದೇಶಾದ್ಯಂತ ಬೀಳುತ್ತಿರುವ ಮಳೆ ಪ್ರಮಾಣ ಹೆಚ್ಚಿದೆ. ಮುಂಗಾರು ಆರಂಭವಾದಾಗ ಸಾಮಾನ್ಯವಾಗಿ ಹೆಚ್ಚಿನ ಮಳೆ ಕಾಣುವ ದಕ್ಷಿಣ ಪ್ರಸ್ಥ ಭೂಮಿ, ಮಧ್ಯ ಭಾರತ, ಉತ್ತರ ಭಾರತದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆ ದಾಖಲಾಗಿದೆ. ಆದರೆ ದೇಶದ ಪೂರ್ವ ಮತ್ತು ಈಶಾನ್ಯ ಭಾಗಗಳಲ್ಲಿ ಸರಾಸರಿಗಿಂತ ಶೇ.22ರಷ್ಟು ಹೆಚ್ಚು ಮಳೆ ಸುರಿದಿದೆ.[ಭಾರೀ ಮಳೆ ಬಿದ್ದರೆ ಬೆಂಗಳೂರಿಗರ ಕತೆ?]

rain

ಮಳೆ ಕೊಂಚ ತಡವಾಗಿ ಆರಂಭವಾಗಿದ್ದರೂಈ ದೇಶದ ಕೃಷಿ ಷಟುವಟಿಕೆಗೆ ಪೂರಕವಾಗಿ ಸ್ಪಂದಿಸುತ್ತಿದೆ. ಜಲಾಶಯಗಳ ಒಳಹರಿವು ಹೆಚ್ಚಿದ್ದು ಕಳೆದ ವರ್ಷದ ದಾಖಲೆಗೆ ಯಾವ ಅಡ್ಡಿ ಉಂಟಾಗುವುದಿಲ್ಲ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ರಾಜ್ಯದ ಬಹುತೇಕ ಕಡೆ ಮಳೆ
ಭಾನುವಾರ ರಾಜ್ಯದ ಬಹುತೇಕ ಕಡೆ ಮಳೆ ಸುರಿದಿದೆ. ಆದರೆ ಪಶ್ಷಿಮ ಘಟ್ಟದ ಭಾಗದಲ್ಲಿ ಮುಂಗಾರು ತನ್ನ ಆರ್ಭಟ ತೋರಿಸುತ್ತಿಲ್ಲ. ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿ 11 ಸೆಂ.ಮೀ ಮಳೆಯಾಗಿದೆ. ಕುಮಟಾ 10, ಭಟ್ಕಳ 8, ಮಂಗಳೂರು, ಉಡುಪಿ, ಹೊನ್ನಾವರ, ಕಾರವಾರ 7, ಕೊಲ್ಲೂರು, ಹೆಸರಘಟ್ಟ 5, ಗೇರುಸೊಪ್ಪ, ಬೆಂಗಳೂರು 4 ಸೆಂಮಿ ಮಳೆಯಾಗಿದೆ.

ಸುಬ್ರಹ್ಮಣ್ಯ, ಲಿಂಗನಮಕ್ಕಿ, ಆಗುಂಬೆ, ನೆಲಮಂಗಲ 3, ಮಂಗಳೂರು, ಬಂಟ್ವಾಳ, ಮಾಣಿ, ಶಿವಮೊಗ್ಗ, ಮೂಡಿಗೆರೆ, ಬೆಂಗಳೂರು ನಗರ, ಚಿಂತಾಮಣಿ 2, ಮೂಡುಬಿದಿರೆ, ಬೆಳ್ತಂಗಡಿ, ಧರ್ಮಸ್ಥಳ, ರಾಯಚೂರು, ಮಡಿಕೇರಿ, ಮಾದಾಪುರ, ಸೋಮವಾರಪೇಟೆ, ತರೀಕೆರೆ, ಸಕಲೇಶಪುರದಲ್ಲಿ ತಲಾ 1ಸೆಂ. ಮೀ ಮಳೆಯಾಗಿದೆ.

ಮಲೆನಾಡು ಮತ್ತು ಕೊಡಗು ಭಾಗಗಳಲ್ಲಿ ಇದುವರೆಗೆ ನಿರೀಕ್ಷಿತ ಪ್ರಮಾಣದ ಮಳೆ ಬಿದ್ದಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದ ಹವಾಮಾನ ವ್ಯಾಪಕ ಬದಲಾವಣೆಗೆ ಒಳಗಾಗುವುದಿಲ್ಲ. ಕರಾವಳಿ ಭಾಗಗಳು ಹೆಚ್ಚಿನ ಮಳೆ ಪಡೆದರೆ, ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಯಲು ಸೀಮೆ ಜಿಲ್ಲೆಗಳಲ್ಲಿ ತುಂತುರು ಮಳೆಯಾಗಲಿದೆ.

English summary
The monsoon has galloped in the past three days, boosting this season's total rainfall to a soothing 11% higher than normal, after early jitters kept financial markets on the tenterhooks and sparked fears of inflation and more rural distress. Karnataka also receiving heavy rainfall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X