ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಟ್ವೀಟ್ ಮಾಡಿರುವ ವಿಡಿಯೋದಲ್ಲಿ ಏನಿದೆ ?

By Manjunatha
|
Google Oneindia Kannada News

ನವೆಂಬರ್ 08 : ನೋಟ್ ಬ್ಯಾನ್ ಮಾಡಿ ಒಂದು ವರ್ಷವಾದ ಪ್ರಯುಕ್ತ ಮೋದಿ ಅವರು ಅಪನಗದೀಕರಣದಿಂದ ಆದ ಲಾಭಗಳ ಮಾಹಿತಿ ಒಳಗೊಂಡ 7.13 ನಿಮಿಷದ ಕಿರು ಚಿತ್ರವೊಂದನ್ನು ನವೆಂಬರ್ 08ರ ಬುಧವಾರ ಟ್ವೀಟ್ ಮಾಡಿದ್ದಾರೆ.

ನೋಟ್ ಬ್ಯಾನ್ ಬೆಂಬಲಿಸಿದವರಿಗೆ ವಂದನೆ ಸಲ್ಲಿಸಿದ ಮೋದಿನೋಟ್ ಬ್ಯಾನ್ ಬೆಂಬಲಿಸಿದವರಿಗೆ ವಂದನೆ ಸಲ್ಲಿಸಿದ ಮೋದಿ

ಕಿರುಚಿತ್ರವು ನೋಟ್ ಬ್ಯಾನ್ ಗೆ ಮುಂಚಿನ ಮತ್ತು ನೋಟ್ ಬ್ಯಾನ್ ಆದ ದಿನಗಳ ಮತ್ತು ನಂತರದ ದಿನಗಳಲ್ಲಿ ನಡೆದ ಬೆಳವಣಿಗೆ, ನೋಟ್ ಬ್ಯಾನ್ ನಿಂದ ದೇಶದ ಜನತೆಗೆ, ಅರ್ಥ ವ್ಯವಸ್ಥೆಗೆ ಆದ ಲಾಭಗಳ ವಿವರ ನೀಡುತ್ತಿದೆ.

ಹಿನ್ನೆಲೆ ಧನಿಯೊಂದು, 'ದೇಶವು ಭ್ರಷ್ಟಾಚಾರ, ಕಪ್ಪುಹಣ, ಭಯೋತ್ಪಾದನೆಗಳಂತಹಾ ಪಿಡುಗುಗಳಲ್ಲಿ ಮುಳುಗಿಹೋಗಿತ್ತು. ಅಂತಹಾ ಸಮಯದಲ್ಲಿ ಮೋದಿ ಅಧಿಕಾರ ಸ್ವೀಕರಿಸಿದರು' ಎನ್ನುವುದರೊಂದಿಗೆ ಕಿರುಚಿತ್ರ ಆರಂಭವಾಗುತ್ತದೆ. ಮೋದಿ ಅವರು ಸಂಸತ್ ಪ್ರವೇಶಿಬೇಕಾದರೆ ಹೆಬ್ಬಾಲಿಗೆ ನಮಸ್ಕಾರ ಮಾಡಿದ ವಿಡಿಯೊ ತುಣುಕು, ಪ್ರತಿಜ್ಞಾ ವಿಧಿ ಸ್ವೀಕರಿಸಿದ, ಅಪನಗದೀಕರಣ ಭಾಷಣ, ಬ್ಯಾಂಕ್ ಮುಂದಿನ ಕ್ಯೂ ವಿಡಿಯೋ ತುಣುಕುಗಳನ್ನು ಬಳಸಲಾಗಿದೆ. ಅಂಕಿ ಅಂಶಗಳ ಗ್ರಾಫಿಕ್ಸ್ ಗಳನ್ನು ಬಳಸಿ ಸರಳ ಹಾಗೂ ಪರಿಣಾಮಕಾರಿಯಾಗಿ ವಿಡಿಯೋ ನಿರ್ಮಿಸಲಾಗಿದೆ.

ಡಿಜಿಟಲ್ ವ್ಯವಹಾರ ಉತ್ತೇಜನಕ್ಕೆ ಮತ್ತೆ ಪ್ರಚಾರಾಂದೋಲನಡಿಜಿಟಲ್ ವ್ಯವಹಾರ ಉತ್ತೇಜನಕ್ಕೆ ಮತ್ತೆ ಪ್ರಚಾರಾಂದೋಲನ

ಮೋದಿ ಅವರು ಟ್ವೀಟ್ ಮಾಡಿರುವ ವಿಡಿಯೊದಲ್ಲಿನ ಪ್ರಮುಖ ಅಂಶಗಳು ಹೀಗಿವೆ:

ಶ್ರಿಮಂತರ ನಿದ್ದೆ ಹಾಳಾಯಿತು

ಶ್ರಿಮಂತರ ನಿದ್ದೆ ಹಾಳಾಯಿತು

* ನೋಟ್ ಬ್ಯಾನ್ ಆದ ಕೂಡಲೇ, ಕಪ್ಪುಹಣ ಹಾಸಿಗೆಗಳಿಂದ, ಕಟ್ಟಡದ ಗೋಡೆಗಳಿಂದ, ಜೇಬುಗಳಿಂದ ಹಣ ಹೊರಗೆ ಬಂದು ಬ್ಯಾಂಕ್ ಗೆ ಸೇರುವಂತಾಯಿತು.

* ನೋಟ್ ಬ್ಯಾನ್ ನಿಂದ ಬಡವರು ನಿದ್ದೆಗೆಡಲಿಲ್ಲ, ಏಕೆಂದರೆ ಅವರ ಬಳಿ ಕಾಳಧನ ಇರಲಿಲ್ಲ, ನಿದ್ದೆ ಹಾರಿದ್ದು ಕಪ್ಪುಹಣ ಹೊಂದಿದ್ದ ಕಾಳಧನಿಕರದ್ದು ಮಾತ್ರ.

* ನೋಟ್ ಬ್ಯಾನ್ ನಂತರ 17.28 ಲಕ್ಷ ಕೋಟಿ ಹಣ ಬ್ಯಾಂಕ್ ಖಾತೆಗೆ ಜಮಾವಣೆಯಾಯಿತು. ಅದರಲ್ಲಿ ಕಾಳಧನವೂ ಸೇರಿತ್ತು.

* ಇದೀಗ ಸರ್ಕಾರದ ಬಳಿ ಕಪ್ಪುಹಣ ಹೊಂದಿದ್ದ ವ್ಯಕ್ತಿಗಳ ಹೆಸರು, ವಿಳಾಸ, ಭಾವಚಿತ್ರ ಎಲ್ಲವೂ ಇದೆ. ಇದಕ್ಕೆ ಕಾರಣ ನೋಟ್ ಬ್ಯಾನ್.

* ಬ್ಯಾಂಕುಗಳಲ್ಲಿ 3.74 ಲಕ್ಷ ಕೋಟಿ ಹಣದ ಮೂಲದ ಬಗ್ಗೆ ಪರಿಶೀಲನೆ ಚಾಲ್ತಿಯಲ್ಲಿದೆ. ಜೊತೆಗೆ 23 ಲಕ್ಷ ಬ್ಯಾಂಕ್ ಖಾತೆಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಭಯೋತ್ಪಾದನೆಗೆ ಹಿನ್ನೆಡೆ ಒಡ್ಡಿದ ನೋಟ್ ಬ್ಯಾನ್

ಭಯೋತ್ಪಾದನೆಗೆ ಹಿನ್ನೆಡೆ ಒಡ್ಡಿದ ನೋಟ್ ಬ್ಯಾನ್

* ದೇಶದಲ್ಲಿ ಚಲಾವಣೆಯಲ್ಲಿದ್ದ 33% ನಗದು ಹಣವನ್ನು ಕೇವಲ 0.00011 % ಜನಗಳು ಹೊಂದಿದ್ದರು ಎಂಬುದು ಗೊತ್ತಾಗಿದ್ದು ನೋಟ್ ಬ್ಯಾನ್ ನ ನಂತರವಷ್ಟೆ. ಈ 0.00011% ಜನಗಳು 5 ಲಕ್ಷ ಕೋಟಿ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ. ಇವರ ಆದಾಯದ ಮೂಲ ಹಾಗೂ ತೆರಿಗೆ ಇತಿಹಾಸದ ಬಗ್ಗೆ ತನಿಖೆ ಮಾಡಲಾಗುತ್ತಿದೆ.

* 500, 1000 ಮೌಲ್ಯದ ನೋಟುಗಳಿಂದ ಭ್ರಷ್ಟಾಚಾರ, ಹವಾಲಾ, ಭಯೋತ್ಪಾದನೆಯಂತ ದೇಶವಿರೋಧಿ ಕೃತ್ಯಗಳು ಹೆಚ್ಚಾಗಿದ್ದುವು. ನೋಟ್ ಬ್ಯಾನ್ ನಿಂದಾಗಿ ಇವಕ್ಕೆ ಭಾರಿ ಹೊಡೆತ ಬಿತ್ತು.

* ಈಗ ದೇಶದಲ್ಲಿ 12 ಲಕ್ಷ ಕೋಟಿ ಮೌಲ್ಯದ ನೋಟುಗಳು ಚಲಾವಣೆಯಲ್ಲಿದೆ. ನೋಟ್ ಬ್ಯಾನ್ ಆಗದೇ ಇದ್ದಿದ್ದರೆ 18 ಲಕ್ಷ ಕೋಟಿ ದೊಡ್ಡ ಮೊತ್ತದ ನೋಟುಗಳು ಚಲಾವಣೆಯಲ್ಲಿರುತ್ತಿದ್ದವು.

* ನೋಟ್ ಬ್ಯಾನ್ ನಿಂದ ಭಯೋತ್ಪಾದನೆ, ನಕ್ಸಲ್ ಚಟುವಟಿಕೆಗಳಿಗೆ ಹಿನ್ನಡೆ ಉಂಟಾಯಿತು. ಕಾಶ್ಮೀರದಲ್ಲಿ ಕಲ್ಲು ತೂರಾಟ 75% ಕಡಿಮೆ ಆಯಿತು. ಖೋಟಾ ನೋಟು ಸಂಪೂರ್ಣ ನಿಂತು ಹೋಯಿತು.

ಬೇನಾಮಿ ಆಸ್ತಿ ಸರ್ಕಾರದ ವಶಕ್ಕೆ

ಬೇನಾಮಿ ಆಸ್ತಿ ಸರ್ಕಾರದ ವಶಕ್ಕೆ

* ಅಪನಗದೀಕರಣದ ಅವಧಿಯಲ್ಲಿ 2.24 ಲಕ್ಷ ಖೋಟಾ ಕಂಪೆನಿಗಳು ಮುಚ್ಚಲ್ಪಟ್ಟವು.

* ಒಂದು ವಿಳಾಸದಲ್ಲಿ ನೂರು ಕಂಪೆನಿಗಳನ್ನು ನೊಂದಾಯಿಸಿರುವುದು ಹಾಗೂ ಒಂದು ಕಂಪೆನಿ ಹೆಸರಲ್ಲಿ ನೂರಾರು ಖಾತೆ ತೆರೆದಿರುವ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದವು.

* 1626 ಕೋಟಿ ಬೇನಾಮಿ ಆಸ್ತಿಯನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡಿತು.

* ಕಾರ್ಪೊರೇಟ್ ಕಂಪೆನಿಗಳು ತೆರಿಗೆ ವಂಚಿಸಲು ಬಳಸುತ್ತಿದ್ದ ನುಸುಳು ದಾರಿಗಳು ಸರ್ಕಾರದ ಗಮನಕ್ಕೆ ಬಂದವು.

* ವಿದೇಶದಲ್ಲಿ ಬಂಡವಾಳ ತೊಡಗಿಸಿರುವುದಾಗಿ ದಾಖಲೆ ತೋರಿಸಿ ತೆರಿಗೆ ವಿನಾಯಿತಿ ಪಡೆಯುತ್ತಿದ್ದ ನಕಲಿ ಕಂಪೆನಿಗಳ 'ಬಂಡವಾಳ' ಬಯಲಾಯ್ತು.

ತೆರಿಗೆ ಹಣ ಅಭಿವೃದ್ಧಿಗೆ ಬಳಕೆ

ತೆರಿಗೆ ಹಣ ಅಭಿವೃದ್ಧಿಗೆ ಬಳಕೆ

* ಪಿಓಎಸ್ ಮಷೀನ್ ಬಳಸುವವರ ಸಂಖ್ಯೆ 15 ಲಕ್ಷದಿಂದ ಒಂದೇ ವರ್ಷದಲ್ಲಿ 30 ಲಕ್ಷವಾಯಿತು.

* ನೋಟ್ ಬ್ಯಾನ್ ನಂತರ ತೆರಿಗೆ ಪಾವತಿಸುವವರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿ 84.21 ಲಕ್ಷಕ್ಕೂ ಹೆಚ್ಚು ಹೊಸ ತೆರಿಗೆದಾರರು ತೆರಿಗೆ ಪಾವತಿಸಲು ಪ್ರಾರಂಭಿಸಿದ್ದಾರೆ.

* ಆನ್ ಲೈನ್ ರಿಟರ್ನ್ಸ್ ಪಾವತಿ ಮಾಡುವವರ ಸಂಖ್ಯೆ 3 ಕೋಟಿಯನ್ನು ದಾಟಿದೆ.

* ತೆರಿಗೆ ಸಂಗ್ರಹದಲ್ಲಿ ಆಮೂಲಾಗ್ರವಾಗಿ ಹೆಚ್ಚಳವಾದ ಪರಿಣಾಮ ಅದರ ಲಾಭ ಬಡವರು, ಶ್ರಮಿಕರು ಮತ್ತು ದೇಶದ ಮೂಲಸೌಕರ್ಯ ವೃದ್ಧಿಗೆ ಬಳಕೆಯಾಗುತ್ತಿದೆ.

* ನೋಟ್ ಬ್ಯಾನ್ ನಂತರ ನಗದು ರಹಿತ ವ್ಯವಹಾರ ಮಾಡುವವರ ಸಂಖ್ಯೆ 80% ಹೆಚ್ಚಳವಾಯಿತು.

ಬಡ್ಡಿದರದಲ್ಲಿ ಇಳಿಕೆ

ಬಡ್ಡಿದರದಲ್ಲಿ ಇಳಿಕೆ

* ನೋಟ್ ಬ್ಯಾನ್ ಬಳಿಕ ಬ್ಯಾಂಕ್ ನ ಒಳಹರಿವು ಹೆಚ್ಚಾದ ಕಾರಣ ಬಡ್ಡಿ ದರಗಳಲ್ಲಿ ಇಳಿಕೆ ಉಂಟಾಯಿತು. ಆಸ್ತಿ ಬೆಲೆಗಳಲ್ಲಿ ಗಣನೀಯ ಇಳಿಯುಂಟಾಯಿತು ಇದರಿಂದ ಬಡ ಮಧ್ಯಮ ವರ್ಗದವರು ಮನೆ ಕೊಳ್ಳಲು ಸಹಾಯವಾಯಿತು.

* ನೋಟ್ ಬ್ಯಾನ್ ನಂತರ ಸ್ಥಳೀಯ ಆಡಳಿತಗಳಲ್ಲಿ ಸಂಗ್ರಹವಾಗುತ್ತಿದ್ದ ತೆರೆಗೆ ಹಣ 2015 ಕ್ಕೆ ಹೋಲಿಸಿದರೆ 3 ಪಟ್ಟು ಹೆಚ್ಚಾಯಿತು.

* ವರ್ಷಾನುಗಟ್ಟಲೆ ಮಗೆಗಳಲ್ಲಿ ಅಡಗಿಸಿಟ್ಟಿದ್ದ ಹಣವೆಲ್ಲವೂ ಬ್ಯಾಂಕ್ ಮುಖಾಂತರ ಅರ್ಥವ್ಯವಸ್ಥೆಯ ಒಳಗೆ ಬಂದವು.

ದೇಶದ ಜನರು ಗೆದ್ದ ಯುದ್ಧ

ದೇಶದ ಜನರು ಗೆದ್ದ ಯುದ್ಧ

* ನೋಟ್ ಬ್ಯಾನ್ ನಂತರ 50 ಲಕ್ಷ ಶ್ರಮಿಕರ ಹೊಸ ಬ್ಯಾಂಕ್ ಖಾತೆ ತೆರೆಯಲಾಯಿತು. ಸರ್ಕಾರದ ಅನುದಾನ ನೇರವಾಗಿ ಅವರಿಗೆ ತಲುಪುವುದು ಇದರಿಂದ ಸುಗಮವಾಯಿತು.

* 1.01 ಕೋಟಿ ಕಾರ್ಮಿಕರ ಹೆಸರನ್ನು ಪ್ರಾವಿಡೆಂಟ್ ಪಂಡ್ (ಭವಿಷ್ಯ ನಿಧಿ) ಗೆ ಜೋಡಿಸಲಾಯಿತು.

* ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿ ಇ.ಎಸ್.ಐ.ಸಿ ಗೆ 1.03 ಕೋಟಿ ಹೊಸ ಕಾರ್ಮಿಕರ ನೊಂದಾವಣಿಯಾಗಿ ಸರ್ಕಾರದ ಸವಲತ್ತುಗಳು ಅವರಿಗೆ ದೊರಕುವಂತಾಯಿತು.

* ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧದ ಈ ಹೋರಾಟದಲ್ಲಿ ಹಳ್ಳಿಗಳೂ, ಪಟ್ಟಣಗಳು, ಯುಕವರು, ವಯಸ್ಕರು ಎಲ್ಲರೂ ಪಾಲ್ಗೊಂಡಿದ್ದಾರೆ, ಹಾಗೂ ಹೋರಾಟದಲ್ಲಿ ಜಯ ಸಾಧಿಸಿದ್ದಾರೆ.

English summary
Prime minister Naredra Modi uploded a short video witch showing Benifits of Demonatisation on occation of one year of demonatisation. video includes Effects of Demonatisation on Indian Economy, Daily Life, Increasing of Tax, Corroption, Indian Infrastructure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X