ವಾಜಪೇಯಿಯವರ ದಿಟ್ಟ ನಿರ್ಧಾರ ನೆನೆದ ನರೇಂದ್ರ ಮೋದಿ

ನವದೆಹಲಿ, ಜುಲೈ 26: ಇಡೀ ದೇಶವೂ ಕಾರ್ಗಿಲ್ ವಿಜಯ ದಿವಸದ ರೋಚಕ ಕ್ಷಣಗಳ ಮೆಲುಕಿನಲ್ಲಿದ್ದರೆ, ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ.

"ಕಾರ್ಕಿಲ್ ಯುದ್ಧದ ಸಮಯದಲ್ಲಿ ಆಗಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ನೀಡಿದ ಅಮೋಘ ರಾಜಕೀಯ ನಾಯಕತ್ವವನ್ನು ಭಾರತ ಎಂದಿಗೂ ಮರೆಯುವುದಿಲ್ಲ. ಅದು ಭಾರತದ ಹೆಮ್ಮೆ. ಅವರು ಆ ಸಂಕಷ್ಟದ ದಿನಗಳಲ್ಲಿ ಮುಂದೆ ನಿಂತು, ಸೇನೆಗೆ ಸಂಪೂರ್ಣ ಬೆಂಬಲ ನೀಡಿದರು. ಇಡೀ ವಿಶಸ್ವಕ್ಕೂ ಭಾರತದ ಶಕ್ತಿ ಏನು ಎಂಬುದನ್ನು ತೋರಿಸಿಕೊಟ್ಟರು" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

1999 ರ ಮೇ ತಿಂಗಳಿನಿಂದ ಜುಲೈ ತಿಂಗಳವರೆಗೆ ನಡೆದ ಕಾರ್ಗಿಲ್ ಯುದ್ಧದಲ್ಲಿ ಜುಲೈ 26 ರಂದು ಭಾರತ ವಿಜಯ ಪತಾಕೆ ಹಾರಿಸಿತು. ಈ ಸಂದರ್ಭದಲ್ಲಿ ಭಾರತೀಯ ಸೇನೆಯ 500 ಕ್ಕೂ ಹೆಚ್ಚು ಯೋಧರು ಹುತಾತ್ಮರಾದರೆ, ಪಾಕ್ ಸೇನೆಯ 1000 ಕ್ಕೂ ಹೆಚ್ಚು ಸೈನಿಕರನ್ನು ಸದೆಬಡಿಯಲಾಗಿತ್ತು. ಈ ಮೂಲಕ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲಾಗಿತ್ತು.

ಆಗ ಭಾರತದ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಸಮರ್ಥ ನಾಯಕತ್ವವೇ ಇ ಗೆಲುವಿಗೆ ಕಾರಣ ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

Modi remembers Atal Bihari Vajpayee on Kargil Vijay Diwas

"ಆಪರೇಶನ್ ವಿಜಯಕ್ಕಾಗಿ ದೇಶ ಸೇವೆ ಮಾಡಿದ ಎಲ್ಲಾ ಯೋಧರಿಗೂ ಈ ದೇಶ ಕೃತಜ್ಞವಾಗಿದೆ. ಭಾರತ ಸುಭದ್ರವಾಗಿದೆ ಮತ್ತು ಅದರ ಮೇಲೆ ದಾಳಿ ನಡೆಸಲು ಬರುವವರಿಗೆ ನಾವು ತಕ್ಕ ಉತ್ತರ ನೀಡುತ್ತೇವೆ ಎಂಬುದನ್ನು ಸಾಬೀತುಪಡಿಸಿದ ನಮ್ಮ ವೀರ ಯೋಧರು ನಮ್ಮ ಹೆಮ್ಮೆ. ಅವರಿಗೆ ನಮ್ಮ ನಮನ" ಎಂದು ಸಹ ಇದೇ ಸಂದರ್ಭದಲ್ಲಿ ಮೋದಿ ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+