ವಾರಣಾಸಿ: ಮೋದಿಗೆ ಅಡ್ಡಗಾಲು ಹಾಕಿದ ಡಿಸಿ ಯಾರು?
ವಾರಣಾಸಿ, ಮೇ 9: ವಾರಣಾಸಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿಯ ಪೂರ್ವಯೋಜಿತ ರ್‍ಯಾಲಿಗೆ ಅನುಮತಿ ನಿರಾಕರಿಸಿದ ಚುನಾವಣಾ ಆಯೋಗದ ವಿರುದ್ಧ ಬಿಜೆಪಿ ಕೆಂಡಕಾರಿದೆ. ಇದರಿಂದ ವಾರಣಾಸಿ ಕ್ಷೇತ್ರವು ಈಗ ಅಕ್ಷರಶಃ ರಣಾಂಗಣವಾಗಿದೆ.
ಅಪ್ರಾಂಜಲ ಪ್ರಾಂಜಲ ಯಾದವ್

ಕಳೆದ ವಾರವಷ್ಟೇ ಮೋದಿಗೆ ಜೀವ ಬೆದರಿಕೆಯಿಲ್ಲ, ಅವರಿಗೆ ಭದ್ರತೆಯ ಭಯ ಬೇಡ ಎಂದು ಕೇಂದ್ರದ ಇಬ್ಬರು ಸಚಿವರುಗಳಾದ ಸುಶೀಲ್ ಕುಮಾರ್ ಶಿಂಧೆ ಮತ್ತು ಚಿದಂಬರಂ ಅವರು ಹೇಳಿದ್ದರು. ಆದರೆ ಇದ್ದಕ್ಕಿದ್ದಂತೆ ಮುಲಾಯಂ ಸಿಂಗ್ ಅವರ ಪುತ್ರನ ಆಡಳಿತವು ಮೋದಿಗೆ ನೋ ಅಂದಿದೆ. ಇದರ ಹಿಂದಿನ ಮರ್ಮವೇನು ಎಂದು ನೋಡಿದಾಗ... ಬೇರೆಯದೇ ಕತೆ ಬಿಚ್ಚಿಕೊಳ್ಳುತ್ತಿದೆ.
* ರ್‍ಯಾಲಿಗೆ ಅವಕಾಶ ನಿರಾಕರಿಸಿದ್ದು ವಾರಣಾಸಿಯ ಜಿಲ್ಲಾಧಿಕಾರಿ ಪ್ರಾಂಜಲ ಯಾದವ್. ಈತ ಬೇರೆ ಯಾರೋ ಅಲ್ಲ. ಮುಲಾಯಂ ಸಿಂಗ್ ಅವರ ಹತ್ತಿರದ ಸಂಬಂಧಿ.
* 'ಪ್ರಾಂಜಲ' ಯಾದವರ ಪೂರ್ವಾಪರ ತಿಳಿದುಕೊಂಡ ಬಿಜೆಪಿ ಇದೀಗ ಕ್ಷೇತ್ರದಲ್ಲಿ ನಿಷ್ಪಕ್ಷಪಾತ ಚುನಾವಣೆ ನಡೆಯುವುದು ದೂರದ ಮಾತಾಗಿದೆ. ಹಾಗಾಗಿ ತಕ್ಷಣ ಅವರನ್ನು ಎತ್ತಂಗಡಿ ಮಾಡಿ ಎಂದು ಪಟ್ಟು ಹಿಡಿದಿದೆ. ಆದರೆ ಚುನಾವಣಾ ಆಯೋಗ ಇದಕ್ಕೆ ಓಗೊಡುತ್ತದಾ?
* 35 ವರ್ಷದ ಪ್ರಾಂಜಲ ಯಾದವ್ 2006ನೇ ಬ್ಯಾಚ್ ಐಎಎಸ್ ಅಧಿಕಾರಿ. ಐಐಟಿ ರೂರ್ಕಿಯ ಬಿಟೆಕ್ ವಿದ್ಯಾರ್ಥಿ.












Click it and Unblock the Notifications