ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಶ್ರಮಕ್ಕೆ ಕೇಂದ್ರ ಸರಕಾರದಿಂದ ಬೆಂಬಲ ಬೆಲೆಯ ಬೆನ್ನೆಲುಬು

|
Google Oneindia Kannada News

Recommended Video

ರೈತರ ಶ್ರಮಕ್ಕೆ ಕೇಂದ್ರ ಸರಕಾರದಿಂದ ಬೆಂಬಲ ಬೆಲೆ ಘೋಷಣೆ | Oneindia Kannada

ನವದೆಹಲಿ, ಅಕ್ಟೋಬರ್ 30: 2022ನೇ ಇಸವಿ ಹೊತ್ತಿಗೆ ರೈತರಿಗೆ ಕೃಷಿ ಆದಾಯ ದ್ವಿಗುಣಗೊಳಿಸಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಕನಸು. ಅದಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ.

ಈ ತಿಂಗಳ ಆರಂಭದಲ್ಲಿ ಕೇಂದ್ರ ಸರಕಾರವು ಚಳಿಗಾಲದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ ಹೆಚ್ಚಿಸಿದೆ. ಏಕೆಂದರೆ, ರೈತರು ಕೃಷಿ ಚಟುವಟಿಕೆಗೆ ಖರ್ಚು ಮಾಡುವುದಕ್ಕಿಂತ 50% ಹೆಚ್ಚಿಗೆ ಪಡೆಯಬೇಕು ಎಂಬುದು ಇದರ ಹಿಂದಿನ ಉದ್ದೇಶ.

ಹಣಕಾಸು ಸೇವೆ ಒದಗಿಸುವ ಅಂಚೆ ಇಲಾಖೆಯ ಜೀವನಾಡಿ ಡಾಕ್ ಸೇವಕ್ಹಣಕಾಸು ಸೇವೆ ಒದಗಿಸುವ ಅಂಚೆ ಇಲಾಖೆಯ ಜೀವನಾಡಿ ಡಾಕ್ ಸೇವಕ್

2016-17 ಹಾಗೂ 2017-18ರಲ್ಲಿ ದಾಖಲೆ ಪ್ರಮಾಣದಲ್ಲಿ ಕೃಷಿ ಇಳುವರಿಯಾಗಿತ್ತು. ಇದರಿಂದ ಕೃಷಿ ಆದಾಯಕ್ಕೆ ಹೊಡೆತ ಬಿತ್ತು. ಆಗಿನಿಂದ ಹೆಚ್ಚಿನ ಬೆಲೆ ನಿಗದಿ ಹಾಗೂ ಸಾಲ ಮನ್ನಾಕ್ಕಾಗಿ ಕೃಷಿಕರು ಒತ್ತಾಯಿಸುತ್ತಿದ್ದಾರೆ. ಕಳೆದ ಜುಲೈ ತಿಂಗಳಲ್ಲಿ ಕೇಂದ್ರ ಸರಕಾರವು 14 ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಏರಿಸಿತು.

ಅದರ ಹಿಂದಿನ ಉದ್ದೇಶ ಏನೆಂದರೆ, ರೈತರು ಬೆಳೆಗಾಗಿ ಖರ್ಚು ಮಾಡಿದ್ದಕ್ಕಿಂತ ಶೇಕಡಾ 50ರಷ್ಟು ಹೆಚ್ಚಿನ ಆದಾಯ ಪಡೆಯಬೇಕು ಎಂಬುದು. ಅದು ಈ ವರ್ಷದ ಕೇಂದ್ರ ಬಜೆಟ್ ನಲ್ಲಿ ನೀಡಿದ ಭರವಸೆ. ಸೆಪ್ಟೆಂಬರ್ ನಲ್ಲಿ ಕೇಂದ್ರ ಸರಕಾರವು ಹೊಸ ಬೆಂಬಲ ಬೆಲೆ ಘೋಷಣೆ ಮಾಡಿದೆ. ಈ ಕನಿಷ್ಠ ಬೆಂಬಲ ಬೆಲೆಯಿಂದ ಬೇಳೆ ಕಾಳುಗಳು ಹಾಗೂ ಎಣ್ಣೆ ಬೀಜಗಳು ಬೆಳೆಯುವ ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶ ಇದೆ.

Modi Govts MSP initiative: A boon to farmers

ಆಹಾರವು ಮನುಷ್ಯರು ಮೂಲಭೂತ ಅಗತ್ಯದಲ್ಲಿ ಒಂದು. ಭಾರತದ 132 ಕೋಟಿ ಜನಸಂಖ್ಯೆಗೆ ಆಹಾರ ಒದಗಿಸುವುದು ಸುಲಭದ ಸಂಗತಿ ಅಲ್ಲ. ರೈತರು ಶ್ರಮವರಿಯದೆ ದುಡಿಯುತ್ತಿರುವರಿಂದ ಇತರ ವರ್ಗದವರು ನಿತ್ಯವು ತಮ್ಮ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿದೆ.

ಭಾರತದ ಒಟ್ಟು ದುಡಿಯುವ ವರ್ಗದ ಪೈಕಿ ಕೃಷಿಯಲ್ಲಿ ತೊಡಗಿದವರ ಪ್ರಮಾಣ 50% ಇದೆ. ಜತೆಗೆ ಕೃಷಿಯು ದೊಡ್ಡ ಆರ್ಥಿಕ ವಲಯ. ಭಾರತದ ಸಾಮಾಜಿಕ- ಆರ್ಥಿಕ ವ್ಯವಸ್ಥೆ ಮೇಲೆ ಇದರ ಪ್ರಭಾವ ಪ್ರಮುಖವಾಗಿದೆ. ದಿನದಿಂದ ದಿನಕ್ಕೆ ಏರುತ್ತಿರುವ ಜನಸಂಖ್ಯೆ ಪ್ರಮಾಣಕ್ಕೆ ತಕ್ಕಂತೆ ಆಹಾರ ಬೆಳೆಗಳನ್ನು ಬೆಳೆಯುವುದು ಮುಖ್ಯವಾಗುತ್ತದೆ.

ಮೋದಿ ಕನಸು ನನಸು, ಅಂಚೆ ಪೇಮೆಂಟ್ ಬ್ಯಾಂಕಿನಲ್ಲಿ ಏನೇನು ಲಭ್ಯ ಮೋದಿ ಕನಸು ನನಸು, ಅಂಚೆ ಪೇಮೆಂಟ್ ಬ್ಯಾಂಕಿನಲ್ಲಿ ಏನೇನು ಲಭ್ಯ

ಬ್ರೆಜಿಲ್, ಚೀನಾದಂತೆ ಕೃಷಿ ಉತ್ಪಾದನೆ ಹೆಚ್ಚಿಸಬೇಕು. ಇತ್ತೀಚಿನ ಅಧ್ಯಯನದ ಪ್ರಕಾರ, ಹೆಚ್ಚುತ್ತಿರುವ ಜನಸಂಖ್ಯೆಗೆ ಭಾರತವು ಸುಲಭವಾಗಿ ಆಹಾರ ಒದಗಿಸಬಹುದು. ಜತೆಗೆ ಗೋಧಿ ಮತ್ತು ಭತ್ತವನ್ನು ಜಾಗತಿಕವಾಗಿ ರಫ್ತು ಮಾಡುವಷ್ಟು ಬೆಳೆಯಬಹುದು.

ಮಾರುಕಟ್ಟೆ ಏರಿಳಿತ ಹಾಗೂ ದರಗಳ ಏರಿಳಿತದ ಸಮಸ್ಯೆ ನಿವಾರಣೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಲು ತೀರ್ಮಾನಿಸಲಾಗಿದೆ. ಎಷ್ಟೋ ಸಲ ಕೆಲವು ಬೆಳೆಗಳ ಸಗಟು ದರ ಯಾವ ಪರಿಯಲ್ಲಿ ಕುಸಿದುಹೋಗುತ್ತದೆ ಅಂದರೆ, ಆ ಬೆಳೆ ಬೆಳೆಯಲು ಆಗಿರುವ ವೆಚ್ಚ ಕೂಡ ಕೃಷಿಕರಿಗೆ ಸಿಗುವುದಿಲ್ಲ. ಅಂಥ ಸನ್ನಿವೇಶದಲ್ಲಿ ರೈತರ ಕಷ್ಟಗಳಿಗೆ ಮಾರುಕಟ್ಟೆಯಲ್ಲಿ ಕನಿಷ್ಠ ಬೆಂಬಲ ಬೆಲೆಯಿಂದ ನೆರವಾಗುತ್ತದೆ.

ಭಾರತೀಯ ಕೃಷಿಕರ ಸಮಸ್ಯೆ ಬಹಳ ವಿಸ್ತಾರವಾದದ್ದು. ಆ ಪೈಕಿ ಕೆಲವದ್ದನ್ನು ನಿವಾರಿಸಲೇಬೇಕು. ಕೃಷಿಯಿಂದ ರೈತರು ಲಾಭ ಮಾಡಲು ಆಗುತ್ತಿಲ್ಲ. ಲಾಭ ಮಾಡಲು ಆಗದ ಹೊರತು ರೈತರ ಸ್ಥಿತಿಯಲ್ಲಿ ಸುಧಾರಣೆ ಆಗುವುದಿಲ್ಲ. ಇಂದಿಗೂ ಕೂಡ ಭಾರತದ ರೈತರು ಬಡವರಾಗಿಯೇ ಕಂಡುಬರುತ್ತಾರೆ. ಹಾಗೂ ಬೆಳಗ್ಗೆಯಿಂದ ಸಂಜೆ ತನಕ ಜಮೀನಿನಲ್ಲಿ ದುಡಿಮೆ ಮಾಡುತ್ತಾ ಉಳಿದುಹೋಗುತ್ತಾರೆ.

ಕಡಿಮೆ ದರದ ಔಷಧ-ಸಲಕರಣೆ, ಶ್ರೀ ಸಾಮಾನ್ಯರ ಬದುಕಿಗೆ ಸರಕಾರದ ನಿಯಮಕಡಿಮೆ ದರದ ಔಷಧ-ಸಲಕರಣೆ, ಶ್ರೀ ಸಾಮಾನ್ಯರ ಬದುಕಿಗೆ ಸರಕಾರದ ನಿಯಮ

2018-19ರ ಬಜೆಟ್ ನಲ್ಲಿ ಕೃಷಿ ಸಚಿವಾಲಯಕ್ಕೆ ನೀಡುವ ಮೊತ್ತವನ್ನು 13% ಏರಿಕೆ ಮಾಡಿ, ರು.58,080 ಕೋಟಿಗೆ ಹೆಚ್ಚಿಸಲಾಗಿದೆ. 2017-18ರಲ್ಲಿ ಈ ಮೊತ್ತ 51,576 ಕೋಟಿ ಇತ್ತು. 2014-19ರ ಅವಧಿಯನ್ನು 2009-14ರ ಮಧ್ಯದ ಸಮಯಕ್ಕೆ ಹೋಲಿಸಿದರೆ ಬಜೆಟ್ ನಲ್ಲಿ ಮೀಸಲಾದ ಪ್ರಮಾಣ 74.5% ಏರಿಕೆ ಆಗಿದೆ.

1,21,082 ಕೋಟಿಯಿಂದ 2,11,694 ಕೋಟಿಗೆ ಹೆಚ್ಚಳವಾಗಿದೆ. ಕೃಷಿ ಸಾಲ ನೀಡಿಕೆ ಮೊತ್ತವು 2018-19ನೇ ಸಾಲಿಗೆ 11 ಲಕ್ಷ ಕೋಟಿಗೆ ಹೆಚ್ಚಳವಾಗಿದೆ. 2017-18ರಲ್ಲಿ ಈ ಮೊತ್ತ 10 ಲಕ್ಷ ಕೋಟಿ ರುಪಾಯಿ ಇತ್ತು.

ಪ್ರಧಾನ ಮಂತ್ರಿ ಆವಾಸ್ ಯೋಜನೆ ಬಗ್ಗೆ ಇಲ್ಲಿದೆ ಸಮಗ್ರ ಮಾಹಿತಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಬಗ್ಗೆ ಇಲ್ಲಿದೆ ಸಮಗ್ರ ಮಾಹಿತಿ

ಈಗ ಅಧಿಕಾರದಲ್ಲಿ ಇರುವ ಬಿಜೆಪಿ ನೇತೃತ್ವದ ಸರಕಾರವು ರೈತರಿಗಾಗಿ ಸಾಕಷ್ಟು ಕೆಲಸ ಮಾಡಿದೆ. ರೈತರ ಸ್ಥಿತಿಯು ಸುಧಾರಿಸಲು ಇನ್ನಷ್ಟು ಯೋಜನೆಗಳನ್ನು ಜಾರಿಗೆ ತರಬೇಕಿದೆ. ಕನಿಷ್ಠ ಬೆಂಬಲ ಬೆಲೆಯಿಂದ ಒಂದು ಸಮಸ್ಯೆಯನ್ನಷ್ಟೇ ನಿವಾರಿಸಲು ಸಾಧ್ಯ. ಕೃಷಿ ಉತ್ಪಾದನೆ ಹೆಚ್ಚಳ, ಕೃಷಿ ಯಂತ್ರಗಳ ಪರಿಣಾಮಕಾರಿ ಬಳಕೆ ಆಗಬೇಕು ಹಾಗೂ ಗುಣಮಟ್ಟದ ಬೀಜಗಳು ದೊರೆಯಬೇಕು.

English summary
Prime Minister Narendra Modi has vowed to double the income of farmers by 2022 and the BJP-led government has taken several initiatives for it. Earlier this month, the Centre raised minimum support prices (MSP) for winter crops to ensure farmers get 50% more than what they spend on cultivation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X