ಮೋದಿ ಕನಸಂತೆ ಕಡಿಮೆ ದರದಲ್ಲಿ ಜೀವರಕ್ಷಕ ಔಷಧಿ
ನವದೆಹಲಿ, ಫೆ.3: ಪ್ರಧಾನಿ ನರೇಂದ್ರ ಮೋದಿ ಅವರ ಮತ್ತೊಂದು ಕನಸಿನ ಯೋಜನೆ ಸಾಕಾರಗೊಳ್ಳಲು ಸಿದ್ಧವಾಗಿದೆ. ಕೈಗೆಟುಕುವ ದರದಲ್ಲಿ ಉತ್ತಮ ಔಷಧಿ ಒದಗಿಸುವ ಜನ್ ಔಷಧಿ ಬ್ರ್ಯಾಂಡ್ ದೇಶದೆಲ್ಲೆಡೆ ಲಭ್ಯವಾಗಲಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಈ ಯೋಜನೆ ಜನ್ ಔಷಧಿ ಜುಲೈ.1 ರಿಂದ ದೇಶಾದ್ಯಂತೆ ಜಾರಿಗೆ ಬರಲಿದೆ. ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಔಷಧಿ ಒದಗಿಸುವ ಯೋಜನೆ ಇದಾಗಿದೆ.
ಉತ್ತಮ ಗುಣ ಮಟ್ಟದ ಸುಮಾರು 504 ಔಷಧಗಳು ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿವೆ. ಸಾರ್ವಜನಿಕ ಆಸ್ಪತ್ರೆಗಳಲ್ಲಿ ಇವು ಲಭ್ಯವಾಗಲಿದ್ದು, ಖಾಸಗಿ ಔಷಧಾಲಯಗಳಿಗೆ ಸ್ಪರ್ಧೆವೊಡ್ಡುವ ಯೋಜನೆ ಇದಾಗಿದೆ.[ಮಧುಮೇಹ ರೋಗಿಗಳಿಗೆ ಸಕತ್ 'ಸಿಹಿ' ಸುದ್ದಿ]

ಖಾಸಗಿ ಔಷಧಾಲಯಗಳಲ್ಲಿ ಅತಿ ಹೆಚ್ಚು ದರಗಳಲ್ಲಿ ಔಷಧಗಳನ್ನು ಮಾರಾಟ ಮಾಡುವುದರಿಂದ ಸಾರ್ವಜನಿಕರಿಗೆ ಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಕೆಲ ಸಂದರ್ಭಗಳಲ್ಲಿ ಉತ್ತಮ ಔಷಧಗಳು ಸಿಗದೆ ಕೆಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಹೀಗಾಗಿ ಜೀವರಕ್ಷಕ ಔಷಧಿಗಳನ್ನು ಸೂಕ್ತ ಸಮಯಕ್ಕೆ ಆರ್ಥಿಕವಾಗಿ ಹಿಂದುಳಿದವರು ಕೂಡಾ ಖರೀದಿಸಲು ಈ ಯೋಜನೆ ಸಹಕಾರಿಯಾಗಲಿದೆ. [ಬಂದಿದೆ : ನೋವು ನಿವಾರಕ ನಮೋ ಗುಳಿಗೆ ]
* ಜನ್ ಔಷಧ ಎಂಬ ವಿನೂತನ ಯೋಜನೆ ಮೂಲಕ ಸಕ್ಕರೆ ಖಾಯಿಲೆ, ಉಸಿರಾಟದ ತೊಂದರೆ, ಹೃದಯ ಸಂಬಂಧಿ ಕಾಯಿಲೆಗಳು, ರೋಗನಿವಾರಕಗಳು ಸೇರಿದಂತೆ ವಿವಿಧ ಕಾಯಿಲೆಗಳಿಗೆ ಔಷಧಗಳು ಕಡಿಮೆ ದರದಲ್ಲಿ ಲಭ್ಯವಾಗಲಿದೆ.
* ಮೊದಲ ಹಂತದಲ್ಲಿ ದೇಶದ 100 ಆಸ್ಪತ್ರೆಗಳಲ್ಲಿ ಇದು ಪ್ರಾಯೋಗಿಕವಾಗಿ ಚಾಲನಗೊಳ್ಳಲಿದ್ದು, ಎರಡನೇ ಹಂತದಲ್ಲಿ ದೇಶದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಿದೆ. [ತಮಿಳುನಾಡಿನಲ್ಲಿ 'ಅಮ್ಮ' ಹೆಸರಿನ ಫಾರ್ಮಸಿ]
* ಮೊದಲ ಬಾರಿಗೆ ಜುಲೈ 1 ರಂದು 500 ಬಗೆಯ ಔಷಧಗಳು ದೊರೆಯಲಿದ್ದು, ನಂತರದಲ್ಲಿ 800 ಬಗೆಯ ಔಷಧಗಳನ್ನು ವಿತರಣೆ ಮಾಡಲಿದೆ.
* ಔಷಧ ಮಾರುಕಟ್ಟೆ ಸುಮಾರು 87 ಸಾವಿರ ಕೋಟಿ ರೂ. ವಾರ್ಷಿಕ ಆದಾಯ ಹೊಂದಿದೆ.
* ಹೆಚ್ಚಿನ ಮಾಹಿತಿಗೆ ರಾಷ್ಟ್ರವ್ಯಾಪ್ತಿ ಸಹಾಯವಾಣಿ: 1800-180-80-80
* ಜನ್ ಔಷಧಿಯಲ್ಲಿ ಲಭ್ಯವಿರುವ ಔಷಧಗಳ ಪಟ್ಟಿ ಇಲ್ಲಿದೆ












Click it and Unblock the Notifications