ಬಂದಿದೆ : ನೋವು ನಿವಾರಕ ನಮೋ ಗುಳಿಗೆ

ಉತ್ತರಾಖಂಡ್, ಜೂ.22: ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯ ಲಾಭ ಪಡೆದುಕೊಳ್ಳುವ ನಿಟ್ಟಿನಲ್ಲಿ ಹಲ್ದ್ವಾನಿ ನಗರದ ವರ್ತಕರೊಬ್ಬರು ಸಕತ್ ಯೋಜನೆ ಹಾಕಿಕೊಂಡಿದ್ದಾರೆ. ಔಷಧ ವ್ಯಾಪರಿಯೊಬ್ಬರು ನರೇಂದ್ರ ಮೋದಿ ಹೆಸರಿನಲ್ಲಿ ನೋವು ನಿವಾರಕ ಗುಳಿಗೆಯನ್ನು ಹೊರ ತಂದಿದ್ದಾರೆ..

ಉತ್ತರಾಖಂಡ್ ರಾಜ್ಯದ ನೈನಿತಾಲ್ ಜಿಲ್ಲೆಯ ಕೆ ಹಲ್ವ್ ವಾನಿ ಹಾಗೂ ಖಾರ್ ಗೊದಾಮ್ ಅವಳಿ ನಗರಗಳಲ್ಲಿ ನರೇಂದ್ರ ಮೋದಿ (ನಮೋ) ಗುಳಿಗೆ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.ಹರಿಯಾಣ ಮೂಲದ ಔಷಧ ಉತ್ಪಾದನಾ ಸಂಸ್ಥೆ ಹೊರ ತಂದಿರುವ 'ನಮೋ ಗುಳಿಗೆ' ಹೊಸ ಐಡಿಯಾ ಎನ್ನಲಾಗುವುದಿಲ್ಲ.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮೋದಿ ಬ್ರ್ಯಾಂಡ್ ಗೆ ಭಾರಿ ಬೇಡಿಕೆ ಇತ್ತು. ನವದೆಹಲಿಯ ಫಾರ್ಮಾ ಸ್ಯೂಟಿಕಲ್ ಕಂಪನಿಯೊಂದು ಮೋದಿ ಹೆಸರಿನಲ್ಲಿ ನಮೋ ಟ್ಯಾಬ್ಲೆಟು, ನಮೋ ಜೆಲ್ ಹೊರ ತಂದಿತ್ತು. ನಂತರ ರಾಹುಲ್ ಗಾಂಧಿ ಹೆಸರಿನಲ್ಲಿ ರಾಗಾ ಫ್ಲಾಮ್ ಬಿಡುಗಡೆಯಾಗಿತ್ತು.

Uttarakhand : A Pharmaceutical company launches NaMo painkiller

ಇಲ್ಲೂ ಕೂಡಾ ರಾಹುಲ್ ಗಾಂಧಿ ಅವರಿಗೆ ಮೋದಿ ಬ್ರ್ಯಾಂಡ್ ವಿರುದ್ಧ ಸೋಲುಂಟಾಗಿತ್ತು. ಮೋದಿ ಟ್ಯಾಬ್ಲೆಟುಗಳು 36 ರು ನಂತೆ ಬೇಡಿಕೆ ಗಿಟ್ಟಿಸಿಕೊಂಡರೆ, ರಾಗಾ ಗುಳಿಗೆಗಳು 16 ರು ಮೇಲೆ ಏರಲಿಲ್ಲ ಎಂದು ಐಸಿಐ ಹೆಲ್ತ್ ಕೇರ್ ಪ್ರೈ ಲಿ ವರ್ತಕ ನವೀನ್ ಜೈನ್ ಹೇಳಿದ್ದಾರೆ.

ಸುಮಾರು 20 ಲಕ್ಷಕ್ಕೂ ಅಧಿಕ ನಮೋ ಗುಳಿಗೆ ಸ್ಟಿಪ್ ಗಳು ರಾಗಾ ಫ್ಲಾಮ್ ಗಳು ಮಾರುಕಟ್ಟೆಗೆ ಬಂದ ವಾರದೊಳಗೆ ಬಿಕರಿಯಾಗಿ ದಾಖಲೆ ನಿರ್ಮಿಸಿದ್ದವು. ಇದು ಮಾರುಕಟ್ಟೆ ತಂತ್ರ ಮಾತ್ರವಾಗಿತ್ತು ನಮಗೆ ರಾಜಕೀಯ ನಾಯಕರ ಸಂಪರ್ಕವಂತೂ ಇಲ್ಲ ಎಂದು ವ್ಯಾಪಾರಿಗಳು ಹೇಳಿದ್ದರು.

ಮೊದಿ ಹೆಸರಿನಲ್ಲಿ ಟಿಶ್ಯೂ ಪೇಪರ್, ಮೌಥ್ ರಿಫ್ರೆಷನರ್, ಹೋಳಿ ಬಣ್ಣಗಳು, ಟೀ ಶರ್ಟ್, ಮಗ್ ನಂತರ ನಮೋ ಗುಳಿಗೆಗಳು ಮತ್ತೆ ಸುದ್ದಿಯಲ್ಲಿವೆ. ಈಗ ನಮೋ ಬ್ರ್ಯಾಂಡ್ ಐಟಿ ಕ್ಷೇತ್ರಕ್ಕೂ ಕಾಲಿಟ್ಟಿರುವ ಸುದ್ದಿ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+