ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಸಾಲ ಸ್ನೇಹಿ ವೆಬ್

By Mahesh
|
Google Oneindia Kannada News

ನವದೆಹಲಿ, ಆಗಸ್ಟ್ 20: ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಸಾಲ ಪಡೆಯಲು ಅನುಕೂಲವಾಗುವ 'ವಿದ್ಯಾಲಕ್ಷ್ಮಿ ' ಯೋಜನೆಗಾಗಿ ಪ್ರತ್ಯೇಕ ವೆಬ್ ಪೋರ್ಟಲ್ ವೊಂದನ್ನು ನರೇಂದ್ರ ಮೋದಿ ಸರ್ಕಾರ ಗುರುವಾರ ಆರಂಭಿಸಿದೆ.

ನರೇಂದ್ರ ಮೋದಿ ಸರ್ಕಾರದ ಮಹತ್ವದ ಯೋಜನೆಗಳ ಪೈಕಿ 'ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಯೋಜನೆ'ಯೂ ಒಂದೆನಿಸಿದೆ. ವಿದ್ಯಾರ್ಥಿಗಳಿಗೆ ಸುಲಭವಾಗಿ ಸಾಲ ನೀಡುವುದು ಹಾಗೂ ಸ್ಕಾಲರ್ ಶಿಪ್ ಮಾಹಿತಿ ಈ ವೆಬ್ ಪೋರ್ಟಲ್ ಹೊಂದಿರುತ್ತದೆ. [ಮೋದಿ ಕನಸುಗಳು: ಸ್ವಚ್ಛಭಾರತದಿಂದ ಡಿಜಿಟಲ್ ಇಂಡಿಯಾ ತನಕ]

Modi Govt launches portal for students seeking education loans

ಸದ್ಯಕ್ಕೆ ಈ ಯೋಜನೆಯಲ್ಲಿ ಎಸ್ ಬಿಐ, ಐಡಿಬಿಐ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ 13ಕ್ಕೂ ಅಧಿಕ ಬ್ಯಾಂಕುಗಳು ಈ ಯೋಜನೆಯಡಿಯಲ್ಲಿ ಸಾಲ ನೀಡಲಿವೆ. ಎನ್ ಎಸ್ ಡಿಎಲ್ ಇ ಆಡಳಿತ, ವಿತ್ತ ಸಚಿವಾಲಯ, ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸಹಕಾರದಿಂದ ಪ್ರಧಾನ್ ಮಂತ್ರಿ ವಿದ್ಯಾ ಲಕ್ಷ್ಮಿ ಕಾರ್ಯಕ್ರಮ (ಪಿಎಂವಿಎಲ್ ಕೆ) ಸಾಕಾರಗೊಳ್ಳಲಿದೆ.

ದೇಶದ ಯಾವುದೇ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿ ಅರ್ಥಿಕ ಹಿನ್ನಡೆ ಅನುಭವಿಸಿ ಶಿಕ್ಷಣ ವಂಚಿತರಾಗಬಾರದು ಎಂಬ ಆಶಯದಿಂದ ಈ ಯೋಜನೆಯನ್ನು ಅರುಣ್ ಜೇಟ್ಲಿ ಅವರು 2015-16ನೇ ಸಾಲಿನ ಬಜೆಟ್ ನಲ್ಲೇ ಘೋಷಿಸಿದ್ದರು.

ಸದ್ಯಕ್ಕೆ 13 ಬ್ಯಾಂಕುಗಳು 22ಕ್ಕೂ ಅಧಿಕ ಶಿಕ್ಷಣ ಸಾಲ ನೀಡಲು ಮುಂದಾಗಿವೆ. ಶಿಕ್ಷಣ ಸಾಲ ನೀಡುವ ಎಲ್ಲಾ ಬ್ಯಾಂಕ್ ಗಳನ್ನು ಈ ಜಾಲಕ್ಕೆ ಸೇರಿಸುವ ವ್ಯವಸ್ಥೆ ಮುಂದೆ ಕಾಣಬಹುದು. ವಿದ್ಯಾರ್ಥಿಗಳು ಶೈಕ್ಷಣಿಕ ಸಾಲದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ವೆಬ್ ಪೋರ್ಟಲ್ ಮೂಲಕ ಪಡೆಯಬಹುದಾಗಿದೆ. ವಿದ್ಯಾಲಕ್ಷ್ಮಿ ವೆಬ್ ಪೋರ್ಟಲ್ ಲಿಂಕ್ ಇಲ್ಲಿದೆ.(ಪಿಟಿಐ)

English summary
Narendra Modi government on Thursday (Aug.20) said it has a launched a website, vidyalakshmi.co.in, for students seeking educational loans and five banks including SBI, IDBI Bank and Bank of India have integrated their system with the portal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X