ಮೋದಿ ಕನಸುಗಳು: ಸ್ವಚ್ಛಭಾರತದಿಂದ ಡಿಜಿಟಲ್ ಇಂಡಿಯಾ ತನಕ
ನವದೆಹಲಿ, ಮೇ.27: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷದಲ್ಲಿ ಏನು ಮಾಡಿದೆ ಎಂಬ ಪ್ರಶ್ನೆಗೆ ಕನಸಿನ ಬೀಜಗಳನ್ನು ಬಿತ್ತಲಾಗಿದೆ. ಇದರ ಫಲ ಮುಂದಿನ ಎಷ್ಟೋ ಪೀಳಿಗೆಗೆ ಸಿಗಲಿದೆ ಎಂಬ ಉತ್ತರ ಸಿಗುತ್ತದೆ.
ಮೋದಿ ಅವರು ತಮ್ಮ ಗುಜರಾತ್ ರಾಜ್ಯದಲ್ಲಿ ಕಂಡ ಕನಸುಗಳನ್ನು ವಿಸ್ತರಿಸಿ ದೇಶದ ಜನತೆಗೆ ಅನುಕೂಲವಾಗುವಂಥ ಯೋಜನೆಗಳನ್ನು ರೂಪಿಸಿದರು. ಸಾರ್ವಜನಿಕರಿಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಭದ್ರತೆ ಒದಗಿಸುವ ಯೋಜನೆಗಳನ್ನು ಜಾರಿಗೊಳಿಸಿದರು.
ಅಂತ್ಯೋದಯ ನಮ್ಮ ಮೂಲ ಮಂತ್ರವಾಗಿದೆ ಎಂದಿರುವ ಮೋದಿ ಅವರು ಎನ್ ಡಿಎ ಸರ್ಕಾರದ ಜನಪರ ಯೋಜನೆಗಳ ವಿವರ ನೀಡಿ, ಬನ್ನಿ ಒಟ್ಟಿಗೆ ಕಾರ್ಯ ನಿರ್ವಹಿಸೋಣ ಎಂದು ಕರೆ ನೀಡಿ ದೇಶದ ಜನತೆಯನ್ನು ಉದ್ದೇಶಿಸಿ ಬಹಿರಂಗ ಪತ್ರ ಕೂಡಾ ಬರೆದಿದ್ದಾರೆ.[ಮೋದಿ ಪತ್ರ ಇಲ್ಲಿ ಓದಿ]
ಜನಧನ, ಪ್ರಧಾನಮಂತ್ರಿ ಜೀವನಜ್ಯೋತಿ ವಿಮಾ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಯೋಜನೆ, ಅಟಲ್ ಪಿಂಚಣಿ ಯೋಜನೆ ಬಗ್ಗೆ ಉಲ್ಲೇಖಿಸಿದ್ದಾರೆ. ಮೋದಿ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳ ವಿವರ ಮುಂದಿದೆ.

ಆರ್ಥಿಕ ಭದ್ರತೆಗಾಗಿ 'ಜನ ಧನ್' '
* ದೇಶದ ಪ್ರತಿ ಕುಟುಂಬಕ್ಕೂ ಒಂದು ಬ್ಯಾಂಕ್ ಖಾತೆ ಇರಬೇಕು ಎನ್ನುವ ಉದ್ದೇಶದಿಂದ ಅರ್ಥಿಕ ಭದ್ರತೆಗಾಗಿ ಆಗಸ್ಟ್ 2014ರಲ್ಲಿ ಯೋಜನೆ ಜಾರಿಗೊಳಿಸಲಾಯಿತು.
* 'ರುಪೇ ಡೆಬಿಟ್ ಕಾರ್ಡ್' ಸಹಿತ ಬ್ಯಾಂಕ್ ಖಾತೆಯನ್ನು ಪ್ರತಿಯೊಂದು ಕುಟುಂಬಕ್ಕೆ ಒದಗಿಸಲಾಗುತ್ತದೆ.
* ಈ ಬ್ಯಾಂಕ್ ಖಾತೆಗೆ 5,000 ರೂಪಾಯಿಗಳ ಮುಂಗಡ ಸಾಲ ಸೌಲಭ್ಯವಿರುತ್ತದೆ. ಜೊತೆಗೆ ಒಂದು ಲಕ್ಷ ರೂಪಾಯಿ ಮೊತ್ತದ ವಿಮಾ ಸೌಲಭ್ಯವು ದೊರಕಲಿದೆ.
* 15 ಕೋಟಿಗೂ ಹೆಚ್ಚು ಹೊಸ ಖಾತೆಗಗಳು ಆರಂಭವಾಗಿದೆ. 10 ಕೋಟಿ ಗೂ ಅಧಿಕ ರುಪೇ ಕಾರ್ಡ್ ನೀಡಲಾಗಿದೆ.
* ರೈತರನ್ನು ಸಾಲದಿಂದ ಮುಕ್ತಗೊಳಿಸಲು ಯೋಜನೆ ಅನುಕೂಲಕರ.

ಸ್ವಚ್ಛ ಭಾರತ ಅಭಿಯಾನಕ್ಕೆ ಪ್ರಶಂಸೆ
ಮಹಾತ್ಮಾ ಗಾಂಧೀಜಿ ಕಂಡ ಕನಸಿನಂತೆ ಅಕ್ಟೋಬರ್ 2 ರಂದು ಆರಂಭವಾದ ಸ್ವಚ್ಛ ಭಾರತ ಅಭಿಯಾನಕ್ಕೆ ವಿವಿಧ ಕ್ಷೇತ್ರಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
2019ರ ವೇಳೆಗೆ ಈ ಕನಸಿನ ಅಭಿಯಾನ ಪೂರ್ಣಗೊಳಿಸುವ ಸಂಕಲ್ಪ ಹೊಂದಲಾಗಿದೆ.
ಸಿನಿಮಾ ತಾರೆಯರು, ಉದ್ಯಮಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಸೇರಿದಂತೆ ದೇಶದ ಎಲ್ಲೆಡೆ ಒಗ್ಗಟ್ಟಿನಿಂದ ಸ್ವಚ್ಛತೆ ಬಗ್ಗೆ ಚಿಂತಿಸುವಂತೆ ಮಾಡುವಲ್ಲಿ ಯೋಜನೆ ಸಫಲವಾಗಿದೆ.

ಮೇಕ್ ಇನ್ ಇಂಡಿಯಾ
ಮೇಕ್ ಇನ್ ಇಂಡಿಯಾ.. ಭಾರತವನ್ನು ಬೃಹತ್ ಉತ್ಪಾದನಾ ಕೇಂದ್ರವನ್ನಾಗಿಸುವುದು ಸೆಪ್ಟೆಂಬರ್ 25 ರಂದು ಆರಂಭವಾದ ಯೋಜನೆ. ಪ್ರತಿ ರಾಜ್ಯದಲ್ಲೂ ಹೂಡಿಕೆ ಮಾಡುವಂತೆ ಸ್ಥಳೀಯ ಮಟ್ಟದಲ್ಲಿ ಆಂದೋಲನ ಆರಂಭಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹರಿದು ಬರುವಂತೆ ಎಫ್ ಡಿಐ ನಿಯಮಗಳನ್ನು ಸಡಿಲಿಸಲಾಗಿದೆ.

ಬೇಟಿ ಬಚಾವೋ ಯೋಜನೆ
ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಮೂಲಕ ಹೆಣ್ಣು ಮಕ್ಕಳ ರಕ್ಷಣೆ ಹಾಗೂ ವಿದ್ಯಾಭ್ಯಾಸಕ್ಕೆ 100 ಕೋಟಿ ರು ಮೀಸಲಿಡಲಾಗಿದೆ. ಸ್ತ್ರೀ ಹಾಗೂ ಪುರುಷ ಅನುಪಾತ ಸರಿ ಹೊಂದಿಸುವುದು, ಭ್ರೂಣ ಹತ್ಯೆ ತಡೆ, ಬಾಲಕಿಯರಿಗೆ ರಕ್ಷಣೆ, ಶಿಕ್ಷಣ ಮುಂತಾದವು ಯೋಜನೆಯ ಉದ್ದೇಶ

ಮುದ್ರಾ ಬ್ಯಾಂಕ್ ಯೋಜನೆ
ಸಣ್ಣ ಉದ್ದಿಮೆಗಳಿಗೆ ಬಲ ನೀಡಲು ಸಾರ್ವಜನಿಕ ಕ್ಷೇತ್ರದ ಆರ್ಥಿಕ ಸಂಸ್ಥೆಯಾಗಿ ಮುದ್ರಾ ಬ್ಯಾಂಕ್ ಸ್ಥಾಪನೆ ಮಾಡಲಾಯಿತು. ಏಪ್ರಿಲ್ 8 ರಂದು ಯೋಜನೆ ಆರಂಭಿಸಲಾಯಿತು. ಶಿಶು, ಕಿಶೋರ, ತರುಣ ಹೀಗೆ ಮೂರು ಹಂತದಲ್ಲಿ ಸಾಲ ನೀಡಿಕೆ, 2 ರಿಂದ 10 ಲಕ್ಷ ರು ತನಕ ಸಣ್ಣ ಉದ್ದಿಮೆದಾರರಿಗೆ ಸಾಲ ನೀಡಲಾಗುತ್ತದೆ.

ಡಿಜಿಟಲ್ ಇಂಡಿಯಾ
ಇ ಅಡಳಿತ, ಎಂ ಆಡಳಿತಕ್ಕೆ ಹೆಚ್ಚಿನ ಒತ್ತು. 2.5 ಲಕ್ಷ ಗ್ರಾಮಗಳಿಗೆ ಬ್ರಾಡ್ ಬ್ಯಾಂಡ್ ಹಾಗೂ ಫೋನ್ ಸಂಪರ್ಕ ಸಾಧಿಸುವ ಗುರಿ. 2.5 ಲಕ್ಷ ಶಾಲೆಗಳಿಗೆ ವೈಫೈ ಹೊಂದಿಸುವ ಗುರಿ, ಸಾರ್ವಜನಿಕ ವೈಫೈ ಹಾಟ್ ಸ್ಪಾಟ್ ನಿರ್ಮಾಣ.
ಜೊತೆಗೆ 1.7 ಕೋಟಿ ನೇರ ಹಾಗೂ 8.5 ಕೋಟಿ ಪರೋಕ್ಷವಾಗಿ ಹುದ್ದೆಗಳ ಸೃಷ್ಟಿ.

ಸ್ಕಿಲ್ ಇಂಡಿಯಾ
ಭಾರತದ ಯುವಜನತೆಯ ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯೋಗಕ್ಕೆ ತಯಾರಿಗೊಳಿಸುವ ಯೋಜನೆ. 2020ರ ಹೊತ್ತಿಗೆ 500 ಮಿಲಿಯನ್ ಯುವ ಜನತೆಗೆ ಇದರಿಂದ ಲಾಭ ಸಿಗುವ ಭರವಸೆ.

ಶೈಕ್ಷಣಿಕ ಯೋಜನೆಗಳು
ವಿದ್ಯಾಲಕ್ಷ್ಮಿ ಕಾರ್ಯಕ್ರಮ, ದೀನ್ ದಯಾಳ್ ಉಪಾಧ್ಯಾಯ್ ಗ್ರಾಮ ಕೌಶಲ್ಯ ಯೋಜನೆ, ಸ್ಕಾಲರ್ ಶಿಫ್, ಡಿಜಿಟಲ್ ಇಂಡಿಯಾ, ಶಿಶಿಕ್ಷು ತರಬೇತಿ ಕಾಯ್ದೆಗೆ ತಿದ್ದುಪಡಿ, ಮುದ್ರಾ ಬ್ಯಾಂಕ್, ಅಟಲ್ ಮಿಷನ್ ನಿಂದ ಹೊಸ ಸಂಶೋಧನೆಗೆ ಪ್ರೋತ್ಸಾಹ

ಹಿರಿಯ ನಾಗರಿಕರಿಗೆ ಯೋಜನೆ
ಪ್ರಧಾನ್ ಮಂತ್ರಿ ಸುರಕ್ಷಾ ವಿಮಾ ಯೋಜನೆಯಿಂದ ಅಪಘಾತ ವಿಮೆ 2 ಲಕ್ಷ ರು ತನಕ ಪ್ರತಿ ತಿಂಗಳು 1 ರು ನಂತೆ ಲಭ್ಯ.ವರಿಷ್ಠ ವಿಮಾ ಯೋಜನೆಯಿಂದ ತಿಂಗಳ ಪಿಂಚಣಿ ಲಭ್ಯ, ಹಿರಿಯ ನಾಗರಿಕರಿಗೆ ತೆರಿಗೆ ರಹಿತ ಯೋಜನೆಗಳ ಲಾಭ.

ಕೃಷಿಕರಿಗೆ ಯೋಜನೆಗಳು
ಕೃಷಿ ಸಿಂಚಾಯಿ ಯೋಜನೆ, ಮಣ್ಣಿನ ಫಲವತ್ತತೆ ಬಗ್ಗೆ ತಿಳಿಯಲು ಹೆಲ್ತ್ ಕಾರ್ಡ್, ಸಾವಯಮ ಕೃಷಿಗಾಗಿ ವಿಕಾಸ ಯೋಜನೆ, ದೀನ್ ದಾಯಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಿಂದ ನಿರಂತರ ವಿದ್ಯುತ್, ಅಪಘಾತ ವಿಮೆ, ಪಿಂಚಣಿ ಯೋಜನೆ, ವಸತಿ ಯೋಜನೆಗಳು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications