ಈಶಾನ್ಯ ರಾಜ್ಯ ಚುನಾವಣೆ: ಟ್ವಿಟ್ಟರ್ ನಲ್ಲಿ ಕೃತಜ್ಞತೆ ಹೇಳಿದ ಮೋದಿ

ನವದೆಹಲಿ, ಮಾರ್ಚ್ 03: ಈಶಾನ್ಯ ರಾಜ್ಯಗಳಾದ ಮೇಘಾಲಯ, ತ್ರಿಪುರ, ನಾಗಾಲ್ಯಾಂಡ್ ಗಳ ಚುನಾವಣಾ ಫಲಿತಾಂಶ ಬಿಜೆಪಿ ಮಟ್ಟಿಗೆ ಕೇಸರಿ ಹೋಳಿ ಎನ್ನಿಸಿದೆ! ಈಶಾನ್ಯ ರಾಜ್ಯಗಳಲ್ಲಿ ಹೇಳ ಹೆಸರಿಲ್ಲದಂತಿದ್ದ ಬಿಜೆಪಿ ಇಂದು ಅಲ್ಲಿಯೂ ಕೇಸರಿ ರಂಗು ಮೂಡಿಸಿದೆ.

ಅಲ್ಲಿನ ಆಡಳಿತ ಪಕ್ಷಗಳ ವೈಫಲ್ಯ,ಮತ್ತು ಆ ವೈಫಲ್ಯವನ್ನೇ ಪ್ರಚಾರದ ಸಂದರ್ಭದಲ್ಲಿ ಚೆನ್ನಾಗಿ ಬಳಸಿಕೊಂಡ ಬಿಜೆಪಿ, ಖುದ್ದು ಪ್ರಚಾರದಲ್ಲಿ ಭಾಗವಹಿಸಿದ ಮೋದಿ, ಪ್ರಾದೇಶಿಕ ಪಕ್ಷಗಳೊಂದಿಗೆ ಹೊಂದಾಣಿಕೆ ಈ ಎಲ್ಲವೂ ಸೇರಿ ಈಶಾನ್ಯ ರಾಜ್ಯಗಳಲ್ಲೂ ಕಮಲವನ್ನು ಅರಳಿಸಿದೆ. ಬಿಜೆಪಿ ನಾಯಕರ ಆದ್ಯ ಗುರಿಯಾಗಿದ್ದ, ಈಶಾನ್ಯ ರಾಜ್ಯಗಳಲ್ಲೂ ಆಧಿಪತ್ಯ ಸ್ಥಾಪಿಸುವ ಇಂಗಿತ ಕೊನೆಗೂ ಈಡೇರಿದೆ.

ಇದುವರೆಗಿನ ಫಲಿತಾಂಶದ ಪ್ರಕಾರ ನಾಗಾಲ್ಯಾಂಡ್ ನಲ್ಲಿ ಬಿಜೆಪಿ ಮೈತ್ರಿಕೂಟ ನಾಗಾಲ್ಯಾಂಡ್ ನಲ್ಲಿ 28(60), ಮೇಘಾಲಯದಲ್ಲಿ 20(60), ತ್ರಿಪುರದಲ್ಲಿ 42(60) ಸ್ಥಾನದಲ್ಲಿ ಗೆಲುವು ಸಾಧಿಸುವುದು ಬಹುತೇಕ ಖಚಿತವಾಗಿದೆ. ತ್ರಿಪುರದಲ್ಲಿ ಫೆ.18 ಮತ್ತು ಮೇಘಾಲಯ ಮತ್ತು ನಾಗಾಲ್ಯಾಂಡ್ ನಲ್ಲಿ ಫೆ.27 ರಂದು ನಡೆದಿದ್ದ ಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದೆ.

ಈಶಾನ್ಯ ರಾಜ್ಯಗಳ ಗೆಲುವಿನ ಕುರಿತು ಸಂತುಷ್ಟರಾದ ಪ್ರಧಾನಿ ಮೋದಿ ಟ್ವೀಟ್ ಮೂಲಕ ಇಲ್ಲಿನ ಜನರಿಗೆ ಕೃತಜ್ಞತೆ ಅರ್ಪಿಸಿದ್ದಾರೆ.

ಈಶಾನ್ಯ ರಾಜ್ಯದ ಜನರು ಮಾತನಾಡಿದ್ದಾರೆ!

"ಮೇಘಾಲಯ, ನಾಗಾಲ್ಯಾಂಡ್ ಮತ್ತು ತ್ರಿಪುರದ ಜನರು ಮಾತನಾಡಿದ್ದಾರೆ! ನಮ್ಮ ಮತ್ತು ಮಿತ್ರಪಕ್ಷದ ಉತ್ತಮ ಆಡಳಿತ ಮತ್ತು acteast ಪಾಲಿಸಿಗೆ ಬೆಂಬಲ ನೀಡಿದ ಜನರಿಗೆ ನನ್ನ ಧನ್ಯವಾದಗಳು. ನಾವು ಮುಂದೆಯೂ ಜನರ ಕನಸು ಮತ್ತು ಆಕಾಂಕ್ಷೆಗಳ ಈಡೇರಿಕೆಗೆ ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತೇವೆ"

ಯುಗಪ್ರವರ್ತಕ ಫಲಿತಾಂಶ!

"2018 ರ ತ್ರಿಪುರ ಚುನಾವಣಾ ಫಲಿತಾಂಶ ಯುಗಪ್ರವರ್ತಕ ಫಲಿತಾಂಶವಾಗಿ ಎಂದಿಗೂ ನೆನಪಿನಲ್ಲುಳಿಯುತ್ತದೆ. ತ್ರಿಪುರದಲ್ಲಿ ನನ್ನ ಸಹೋದರ ಸಹೋದರಿಯರು ಮಾಡಿದ್ದು ಅಸಾಮಾನ್ಯ ಕೆಲಸ. ಅವರಿಗೆ ಕೃತಜ್ಞತೆ ಹೇಳಲು ಶಬ್ದಗಳು ಸಿಗುತ್ತಿಲ್ಲ. ಬಿಜೆಪಿಗೆ ನೀವು ನೀಡುತ್ತಿರುವ ಅಭೂತಪೂರ್ವ ಬೆಂಬಲಕ್ಕೆ ಋಣಿಯಾಗಿದ್ದೇವೆ. ತ್ರಿಪುರದ ಅಭಿವೃದ್ಧಿಗೆ ನಾವೆಂದಿಗೂ ಬದ್ಧರಾಗಿದ್ದೇವೆ"

ಶೂನ್ಯದಿಂದ ಶಿಖರದೆಡೆಗೆ...

'ತ್ರಿಪುರದ ವಿಜಯ ಎಂದರೆ ಸಾಮಾನ್ಯ ನಡೆಯಲ್ಲ. ಅದೊಂದು ಶೂನ್ಯದಿಂದ ಶಿಖರದೆಡೆಗಿನ ಮಹಾ ಪ್ರಯಾಣ. ನಮ್ಮ ಅಭಿವೃದ್ಧಿ ಕಾರ್ಯಕ್ಕೆ ಸಿಕ್ಕ ಉತ್ತರ ಇದು. ಈ ಗೆಲುವಿಗೆ ಕಠಿಣ ಪರಿಶ್ರಮ ಸಲ್ಲಿಸಿದ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರಿಗೂ ನಾನು ಬಾಗಿನಮಸ್ಕರಿಸುತ್ತೇನೆ'

ಮೇಘಾಲಯದ ಜನರಿಗೆ ನನ್ನ ಧನ್ಯವಾದ

"ಬಿಜೆಪಿಯನ್ನು ಬೆಂಬಲಿಸಿದ ಮೇಘಾಲಯದ ಜನತೆಗೆ ನನ್ನ ನಮನ. ಮೇಘಾಲಯದ ಅಭಿವೃದ್ಧಿ ನಮ್ಮ ಆದ್ಯ ಗುರಿ. ಮೇಘಾಲಯದಲ್ಲಿ ಬಿಜೆಪಿಯ ಉತ್ತಮ ಪ್ರದರ್ಶನಕ್ಕೆ ಕಾರಣೀಕರ್ತರಾದ ಎಲ್ಲ ಕಾರ್ಯಕರ್ತರಿಗೂ ನನ್ನ ಧನ್ಯವಾದ"

ನಿಮಗೆ ನಾನು ಋಣಿ

"ನಾಗಾಲ್ಯಾಂಡ್ ನಲ್ಲಿ ನಮಗೆ ಮತ್ತು ನಮ್ಮ ಮೈತ್ರಿಕೂಟಕ್ಕೆ ಬೆಂಬಲ ನೀಡಿದ ಎಲ್ಲ ಜನರಿಗೂ ನಾನು ಋಣಿಯಾಗಿದ್ದೇನೆ. ನಾವು ನಾಗಾಲ್ಯಾಂಡ್ ನ ಅಭಿವೃದ್ಧಿಗಾಗಿ ನಿರಂತರ ಕೆಲಸ ಮಾಡುತ್ತೇವೆ. ಇಲ್ಲಿನ ಸ್ಥಳೀಯ ಬಿಜೆಪಿ ಕಾರ್ಯಕರ್ತರ ನನ್ನ ನಮನಗಳು"

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+