Narendra Modi Cabinet: ಮೋದಿ 3.0 ಸಂಪುಟದಲ್ಲಿ 71 ಸಚಿವರಿಗೆ ಸ್ಥಾನ; ಯಾವ್ಯಾವ ಜಾತಿಗೆ ಎಷ್ಟೆಷ್ಟು ಸಚಿವ ಸ್ಥಾನ? ಇಲ್ಲಿದೆ ಪಟ್
ನವದೆಹಲಿ, ಜೂನ್ 10: ನರೇಂದ್ರ ಮೋದಿ ಅವರು ಭಾನುವಾರ ಪ್ರಧಾನ ಮಂತ್ರಿಯಾಗಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿದ್ದ ಪದಗ್ರಹಣ ಸಮಾರಂಭದಲ್ಲಿ ಜೂನ್ 09 ರಂದು ಸಂಜೆ ಸರಿಯಾಗಿ 7.15ಕ್ಕೆ ಈಶ್ವರನ ಹೆಸರಲ್ಲಿ ನರೇಂದ್ರ ದಾಮೋದರ್ ದಾಸ್ ಮೋದಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ರಾಷ್ಟ್ರಪತಿ ಭವನದಲ್ಲಿ 71 ಸಚಿವರು ಸಹ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮೋದಿ ಅವರ ಜೊತೆಗೆ ಪ್ರಮುಖ ನಾಯಕರಾದ ಅಮಿತ್ ಶಾ, ಜೆಪಿ ನಡ್ಡಾ, ನಿರ್ಮಲಾ ಸೀತಾರಾಮನ್, ರಾಜನಾಥ್ ಸಿಂಗ್ ಹಾಗೂ ಎಸ್ ಜೈಶಂಕರ್ ಕೂಡ ಎನ್‌ಡಿಎ ಸರ್ಕಾರದಲ್ಲಿ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಬಾರಿ ಮೋದಿ ಸಂಪುಟದಲ್ಲಿ ಹಿರಿಯರ ಜೊತೆಗೆ ಹಲವು ಹೊಸ ಮುಖಗಳಿಗೆ ಮಂತ್ರಿಗಿರಿ ಪಟ್ಟವನ್ನ ನೀಡಿದ್ದು, 7 ಮಹಿಳೆಯವರಿಗೂ ಮೋದಿ ಕ್ಯಾಬಿನೆಟ್ ನಲ್ಲಿ ಅವಕಾಶವನ್ನ ನೀಡಲಾಗಿದೆ.

ನರೇಂದ್ರ ಮೋದಿ ಕ್ಯಾಬಿನೆಟ್ 3.0 ನಲ್ಲಿ ಜಾತಿ ಲೆಕ್ಕಾಚಾರ ಹಾಗೂ ಪ್ರಾದೇಶಿಕ ಲೆಕ್ಕಾಚಾರದ ಮೇಲೆ ಮೋದಿ ಅವರ ಸಂಪುಟದಲ್ಲಿ ಅವಕಾಶವನ್ನ ಕಲ್ಪಿಸಿಕೊಡಲಾಗಿದೆ. ಜಾತಿ ಸಮೀಕರಣ ಇಟ್ಟುಕೊಂಡು ಬಿಜೆಪಿ ನಾಯಕರು ಸಂಸದರನ್ನ ಆಯ್ಕೆ ಮಾಡಲಾಗಿದೆ. ನರೇಂದ್ರ ಮೋದಿ ಕ್ಯಾಬಿನೆಟ್ ನಲ್ಲಿ 28 ಮೇಲ್ಜಾತಿ, 27 OBC, 10 ದಲಿತ, 5 ಬುಡಕಟ್ಟು ಮತ್ತು 2 ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಸಂಸದರಿಗೆ ಅವಕಾಶವನ್ನ ನೀಡಲಾಗಿದೆ. ಹಾಗಾದರೆ ಯಾವ ಸಚಿವರು ಯಾವ ವರ್ಗಕ್ಕೆ ಸೇರಿದವರು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಕೆಳಗೆ ನೀಡಲಾಗಿದೆ.
ಮೋದಿ ಕ್ಯಾಬಿನೆಟ್ ನಲ್ಲಿ ಮೇಲ್ಜಾತಿಗೆ ಸೇರಿದ ಸಚಿವರು
ಅಮಿತ್ ಶಾ, ಎಸ್ ಜೈಶಂಕರ್, ಮನ್ಸುಖ್ ಮಾಂಡವಿಯಾ, ರಾಜನಾಥ್ ಸಿಂಗ್, ಜಿತಿನ್ ಪ್ರಸಾದ್, ಜಯಂತ್ ಚೌಧರಿ, ಧರ್ಮೇಂದ್ರ ಪ್ರಧಾನ್, ರವನೀತ್ ಬಿಟ್ಟು, ನಿತಿನ್ ಗಡ್ಕರಿ, ಪಿಯೂಷ್ ಗೋಯಲ್, ಮನೋಹರ್ ಲಾಲ್ ಖಟ್ಟರ್, ಜಿತೇಂದ್ರ ಸಿಂಗ್, ಗಜೇಂದ್ರ ಸಿಂಗ್ ಶೇಖಾವತ್, ಸಂಜಯ್ ಸೇಠ್, ರಾಮ್ ಮೋಹನ್ ನಾಯ್ಡು, ಸಂಜಯ್ ಸೇಠ್ , ಸುಕಾಂತ್ ಮಜುಂದಾರ್, ಪ್ರಹ್ಲಾದ್ ಜೋಶಿ, ಜೆಪಿ ನಡ್ಡಾ, ಗಿರಿರಾಜ್ ಸಿಂಗ್, ಲಾಲನ್ ಸಿಂಗ್, ಸತೀಶ್ ಚಂದ್ರ ದುಬೆ ಅವರು ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.
ಒಬಿಸಿ ಸಮುದಾಯದ ಸಚಿವರುಗಳು ಇವರು
ಶೋಭಾ ಕರಂದ್ಲಾಜೆ, ಹೆಚ್.ಡಿ ಕುಮಾರಸ್ವಾಮಿ, ಸಿಆರ್ ಪಾಟೀಲ್, ಪಂಕಜ್ ಚೌಧರಿ, ಅನುಪ್ರಿಯಾ ಪಟೇಲ್, ಬಿಎಲ್ ವರ್ಮಾ, ರಕ್ಷಾ ಖಡ್ಸೆ, ಪ್ರತಾಪ್ ರಾವ್ ಜಾಧವ್, ಶಿವರಾಜ್ ಸಿಂಗ್ ಚೌಹಾಣ್, ಜ್ಯೋತಿರಾದಿತ್ಯ ಸಿಂಧಿಯಾ, ರಾವ್ ಇಂದರ್ಜಿತ್ ಸಿಂಗ್, ಕೃಷ್ಣಪಾಲ್ ಗುರ್ಜಾರ್, ಭೂಪೇಂದ್ರ ಯಾದವ್, ಭಗೀರಥ ಚೌಧರಿ, ಅನ್ನಪೂರ್ಣಾ ದೇವಿ, ನಿತ್ಯಾನಂದ ರೈ ಸೇರಿದ್ದಾರೆ.
ದಲಿತ ಸಮುದಾಯಕ್ಕೆ ಸೇರಿದ ಸಚಿವರುಗಳ ಪಟ್ಟಿ
ಜಿತನ್ ರಾಮ್ ಮಾಂಝಿ, ರಾಮನಾಥ್ ಠಾಕೂರ್, ಎಸ್ಪಿ ಬಘೇಲ್, ಕಮಲೇಶ್ ಪಾಸ್ವಾನ್, ಅಜಯ್ ತಮ್ತಾ, ರಾಮದಾಸ್ ಅಠಾವಳೆ, ವೀರೇಂದ್ರ ಕುಮಾರ್, ಸಾವಿತ್ರಿ ಠಾಕೂರ್, ಅರ್ಜುನ್ ರಾಮ್ ಮೇಘವಾಲ್, ಚಿರಾಗ್ ಪಾಸ್ವಾನ್ ಸೇರಿದ್ದಾರೆ.
ಬುಡಕಟ್ಟು ಸಮುದಾಯದ ಸಚಿವರು
ಜುಯಲ್ ಓರಮ್, ಶ್ರೀಪಾದ್ ಯೆಸ್ಸೋ ನಾಯಕ್, ಸರ್ಬಾನಂದ ಸೋನೋವಾಲ್ ಅವರಿಗೆ ಪ್ರಧಾನಿ ಮೋದಿ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.












Click it and Unblock the Notifications