ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವೇಶ ಪಡೆಯಲು ನಕಲಿ ಪ್ರಮಾಣಪತ್ರ ಬಳಕೆ ಮಾಡಿದ್ದ 40 ಬಿಟೆಕ್ ವಿದ್ಯಾರ್ಥಿಗಳ ಅಮಾನತು

|
Google Oneindia Kannada News

ನವದೆಹಲಿ, ಜ. 11: ಕಾಲೇಜಿಗೆ ಪ್ರವೇಶ ಪಡೆಯಲು ನಕಲಿ ಪ್ರಮಾನ ಪತ್ರ ಬಳಸಿದ್ದ ಆರೋಪದಲ್ಲಿ ನಲ್ವತ್ತು ವಿದ್ಯಾರ್ಥಿಗಳ ಪ್ರವೇಶವನ್ನು ಅಮಾನತು ಮಾಡಿರುವ ಘಟನೆ ಗೋರಖ್‌ಪುರದಲ್ಲಿ ನಡೆದಿದೆ.

ಮಕರ ಸಂಕ್ರಾಂತಿ ವಿಶೇಷ ಪುಟ

ಗೋರಖ್‌ಪುರ ನಗರ ಮೂಲದ ಮೇಡಂ ಮೋಹನ್ ಮಾಳವಿಯಾ ತಾಂತ್ರಿಕ ವಿಶ್ವವಿದ್ಯಾಲಯ (ಎಂಎಂಎಂಟಿಯು) ನಕಲಿ ಪ್ರಮಾಣಪತ್ರಗಳ ಬಳಕೆಯ ಆರೋಪದ ಮೇಲೆ ವಿವಿಧ ಶಾಖೆಗಳ 40 ಬಿಟೆಕ್ ವಿದ್ಯಾರ್ಥಿಗಳ ಪ್ರವೇಶವನ್ನು ಅಮಾನತುಗೊಳಿಸಿದೆ.

ಮಂಗಳೂರಿನಲ್ಲಿ ಗಾಂಜಾ ದಂಧೆ ಪ್ರಕರಣ: ಮೆಡಿಕಲ್‌ ವಿದ್ಯಾರ್ಥಿನಿಯರು ಸೇರಿದಂತೆ 10 ಜನರು ಸಿಸಿಬಿ ವಶಕ್ಕೆಮಂಗಳೂರಿನಲ್ಲಿ ಗಾಂಜಾ ದಂಧೆ ಪ್ರಕರಣ: ಮೆಡಿಕಲ್‌ ವಿದ್ಯಾರ್ಥಿನಿಯರು ಸೇರಿದಂತೆ 10 ಜನರು ಸಿಸಿಬಿ ವಶಕ್ಕೆ

ಹೆಚ್ಚಿನ ವಿವರಗಳನ್ನು ಹಂಚಿಕೊಂಡ ಎಂಎಂಎಂಟಿಯು ಉಪಕುಲಪತಿ ಜೆಪಿ ಪಾಂಡೆ, ಮೂವರು ಸದಸ್ಯರ ತನಿಖಾ ವರದಿಯು ವಿದ್ಯಾರ್ಥಿಗಳ ಅವ್ಯವಹಾರವನ್ನು ಕಂಡು ಹಿಡಿದ ನಂತರ 40 ವಿದ್ಯಾರ್ಥಿಗಳ ಪ್ರವೇಶವನ್ನು ರದ್ದುಗೊಳಿಸಲಾಗಿದೆ. ವಿದ್ಯಾರ್ಥಿಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

MMMUT suspended 40 BTech students over fake certificates

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ವಿದ್ಯಾರ್ಥಿನಿಯೊಬ್ಬರು ನಕಲಿ ಪ್ರವೇಶ ಶುಲ್ಕ ರಶೀದಿಯನ್ನು ತಯಾರಿಸುತ್ತಿರುವುದನ್ನು ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಪತ್ತೆ ಹಚ್ಚಿದ್ದರು. ಬಳಿಕ ಈ ನಕಲಿ ಪ್ರಮಾಣಪತ್ರ ಪ್ರಕರಣವು ಬೆಳಕಿಗೆ ಬಂದಿತ್ತು. ತರುವಾಯ, ಆಕೆಯ ಪ್ರವೇಶ ಹಂಚಿಕೆ ಸಂಖ್ಯೆಯನ್ನು ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಕಳುಹಿಸಲಾಯಿತು. ಪ್ರಕರಣದ ತನಿಖೆಗಾಗಿ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿತ್ತು.

ಪ್ರಕರಣದ ತನಿಖೆಯ ಸಂದರ್ಭದಲ್ಲಿ ಪ್ರವೇಶ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮಗಳು ನಡೆದಿರುವುದು ಕಂಡು ಬಂದಿದೆ. ಮೂವರು ಸದಸ್ಯರ ತನಿಖಾ ವರದಿಯ ನಂತರ, ಶೈಕ್ಷಣಿಕ ಮಂಡಳಿಯು 2020-21 ಮತ್ತು 2021-22 ಬ್ಯಾಚ್‌ಗಳ 40 ಬಿಟೆಕ್ ವಿದ್ಯಾರ್ಥಿಗಳ ಪ್ರವೇಶವನ್ನು ಅಮಾನತುಗೊಳಿಸುವಂತೆ ಶಿಫಾರಸು ಮಾಡಿದೆ.

ಈ ವಿದ್ಯಾರ್ಥಿಗಳ ಭಾರೀ ವಂಚನೆಯು ವಿಶ್ವವಿದ್ಯಾನಿಲಯದ ಆಡಳಿತದಲ್ಲಿ 2017-18 ರಿಂದ ಅದರ ಪ್ರವೇಶ ಪ್ರಕ್ರಿಯೆಯಲ್ಲಿ ವಂಚನೆಯ ನಡೆದಿರಬಹುದು ಎಂಬ ಅನುಮಾನಗಳಿಗೆ ಎಡೆ ಮಾಡಿದ್ದು, ಪ್ರಕರಣದಲ್ಲಿ ಮತ್ತಷ್ಟು ತನಿಖೆಗೆ ಪ್ರೇರೇಪಿಸಿದೆ.

English summary
Madam Mohan Malviya Technical University (MMMUT) suspended the admission of 40 Btech students over use of fake certificates. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X