Mizoram: ಈಶಾನ್ಯ ರಾಜ್ಯದಲ್ಲಿ ಗೆಲುವು ಯಾರಿಗೆ? ಕಾಂಗ್ರೆಸ್ ಕಿಂಗ್ ಮೇಕರ್ ಆಗುತ್ತಾ?
ಮಿಜೋರಾಂ ವಿಧಾನಸಭೆ ಚುನಾವಣೆ ಮತ ಎಣಿಕೆ ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ. ಮಿಜೋರಾಂನಲ್ಲಿ ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (MNF), ವಿರೋಧ ಪಕ್ಷವಾದ ಜೋರಾಮ್ ಪೀಪಲ್ಸ್ ಪಾರ್ಟಿ (ZPM) ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಇದ್ದು, ಫಲಿತಾಂಶ ಕುತೂಹಲ ಕೆರಳಿಸಿದೆ.
ಭಾನುವಾರ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಒಂದು ರಾಜ್ಯದಲ್ಲಿ ಕಾಂಗ್ರೆಸ್ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆದ್ದು ಬೀಗಿವೆ. ಈಗ ಮಿಜೋರಾಂ ರಾಜ್ಯದ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ.

ತಾನು ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಆಡಳಿತಾರೂಢ ಎಂಎನ್‌ಎಫ್ ವಿಫಲವಾಗಿದೆ ಎಂದು ಕಾಂಗ್ರೆಸ್ ಪ್ರಚಾರ ಮಾಡಿದರೆ, ಜೋರಾಮ್ ಪೀಪಲ್ಸ್ ಪಾರ್ಟಿ ಹೊಸ ರೀತಿಯ ಆಡಳಿತ ವ್ಯವಸ್ಥೆ ತರುವುದಾಗಿ ಪ್ರಚಾರ ಮಾಡಿದೆ.
ಅತಂತ್ರ ಫಲಿತಾಂಶ ಬರುತ್ತಾ?
2018 ರಲ್ಲಿ, ಎಂಎನ್‌ಎಫ್ ಬಹುಮತ ಪಡೆಯುವ ಮೂಲಕ ಸರ್ಕಾರ ರಚನೆ ಮಾಡಿದೆ. 2008 ಮತ್ತು 2013ರಲ್ಲಿ ಸರ್ಕಾರ ರಚಿಸಿದ್ದ ಕಾಂಗ್ರೆಸ್ 2018ರಲ್ಲಿ ಸೋಲು ಕಂಡಿತ್ತು. 2018 ರ ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದ ಪ್ರಾದೇಶಿಕ ಪಕ್ಷವಾದ ಝಡ್‌ಪಿಎಂ ಎಂಟು ಸ್ಥಾನಗಳಲ್ಲಿ ಗೆದ್ದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಕಾಂಗ್ರೆಸ್ ಐದು ಸ್ಥಾನಗಳನ್ನು ಮತ್ತು ಬಿಜೆಪಿ ಒಂದನ್ನು ಗೆದ್ದಿತ್ತು.
ವಿವಿಧ ಸಮೀಕ್ಷೆಗಳು ಹೇಳಿದ್ದೇನು?
ಇನ್ನು ಹಲವು ಚುನಾವಣೋತ್ತರ ಸಮೀಕ್ಷೆಗಳು ಅತಂತ್ರ ಫಲಿತಾಂಶ ಬರುತ್ತದೆ ಎಂದು ಭವಿಷ್ಯ ನುಡಿದರೆ, ಕೆಲವು ಸಮೀಕ್ಷೆಗಳು ಎಂಎನ್‌ಎಫ್ ಬಹುಮತ ಪಡೆಯುತ್ತದೆ ಎಂದು ಹೇಳಿವೆ. ಮತ್ತೊಂದು ಸಮೀಕ್ಷೆ ಇಲ್ಲಿ ಝಡ್‌ಪಿಎಂ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿವೆ.
ಎಬಿಸಿ - ಸಿ ವೋಟರ್
ಎಂಎನ್‌ಎಫ್ : 15-21
ಝಡ್‌ಪಿಎಂ: 12-18
ಕಾಂಗ್ರೆಸ್ : 2-8
ಟೈಮ್ಸ್ ನೌ-ಇಟಿಜಿ
ಎಂಎನ್‌ಎಫ್: 14 ರಿಂದ 18
ಝಡ್‌ಪಿಎಂ: 10 ರಿಂದ 14
ಕಾಂಗ್ರೆಸ್: 9 ರಿಂದ 13
ಬಿಜೆಪಿ: 0-2
ಜನ್ ಕಿ ಬಾತ್
ಝಡ್‌ಪಿಎಂ: 15 ರಿಂದ 25
ಎಂಎನ್‌ಎಫ್: 10 ರಿಂದ 14
ಕಾಂಗ್ರೆಸ್: 5 ರಿಂದ 9
ಬಿಜೆಪಿ: 0 ರಿಂದ 2
ಇಂಡಿಯಾ ಟಿವಿ-ಸಿಎನ್‌ಎಕ್ಸ್
ಎಂಎನ್‌ಎಫ್: 14-18
ಝಡ್‌ಪಿಎಂ: 12-16
ಕಾಂಗ್ರೆಸ್: 8-10
ಬಿಜೆಪಿ: 0-2












Click it and Unblock the Notifications