Mission Gen Z: ಜೆನ್ ಜೀ - ಜೆನ್ ಆಲ್ಫಾ ಹೊಸ ತಲೆಮಾರಿನ ಯುವಕರ ಸೆಳೆಯಲು ರಾಜಕೀಯ ಪಕ್ಷಗಳಿಂದ ನೂತನ ಅಭಿಯಾನ

Mission Gen Z: ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ಜೆನ್‌ಜೀ ಹಾಗೂ ಜೆನ್ ಆಲ್ಫಾ ಜನರೇಷನ್ / ಸಮುದಾಯದ ಯುವಕರನ್ನು ಸೆಳೆಯುವುದಕ್ಕೆ ಮುಂದಾಗಿದೆ. ಈಚೆಗೆ ದೇಶದಲ್ಲಿ ನಡೆದ ಕಾಕ್ರೋಚ್ ಜನತಾ ಪಾರ್ಟಿ ಅಭಿಯಾನ ಹಾಗೂ ಅದಕ್ಕೆ ಸಿಕ್ಕ ಹೊಸ ತಲೆಮಾರಿನ ಬೆಂಬಲವು ರಾಜಕೀಯ ಪಕ್ಷಗಳನ್ನು ಚಿಂತೆಗೀಡು ಮಾಡಿದೆ. ಇದೀಗ ರಾಜಕೀಯ ಪಕ್ಷಗಳು "Mission Gen Z" ಮಿಷನ್ ಜೆನ್‌ಜೀ ಅಭಿಯಾನಕ್ಕೆ ಮುಂದಾಗಿವೆ.

ಮಹಾರಾಷ್ಟ್ರದ ರಾಜಕೀಯ ಪಕ್ಷಗಳು 'Mission Gen Z' ಎನ್ನುವ ಅಭಿಯಾನದ ಮೂಲಕ ಜೆನ್‌ಜೀ ಹಾಗೂ ಜೆನ್ ಆಲ್ಫಾ ಜನರೇಷನ್ ಯುವಕರನ್ನು ಸೆಳೆಯುವುದಕ್ಕೆ ಮುಂದಾಗುತ್ತಿವೆ. ಶಿವಸೇನೆ ಪಕ್ಷವು ಯುವಕರ ಆದ್ಯತೆಗಳನ್ನು ಆಡಳಿತ ಮತ್ತು ಸಾರ್ವಜನಿಕ ನೀತಿಯೊಂದಿಗೆ ಸಂಯೋಜಿಸುವ ಉದ್ದೇಶದಿಂದ ಈ ಅಭಿಯಾನವನ್ನು ಪ್ರಾರಂಭಿಸಿರುವುದಾಗಿ ಹೇಳಿದೆ. ಈ ಅಭಿಯಾನದ ಮೊದಲ ಹಂತವಾಗಿ ಸಾರ್ವಜನಿಕ ಪ್ರತಿನಿಧಿಗಳ ಯುವ ಶಿಬಿರವನ್ನು ನಡೆಸಲು ನಿರ್ಧರಿಸಲಾಗಿದೆ. ಮಹಾರಾಷ್ಟ್ರದ ನಗರ ಮತ್ತು ಗ್ರಾಮೀಣ ಪ್ರದೇಶಗಳಿಂದ 20 ರಿಂದ 30 ವರ್ಷ ವಯಸ್ಸಿನ 250 ಕ್ಕೂ ಹೆಚ್ಚು ಯುವ ಚುನಾಯಿತ ಪ್ರತಿನಿಧಿಗಳು ಮುಂಬೈನಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ್ದರು.

Mission Gen Z

ಕ್ರೀಡಾ ಸಂಕೀರ್ಣಗಳು ಮತ್ತು ಆಟದ ಮೈದಾನಗಳ ಅಭಿವೃದ್ಧಿ, ಸುಸಜ್ಜಿತ ಗ್ರಂಥಾಲಯಗಳು ಮತ್ತು ಅಧ್ಯಯನ ಮಾಡುವ ಸ್ಥಳಗಳು, ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಸೃಷ್ಟಿ, ಉದ್ಯೋಗ ಪೋರ್ಟಲ್‌ಗಳು ಮತ್ತು ಕೌಶಲ್ಯ ಅಭಿವೃದ್ಧಿ ಕೇಂದ್ರಗಳು, ಕಾಲೇಜುಗಳಲ್ಲಿ ಯುವ ಉತ್ಸವಗಳಲ್ಲಿ ಭಾಗವಹಿಸುವುದು. ವ್ಯಸನ ಮುಕ್ತ ಚಟುವಟಿಕೆ, ಮಹಿಳೆಯರಿಗೆ ಸ್ವರಕ್ಷಣೆ ತರಬೇತಿ, ಗ್ರಾಮೀಣ ಪ್ರದೇಶದ ಜಿಲ್ಲಾ ಪರಿಷತ್ ಶಾಲೆಗಳಲ್ಲಿ ವಿದೇಶಿ ಭಾಷಾ ತರಬೇತಿ, ಸಾಮಾಜಿಕ ಮಾಧ್ಯಮಗಳ ಹೆಚ್ಚಿನ ಬಳಕೆ ಮತ್ತು ಯುವಜನರೊಂದಿಗೆ ಸಂಪರ್ಕ ಸಾಧಿಸಲು ಹೊಸ ತಂತ್ರಜ್ಞಾನಗಳ ಬಗ್ಗೆ ಈ ಸಮಾವೇಶದಲ್ಲಿ ಚರ್ಚೆ ಮಾಡಲಾಗಿದೆ.

ಜೆನ್‌ಜೀ ಹಾಗೂ ಜೆನ್ ಆಲ್ಫಾ ಜನರೇಷನ್ ಹಾಗೂ ಒಟ್ಟಾರೆಯಾಗಿ ಯುವಕರೊಂದಿಗೆ ಅಲ್ಪಾವಧಿ, ಮಧ್ಯಮ ಅವಧಿ ಮತ್ತು ದೀರ್ಘಾವಧಿ ತೊಡಗಿಸಿಕೊಳ್ಳುವಿಕೆಗಾಗಿ ವಿವರವಾದ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸುವತ್ತ ಕೆಲಸ ಮಾಡುವುದಾಗಿ ಶಿವಸೇನಾ ಪಕ್ಷವು ಹೇಳಿದೆ. ಇದೀಗ ಶಿವಸೇನಾ ಪಕ್ಷದ ಮಾದರಿಯನ್ನು ವಿವಿಧ ಪಕ್ಷಗಳು ಸಹ ಅನುಸರಿಸುವ ಸಾಧ್ಯತೆ ಇದೆ. ಈಗಾಗಲೇ ಕಾಂಗ್ರೆಸ್ ಪಕ್ಷವು ಯುವಕರಿಗಾಗಿ ಹೊಸ ಹೊಸ ಅಭಿಯಾನಗಳನ್ನು ಹಮ್ಮಿಕೊಳ್ಳುತ್ತಿದೆ. ಭಾರತ್ ಜೋಡೋ ಸಂಘದ ಮೂಲಕ ಯುವಕರನ್ನು ಒಂದುಗೂಡಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಮಾಡುತ್ತಿದೆ. ಆದರೆ, ಈ ಎಲ್ಲ ಪಕ್ಷಗಳ ಭವಿಷ್ಯದ ದೃಷ್ಟಿಯು ಆಯಾ ಪಕ್ಷಗಳಿಗೆ ಮತಗಳನ್ನು ಸೆಳೆಯುವುದು ಪ್ರಮುಖವಾಗಿದೆ.

Mission Gen Z: ಯುವ ಸಮೂಹ ಏನು ಬಯಸುತ್ತಿದೆ ?

ಇನ್ನು ಯುವಜನರು ಜೆನ್‌ಜೀ ಹಾಗೂ ಜೆನ್ ಆಲ್ಫಾ ಯುವಕ ಮತ್ತು ಯುವತಿಯರು ನಿಜವಾಗಿಯೂ ಏನು ಬಯಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಇದನ್ನು ಅರ್ಥ ಮಾಡಿಕೊಂಡು ಅವರಿಗೆ ಏನು ಅವಶ್ಯವಿದೆ ಎನ್ನುವುದನ್ನು ಕೊಡುವುದಕ್ಕೆ ಪ್ರಯತ್ನಿಸಲಿದ್ದೇವೆ ಎಂದು ಶಿವಸೇನಾ ಸಂಸದ ಶ್ರೀಕಾಂತ್ ಶಿಂಧೆ ಹೇಳಿದ್ದಾರೆ. ಪಕ್ಷವು ತನ್ನ ಚುನಾಯಿತ ಪ್ರತಿನಿಧಿಗಳ ಮೂಲಕ ಜೆನ್‌ಜೀ ಸಮುದಾಯವನ್ನು ತಲುಪಲು ಬಯಸಿದೆ ಎಂದಿದ್ದಾರೆ.

ಪಕ್ಷವು ವಿದ್ಯಾರ್ಥಿಗಳು ಮತ್ತು ಯುವಕರಿಗಾಗಿ ಕಾರ್ಯಕ್ರಮಗಳನ್ನು ರೂಪಿಸಲು ಉದ್ದೇಶಿಸಿದೆ. ವಿವಿಧ ವಯೋಮಾನದವರು ಎದುರಿಸುವ ಸವಾಲುಗಳು ವಿಭಿನ್ನವಾಗಿವೆ, ಆದ್ದರಿಂದ ನಾವು ಆಯಾ ವಯೋಮಾನದವರ ನಿರೀಕ್ಷೆ ಹಾಗೂ ಅವಶ್ಯಕತೆಗೆ ಅನುಗುಣವಾಗಿ ಕೆಲಸ ಮಾಡಲಿದ್ದೇವೆ ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+