ಶಿರಡಿ ಸಾಯಿಬಾಬಾನ ಸನ್ನಿಧಾನದಲ್ಲಿ ನಡೆಯಿತಂತೆ ಪವಾಡ!

Posted By:
Subscribe to Oneindia Kannada

ಮುಂಬೈ ಡಿ 10 : ಆಂಜನೇಯನ ಕಣ್ಣಲ್ಲಿ ನೀರು ಬರುವುದು, ಗಣೇಶ ಹಾಲು ಹೀರುವುದು..ಹೀಗೆ ಹಲವಾರು ಪವಾಡದ ಸುದ್ದಿಯನ್ನು ಓದುತ್ತಿರುತ್ತೇವೆ. ಈ ಸಾಲಿಗೆ ಇನ್ನೊಂದು ಸೇರ್ಪಡೆಯಾಗಿದೆ. ಈ ಪವಾಡದ ಸುದ್ದಿ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ನಡೆದಿದ್ದು.

ವಿಶ್ವಾದ್ಯಂತ ಕೋಟ್ಯಾಂತರ ಭಕ್ತಾದಿಗಳನ್ನು ಹೊಂದಿರುವ ಶಿರಡಿ ಸಾಯಿಬಾಬಾ ದೇವಸ್ಥಾನದ ಆವರಣದಲ್ಲಿ ಈ ಪವಾಡ ನಡೆದಿದೆ.

ದೇವಾಲಯದ ಭೋಜನಶಾಲೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಸಾಯಿಬಾಬಾ ಮೂರ್ತಿಯ ಬಲಗೈ ಬೆರಳಿನಿಂದ ನೀರು ಚಿಮ್ಮುತ್ತಿತ್ತೆಂದು ಸುದ್ದಿಯಾಗಿದೆ. (ತಿರುಪತಿ ಶ್ರೀನಿವಾಸ ಮೂರ್ತಿಯ ವಿಸ್ಮಯ)

Miracle, water flows automatically from one of Sai Baba’s idols in Shirdi

ಮಂಗಳವಾರ (ಡಿ 8) ಎಂದಿನಂತೆ ಕೆಲಸ ನಿರ್ವಹಿಸಲು ಭೋಜನಶಾಲೆಗೆ ಹೋಗಿದ್ದ ದೇವಾಲಯದ ಅಡುಗೆ ಭಟ್ಟರಿಗೆ ಈ ಪವಾಡದ ಅನುಭವವಾಗಿದೆ.

ಸುಮಾರು ಮೂವತ್ತು ನಿಮಿಷಗಳ ಕಾಲ ಬಾಬಾನ ಮೂರ್ತಿಯಿಂದ ನೀರು ಚಿಮ್ಮುತ್ತಿರುವುದಕ್ಕೆ ಅಡುಗೆಕೋಣೆಯ ಸಿಬ್ಬಂದಿಗಳು ಸಾಕ್ಷಿಯಾಗಿದ್ದಾರೆಂದು ಶಿರಡಿ ದೇವಾಲಯದ ಅಧಿಕಾರಿಗಳು ಹೇಳಿದ್ದಾರೆ.

ಶಿರಡಿ ದೇವಾಲಯದಲ್ಲಿ ನಡೆದಿದ ಎನ್ನಲಾದ ಈ ಪವಾಡದ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯಕ್ಕೆ ವಾಟ್ಸಾಪ್ ನಲ್ಲಿ ಹರಿದಾಡುತ್ತಿದೆಯಂತೆ. (ಶಿರಡಿ ಸಾಯಿಬಾಬಾ ಕಣ್ಣು ತೆರೆದಿದ್ದು ಸುಳ್ಳೇಸುಳ್ಳು)

ಈ ವಿಡಿಯೋಗಳನ್ನ ನೋಡಿದ ಜನರು ತಂಡೋಪತಂಡವಾಗಿ ಶಿರಡಿಗೆ ಬಂದು ಮೂರ್ತಿಯಿಂದ ಮತ್ತೆ ನೀರು ಚಿಮ್ಮುವ ಪವಾಡ ಕಾಣಸಿಗುತ್ತದೋ ಎಂದು ಕಾತುರದಿಂದ ಕಾಯುತ್ತಿದ್ದಾರೆಂದು ಜೀನ್ಯೂಸ್ ವರದಿ ಮಾಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Devotees of Sai Baba are gathering in large numbers in Shridi to see if they could catch a glimpse of water flowing from one of his idols installed at the temple’s Bhojan griha where food is cooked for his followers.
Please Wait while comments are loading...