ಅಪ್ರಾಪ್ತೆಯನ್ನು ಅಪಹರಿಸಿ ಎರಡು ದಿನ ಸತತ ಲೈಂಗಿಕ ದೌರ್ಜನ್ಯ
ಲಕ್ನೋ, ಜುಲೈ 20: ಹದಿನೇಳು ವರ್ಷದ ಅಪ್ರಾಪ್ತ ಯುವತಿಯೊಬ್ಬರನ್ನು ಅಪಹರಿಸಿ, ಎರಡು ದಿನಗಳ ಕಾಲ ಬಂಧನದಲ್ಲಿಟ್ಟಿದ್ದ ಕಾಮುಕರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ಉತ್ತರ ಪ್ರದೇಶ ಲಕ್ನೋದಲ್ಲಿ ನಡೆದಿದೆ.
ಲಕ್ನೋದ ಸರೋಜಿನಗರದಲ್ಲಿದ್ದ ತಮ್ಮ ಮನೆಯಿಂದ ಆಚೆ ಬಂದಿದ್ದ ಯುವತಿಯನ್ನು ಅಪರಿಚಿತ ವ್ಯಕ್ತಿಗಳ ಗುಂಪೊಂದು ಅಪಹರಿಸಿತ್ತು. ನಂತರ ಆಕೆಯನ್ನು ನಿರ್ಜನ ಪ್ರದೇಶವೊಂದರಲ್ಲಿ ಎರಡು ದಿನಗಳ ಕಾಲ ಬಂಧಿಸಿ, ಆಕೆಯ ಮೇಲೆ ಸತತ ಲೈಂಗಿಕ ದೌರ್ಜನ್ಯ ನಡೆಸಲಾಗಿತ್ತು.

ಎರಡು ದಿನದ ನಂತರ ಆಕೆಯನ್ನು ಅಪಹರಿಸಿದ್ದ ಜಾಗದಲ್ಲೇ ಆಕೆಯನ್ನು ಬಿಟ್ಟುಹೋಗಲಾಗಿತ್ತು. ಈ ಕುರಿತು ಪೊಲೀಸರಿಗೆ ದೂರು ನೀಡಿದರೆ ಆಕೆಯನ್ನು ಸಾಯಿಸುವುದಾಗಿಯೂ ಬೆದರಿಕೆ ಹಾಕಲಾಗಿತ್ತು ಎಂದು ಯುವತಿ ಹೇಳಿದ್ದಾಳೆ.
ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದ್ದು, ಅಪರಾಧಿಗಳ ಬಂಧನಕ್ಕೆ ಬಲೆಬೀಸಲಾಗಿದೆ.












Click it and Unblock the Notifications