ಅಮಿತ್‌ ಶಾ ಭೇಟಿ ಮಾಡಿದ ಸೋವಣ್ಣ; ಯಶಸ್ವಿಯಾಯ್ತಾ ಸಚಿವ ವಿ ಸೋಮಣ್ಣ ದೆಹಲಿ ಯಾತ್ರೆ?

ಅಸಮಾಧಾನಗೊಂಡಿದ್ದ ವಿ ಸೋಮಣ್ಣ ಕೇಂದ್ರ ಸಚಿವ ಅಮಿತ್‌ ಶಾ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ದೆಹಲಿ,ಮಾರ್ಚ್16:‌ ಚುನಾವಣೆ ಹತ್ತಿರವಾಗುತ್ತಿದಂತೆ ರಾಜ್ಯ ಬಿಜೆಪಿ ನಾಯಕರ ವಿರುದ್ದ ವಸತಿ ಸಚಿವ ವಿ ಸೋಮಣ್ಣ ಅಸಮಾಧಾನಗೊಂಡಿದ್ದು, ಕಾಂಗ್ರೆಸ್‌ ಪಕ್ಷವನ್ನ ಸೇರ್ಪಡೆಗೆ ನಿರ್ಧರಿಸಿದ್ದಾರೆ ಎನ್ನಲಾಗಿತ್ತು.

ಈ ನಡುವೆ ಬುಧವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ನಿವಾಸದಲ್ಲಿ ಸಚಿವ ವಿ. ಸೋಮಣ್ಣ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಜೊತೆ ಭೇಟಿ ಮಾಡಿ 15 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಈ ವೇಳೆ ಪಕ್ಷದಲ್ಲಿ ತಮಗಾದ ನೋವಿನ ವಿಚಾರವನ್ನ ವಿ.ಸೋಮಣ್ಣ ಪ್ರಸ್ತಾಪಿಸಿದ್ದು, ಅಮಿತ್‌ ಶಾ ಎಲ್ಲವನ್ನು ಸರಿಪಡಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

Minister V Somanna Meets Union Home Minister Amit Shah in delhi

ಇನ್ನೂ ಈ ವೇಳೆ ಸಚಿವ ವಿ ಸೋಮಣ್ಣ ಮಾತನಾಡಿ, ಅಮಿತ್ ಶಾ ಭೇಟಿಯನಂತರ ಹೋರ ಸೋಮಣ್ಣ ಎಲ್ಲವು ಅಂದುಕೊಂಡಂತೆ ಆಗಿದೆ ಎಂದು ಹೇಳಿದ್ದಾರೆ. ಇನ್ನೂ ನಾನು ಬಂದ ಕೆಲಸ ಆಗಿದೆ, ಯಾವುದೇ ಸಮಸ್ಯೆ ಇಲ್ಲದೇ ಕೆಲಸ ಆಗಿದೆ. ನನ್ನ ಇಲಾಖೆ ಕೆಲಸದ ವಿಚಾರವಾಗಿ ಇಲ್ಲಿಗೆ ಬಂದಿದ್ದೆ. ಇದಕ್ಕೆ ಬೇಕಾದ ವಿಷ್ಯದ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ. ಧರ್ಮೇಂದ್ರ ಪ್ರಧಾನ್ ಅವರನ್ನ ಸಹ ಭೇಟಿ ಆಗಿದ್ದೇನೆ. ಯಾವುದೇ ವೈಯಕ್ತಿಕ ಕೆಲಸ ಅಲ್ಲಾ, ಪಾರ್ಟಿ ಕೆಲಸಕ್ಕೆ ಬಂದಿದ್ದು ಅಷ್ಟೇ ಒಟ್ನಲ್ಲಿ ನಾನು ಬಂದಿದ್ದು ಕೆಲಸ ಆಗಿದೆ.

ವಿಜಯೇಂದ್ರ ವಯಸ್ಸು ಎಷ್ಟು ನಂದು ಎಷ್ಟು? ನಂಗೆ ಅವರಿಗೆ ಯಾಕೆ ಹೋಲಿಕೆ ಮಾಡ್ತೀರಿ. ಅವರಿಗೆ ನನ್ನ ಬಗ್ಗೆ ಏನು ಅನಿಸಿಕೆ ಇದೆಯೋ ಗೊತ್ತಿಲ್ಲ. ಅವರು ನಮ್ಮ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಮಗ, ನನ್ನ ಮಗ ಮತ್ತು ವಿಜಯೇಂದ್ರ ಮಧ್ಯೆ ಏನಾಗಿದೆಯೋ ಗೊತ್ತಿಲ್ಲ. ಏನೇ ಗೊಂದಲ ಇದೆಯೋ ಅದನ್ನ ಅವರ ಬಳಿ ಕೇಳಿ, ನನ್ನ ಬಳಿ ಏಕೆ ಕೇಳುತ್ತೀರಿ.
ಏನೇ ಸಮಸ್ಯೆ ಆಗಿದ್ರೆ ಕ್ರಮ ಕೈಗೊಳ್ಳಿ ಅಂತ ಈಗಾಗಲೇ ಹೇಳಿದ್ದೇನೆ ಎಂದರು.

ಯಡಿಯೂರಪ್ಪ ಮತ್ತು ನಮ್ಮ ಕುಟುಂಬದ ಮಧ್ಯೆ ಬಿಕ್ಕಟ್ಟು ವಿಚಾರವಾಗಿ ಮಾತನಾಡಿ, ಅದೆಲ್ಲ ನಂಗೆ ಗೊತ್ತಿಲ್ಲ, 45 ವರ್ಷದಿಂದ ಜನಸೇವೆ ಮಾಡಿದ್ದೇನೆ, ನನಗೆ ವ್ಯಾಮೋಹ ಇಲ್ಲ
ಮಾಧ್ಯಮದವರು ಅಭಿವೃದ್ಧಿ ಬಗ್ಗೆ ಗಮನ ಕೊಡಿ,ದಿನ ಸೋಮಣ್ಣ, ಯಡಿಯೂರಪ್ಪ ಅಂತ ಸಮಯ ಹಾಳು ಮಾಡಬೇಡಿ, ನನ್ನಿಂದ ಬಿಜೆಪಿಗೆ ಅಪಚಾರ ಆಗಲ್ಲ. ಸಿದ್ದಗಂಗಾ ಮಠಕ್ಕೂ ನಂಗೂ ಯಾವುದೇ ಮನಸ್ತಾಪ ಇಲ್ಲ

Minister V Somanna Meets Union Home Minister Amit Shah in delhi

ಅಲ್ಲಿನ ಕಾರ್ಯಕ್ರಮಕ್ಕೆ ಹೋಗದೆ ಇದ್ದದ್ದು ನನ್ನ ವೈಯಕ್ತಿಕ ತೀರ್ಮಾನ, ನನಗೆ ಮಠ ಮಾನ್ಯಗಳ ಬಗ್ಗೆ ಅಪಾರ ಗೌರವ ಇದೆ. ಜೀವನವನ್ನೇ ಅದರ ಜತೆ ಬೆರೆತು ಹೋಗಿದೆ. ವೀರಶೈವ ಧರ್ಮಕ್ಕೆ ಶತಮಾನಗಳ ಇತಿಹಾಸವಿದೆ, ಇನ್ನೊಬ್ಬರ ಬಗ್ಗೆ ದ್ವೇಷ ಮಾಡಬೇಡಿ ಎನ್ನವುದು ನಾನು ಕಲಿತುಕೊಂಡ ಧರ್ಮ. ಯಡಿಯೂರಪ್ಪನವರ ಬಗ್ಗೆ ನನಗೆ ಸಿಟ್ಟಿಲ್ಲ, ಅವರು ಕರೆದರೆ ಹೋಗುವೆ ಇವತ್ತಿನವರೆಗೆ ಅವರು ಕರೆದಿಲ್ಲ, ನಾನು ಸತ್ಯ ಮಾತಡ್ತೇನೆ, ನನ್ನದು ಯಡಿಯೂರಪ್ಪ ನವರದ್ದು ತಂದೆ ಮಗ ಸಂಬಂಧ. ಯಡಿಯೂರಪ್ಪನವರ ಬಗ್ಗೆ ದ್ವೇಷ ಮಾಡಿ ನಂಗೆ ಏನು ಲಾಭ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+