Chennai Bengaluru Expressway: ಗುರಿ ತಪ್ಪಿದ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇ: ಈ ವರ್ಷ ಕಾಮಗಾರಿ ಪೂರ್ಣಕ್ಕೆ ವಿಘ್ನ!

ದೆಹಲಿ ಆಗಸ್ಟ್ 4: ಸುಮಾರು 262ಕಿಮೀ ಉದ್ದದ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ನಿರ್ಮಾಣ ಕಾರ್ಯವು ಮುಕ್ತಾಯದ ಹಂತಕ್ಕೆ ತಲುಪುತ್ತಿದೆ ಎನ್ನುವಷ್ಟರಲ್ಲಿ ವಿಘ್ನ ಶುರುವಾದಂತೆ ಕಾಣಿಸುತ್ತಿದೆ.

ಹೌದು.. ಬೆಂಗಳೂರಿನಿಂದ ಚೆನ್ನೈಗೆ ಹೋಗಲು ಸುಲಭವಾಗಲಿದ್ದ ಎಕ್ಸ್‌ಪ್ರೆಸ್‌ವೇ ಪೂರ್ಣಗೊಳ್ಳಲು ವಿಳಂಬವಾಗಲಿದೆ. ಈ ಬಗ್ಗೆ ಸ್ವತಃ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಸಂಸತ್ತಿನಲ್ಲಿ ಹೇಳಿದ್ದಾರೆ. ದಿ ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ ಯೋಜನೆಯು ನಿಗದಿತ ಸಮಯಕ್ಕೆ ಪೂರ್ಣಗೊಳ್ಳುವುದಿಲ್ಲ ಎಂದು ನಿತಿನ್ ಗಡ್ಕರಿ ಸ್ಪಷ್ಟಪಡಿಸಿದ್ದಾರೆ.

Minister Nitin Gadkari said Chennai-Bengaluru Expressway will be delay in this year

ಕಳೆದ ತಿಂಗಳಷ್ಟೇ ನಿತಿನ್ ಗಡ್ಕರಿ ಅವರು ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಮತ್ತು ಸುತ್ತಮುತ್ತಲಿನ ವರ್ತುಲ ರಸ್ತೆಯನ್ನು ಡಿಸೆಂಬರ್ 2024 ರೊಳಗೆ ಸಂಪೂರ್ಣವಾಗಿ ಪೂರ್ಣಗೊಳಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. 300 ಕಿಮೀ ವ್ಯಾಪ್ತಿಯ 6,200 ಕೋಟಿ ರೂಪಾಯಿ ವೆಚ್ಚದ 18 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ಸಮಾರಂಭವನ್ನು ಉದ್ಘಾಟಿಸಿ ಅವರು ಈ ಆಶಾವಾದವನ್ನು ಹಂಚಿಕೊಂಡಿದ್ದರು.

ಇದು ಮೂರು ರಾಜ್ಯಗಳಾದ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನ ನಡುವೆ ಹಾದುಹೋಗುತ್ತದೆ. ಆ ಮಾರ್ಗಗಳೆಂದರೆ, ಹೊಸಕೋಟೆ, ಮಾಲೂರು, ಬಂಗಾರಪೇಟೆ, ಕೋಲಾರ ಗೋಲ್ಡ್ ಫೀಲ್ಡ್ಸ್, ಪಲಮನೇರ್, ವೆಂಕಟಗಿರಿಕೋಟಾ, ಚಿತ್ತೂರು, ಬಂಗಾರುಪಾಲೆಂ, ರಾಣಿಪೇಟ್ ಮತ್ತು ಶ್ರೀಪೆರಂಬದೂರ್ ಮಾರ್ಗದ ಪ್ರಮುಖ ನಗರಗಳಾಗಿವೆ.

ಕರ್ನಾಟಕದಲ್ಲಿ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಯೋಜನೆಯು ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು 120 ನಿಮಿಷಗಳವರೆಗೆ ಕಡಿಮೆ ಮಾಡುತ್ತದೆ. ಅಲ್ಲದೆ ಈ ಎಕ್ಸ್‌ಪ್ರೆಸ್‌ವೇ ಎರಡು ಮಹಾನಗರಗಳನ್ನು ಸಂಪರ್ಕಿಸುವುದು ಮಾತ್ರವಲ್ಲದೆ ಬೆಂಗಳೂರು ಮತ್ತು ಚೆನ್ನೈ ನಡುವಿನ ದೂರವನ್ನು 38 ಕಿಲೋಮೀಟರ್‌ಗಳಷ್ಟು ಕಡಿಮೆ ಮಾಡುತ್ತದೆ. ಗಂಟೆಗೆ 120 ಕಿಮೀ ವೇಗದಲ್ಲಿ ಸಂಚರಿಸುವ ಈ ಎಕ್ಸ್‌ಪ್ರೆಸ್‌ವೇ ತ್ವರಿತ ಪ್ರಯಾಣದ ಕನಸನ್ನು ಸೃಷ್ಟಿಸಿತ್ತು.

Minister Nitin Gadkari said Chennai-Bengaluru Expressway will be delay in this year

ಆದರೆ ಗುತ್ತಿಗೆದಾರ ಮತ್ತು ಎನ್‌ಎಚ್‌ಎಐ ನಡುವಿನ ಸಮಸ್ಯೆಯಿಂದಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದು ಬಂದಿದೆ. ಸಾಮಾಗ್ರಿಗಳನ್ನು ಸರಿಯಾದ ಸಮಯಕ್ಕೆ ಪೂರೈಕೆಯಾಗದೇ ಇರುವುದು ನಿರ್ಮಾಣಕ್ಕೆ ಅಡ್ಡಿಯನ್ನುಂಟು ಮಾಡಿದೆ.

ಆದರೆ ಸಚಿವರ ಈ ಹೇಳಿಕೆಯಿಂದ ಲಾರಿ ಮಾಲೀಕರ ಸಂಘ ಬೇಸರ ವ್ಯಕ್ತಪಡಿಸಿದೆ. ಈ ಬಗ್ಗೆ ಮಾತನಾಡಿದ ತಮಿಳುನಾಡು ಲಾರಿ ಮಾಲೀಕರ ಸಂಘದ ಎಸ್ ಯುವರಾಜ್, "ಸಚಿವರು ಪ್ರತಿ ಆರು ತಿಂಗಳಿಗೊಮ್ಮೆ ಕೊಟ್ಟ ಮಾತನ್ನು ಮುಂದೂಡುತ್ತಾರೆ" ಎಂದು ಟೀಕಿಸಿದ್ದಾರೆ.

ಚೆನ್ನೈ, ತಮಿಳುನಾಡು ಮತ್ತು ನೆರೆಯ ರಾಜ್ಯಗಳ ಇತರ ಜಿಲ್ಲೆಗಳೊಂದಿಗೆ ಸಂಪರ್ಕಿಸುವ ಎಲ್ಲಾ ಪ್ರಮುಖ ಹೆದ್ದಾರಿ ಯೋಜನೆಗಳು ಅರ್ಧದಷ್ಟು ಮಾತ್ರ ಪೂರ್ಣಗೊಂಡಿವೆ. ಅವುಗಳ ಪೂರ್ಣಗೊಳ್ಳುವ ದಿನಾಂಕಗಳನ್ನು ಈಗ 2025 ಕ್ಕೆ ಮುಂದುಡಲಾಗಿದೆ. ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಅಲ್ಲದೆ, ಚೆನ್ನೈ-ತಿರುವಳ್ಳೂರು (ಸಿಟಿಎಚ್) ರಸ್ತೆ ಮತ್ತು ಪೂರ್ವ ಕರಾವಳಿ ರಸ್ತೆ (ಇಸಿಆರ್) ವಿಸ್ತರಣೆ ಕೂಡ ವಿಳಂಬವಾಗಿದೆ ಎಂದು ಎಸ್ ಯುವರಾಜ್ ದೂರಿದ್ದಾರೆ. ಆದರೆ ಇದಕ್ಕೆ ಗಡ್ಕರಿಯವರು ಕಾರಣ ನೀಡಿದ್ದು ಹೀಗಿದೆ...

Minister Nitin Gadkari said Chennai-Bengaluru Expressway will be delay in this year

ವಿಳಂಬದ ಹಿಂದಿನ ಕಾರಣ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್‌ಪ್ರೆಸ್‌ವೇಯನ್ನು ಡಿಸೆಂಬರ್ 2024 ರ ಮೊದಲು ಉದ್ಘಾಟಿಸಲಿದ್ದಾರೆ ಎಂದು ಘೋಷಿಸಿದ್ದರು. ಆದರೀಗ ಚಂಡಮಾರುತಗಳು, ಗುತ್ತಿಗೆದಾರರ ಕಾರ್ಯಕ್ಷಮತೆ ಸಮಸ್ಯೆಗಳಿಂದಾಗಿ ಕಾಮಗಾರಿ ವಿಳಂಬವಾಗುತ್ತದೆ ಎಂದು ಗಡ್ಕರಿ ಅವರು ಹೇಳಿದ್ದಾರೆ. ಅಂದರೆ 2025ರವರೆಗೂ ಇದರ ಕಾಮಗಾರಿ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ಮಾಮಲ್ಲಪುರಂ ಮತ್ತು ಮುಗೈಯೂರ್ ನಡುವಿನ ಈಸ್ಟ್ ಕೋಸ್ಟ್ ರಸ್ತೆಯ (ECR) 31-ಕಿಮೀ ಉದ್ದದ ಚತುಷ್ಪಥವನ್ನು ಮೇ ವೇಳೆಗೆ ಪೂರ್ಣಗೊಳಿಸಲು ಸಮಯ ನಿಗದಿಪಡಿಸಲಾಗಿತ್ತು. ಈಗ ಜುಲೈ 2025 ರವರೆಗೆ ಅದರ ಕಾಮಗಾರಿ ವಿಳಂಬವಾಗಲಿದೆ. ಇಲ್ಲಿ ಕೇವಲ 32 ಪ್ರತಿಶತದಷ್ಟು ದೂರದ ಕೆಲಸ ಮಾತ್ರ ಪೂರ್ಣಗೊಂಡಿದೆ. ಹೀಗಾಗಿ ಕೇಂದ್ರದ ವಿರುದ್ಧ ಲಾರಿ ಮಾಲೀಕರಿಂದ ಬೇಸರ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+