Get Updates
Get notified of breaking news, exclusive insights, and must-see stories!

ಐಎನ್‌ಎಸ್ ವಿಕ್ರಾಂತ್‌ನಲ್ಲಿ ರಾತ್ರಿ ಯಶಸ್ವಿಯಾಗಿ ಲ್ಯಾಂಡ್ ಆದ ಮಿಗ್ -29ಕೆ ಫೈಟರ್ ಜೆಟ್- ವಿಡಿಯೋ

ನವ ದೆಹಲಿ ಮೇ 26: ಭಾರತೀಯ ನೌಕಾಪಡೆ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. MiG-29K ಫೈಟರ್ ಜೆಟ್ INS ವಿಕ್ರಾಂತ್‌ನಲ್ಲಿ ರಾತ್ರಿ ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ಇದನ್ನು ರಕ್ಷಣಾ ವಲಯಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದು ನೌಕಾಪಡೆ ಹೇಳಿದೆ.

ಭಾರತೀಯ ನೌಕಾಪಡೆಯ ಪ್ರಕಾರ, ಮಿಗ್ -29ಕೆ ಫೈಟರ್ ಜೆಟ್ ಅನ್ನು ಭಾರತದ ಸ್ಥಳೀಯ ಐಎನ್‌ಎಸ್ ವಿಕ್ರಾಂತ್ ಯುದ್ಧನೌಕೆಯಲ್ಲಿ ರಾತ್ರಿ ಲ್ಯಾಂಡಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದು ಆತ್ಮನಿರ್ಭರ ಭಾರತದ ಪ್ರಗತಿಯನ್ನು ಸೂಚಿಸುತ್ತದೆ ಎಂದು ಭಾರತೀಯ ನೌಕಾಪಡೆ ಹೇಳಿದೆ. ನೌಕಾಪಡೆಯು ಐಎನ್ಎಸ್‌ ವಿಕ್ರಾಂತ್‌ನಲ್ಲಿ ಮಿಗ್ -29 ಕೆಯ ಮೊದಲ ರಾತ್ರಿ ಲ್ಯಾಂಡಿಂಗ್ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಯುದ್ಧವಿಮಾನವು ಐಎನ್‌ಎಸ್ ವಿಕ್ರಾಂತ್‌ನಲ್ಲಿ ಕತ್ತಲೆ ಸಮಯದಲ್ಲಿ ಇಳಿಯುವದನ್ನು ಕಾಣಬಹುದು.

MiG-29K fighter jet successfully landed

ಮಿಗ್ -29ಕೆ ರಾತ್ರಿ ಯಶಸ್ವಿಯಾಗಿ ಲ್ಯಾಂಡಿಂಗ್ ಕೈಗೊಂಡಿದ್ದಕ್ಕಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನೌಕಾಪಡೆಯನ್ನು ಅಭಿನಂದಿಸಿದರು. ಈ ಗಮನಾರ್ಹ ಸಾಧನೆಯು ವಿಕ್ರಾಂತ್ ಸಿಬ್ಬಂದಿ ಮತ್ತು ನೌಕಾ ಪೈಲಟ್‌ಗಳ ಕೌಶಲ್ಯ ಪರಿಶ್ರಮ ಮತ್ತು ವೃತ್ತಿಪರತೆಗೆ ಸಾಕ್ಷಿಯಾಗಿದೆ. ಅವರಿಗೆ ಅಭಿನಂದನೆಹಳು ಎಂದು ಅಚಿವರು ಹೇಳಿದ್ದಾರೆ.

ಇದೊಂದು ಸವಾಲಿನ ಕಾರ್ಯ. ಯಾಕೆಂದರೆ ವಿಮಾನವಾಹನ ನೌಕೆಯು ಗಂಟೆಗೆ 40-50ಕಿಮೀ ವೇಗದಲ್ಲಿ ಚಲಿಸುವುದರಿಂದ ಮತ್ತು ಪೈಲಟ್‌ಗಳು ಜೆಟ್‌ಗಳ ವೇಗವನ್ನು ವಿಮಾನವಾಹಕಗಳಿಗೆ ಸಂಬಂಧಿಸಿದಂತೆ ಇಟ್ಟುಕೊಳ್ಳಬೇಕಾಗಿರುವುದರಿಂದ ಇದು ಸುಲಭದ ಕಾರ್ಯವಲ್ಲ. 'ನೈಟ್ ಟ್ಯ್ರಾಪ್' ಎಂದರೆ ರಾತ್ರಿಯ ಸಮಯದಲ್ಲಿ ವಿಮಾನವಾಹಕ ನೌಕೆಯ ಮೇಲೆ ಫೈಟರ್ ಜೆಟ್ ಇಳಿಯುವುದು. ಫೈಟರ್‌ ಜೆಟ್‌ಗಳನ್ನು ಸಾಮಾಣ್ಯ ರನ್‌ವೇಯಲ್ಲಿ ಇಳಿಸುವುದು ವಿಮಾನವಾಹಕ ನೌಕೆಯ ಫ್ಲೈಟ್‌ಡೆಕ್‌ನಲ್ಲಿ ಲ್ಯಾಂಡಿಂಗ್‌ಗೆ ಹೋಲಿಸಿದರೆ ವಿಭಿನ್ನವಾಗಿದೆ.

ಮಿಗ್ -29 ಕೆ ಐಎನ್‌ಎಸ್‌ ವಿಕ್ರಾಂತ್‌ನ ಫೈಟರ್ ಫ್ಲೀಟ್‌ನ ಭಾಗವಾಗಿದೆ. 20000 ಕೋಟಿ ರೂ, ವೆಚ್ಚದಲ್ಲಿ 45000 ಟನ್ ತೂಕದ ಐಎನ್‌ಎಸ್‌ ವಿಕ್ರಾಂತ್ ನೌಕೆಯನ್ನು ನಿರ್ಮಿಸಲಾಗಿದ್ದು, ಕಳೆದ ವರ್ಚ ಸೆಪ್ಟೆಂಬರ್‌ನಲ್ಲಿ ಕಾರ್ಯಾರಂಭ ಮಾಡಲಾಗಿದೆ.

ಈ ಹಿಂದೆ ತೇಜಸ್ ವಿಮಾನದ ನೌಕಾ ಆವೃತ್ತಿಯು ಐಎನ್‌ಎಸ್ ವಿಕ್ರಾಂತ್‌ನಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿತ್ತು. ಆದಾಗ್ಯೂ, 'MiG-29K' ಲ್ಯಾಂಡಿಂಗ್ ಇದಕ್ಕಿಂತ ಹೆಚ್ಚು ಮಹತ್ವದ್ದಾಗಿದೆ ಎಂದು ಪರಿಗಣಿಸಲಾಗಿದೆ. ತೇಜಸ್ ವಿಮಾನ ಹಗಲಿನಲ್ಲಿ ಲ್ಯಾಂಡ್ ಆಗಿದ್ದರೆ, ರಾತ್ರಿಯಲ್ಲಿ ಮಿಗ್-29ಕೆ ಲ್ಯಾಂಡ್ ಆಗಿರುವುದು ಇದಕ್ಕೆ ಪ್ರಮುಖ ಕಾರಣ.

ಇದಕ್ಕೂ ಮೊದಲು, ಭಾರತೀಯ ನೌಕಾಪಡೆಯು ಮಾರ್ಚ್ 28 ರಂದು ಐಎನ್‌ಎಸ್ ವಿಕ್ರಾಂತ್‌ನಲ್ಲಿ ಕಾಮೋವ್ 31 ಹೆಲಿಕಾಪ್ಟರ್ ಅನ್ನು ಇಳಿಸಿತ್ತು. ಭಾರತೀಯ ನೌಕಾಪಡೆಯ ಅಧಿಕಾರಿಗಳು ಹೇಳುವ ಪ್ರಕಾರ, ಪರೀಕ್ಷೆಯ ಸಮಯದಲ್ಲಿ ಸ್ಥಳೀಯ ಬೆಳಕಿನ ಪರಿಕರಗಳು ಮತ್ತು ಹಡಗು ವ್ಯವಸ್ಥೆಗಳನ್ನು ಬಳಸಲಾಯಿತು, ಇದು ಸಂಪೂರ್ಣವಾಗಿ ಯಶಸ್ವಿಯಾಗಿ ಲ್ಯಾಂಡ್ ಆಗಿತ್ತು.

ವಿಕ್ರಾಂತ ಸ್ವತಃ ಭಾರತೀಯ ನೌಕಾಪಡೆಯ ಪ್ರಮುಖ ಹಡಗು. ಇದನ್ನು ಭಾರತದ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ನಿರ್ಮಿಸಲಾಗಿದೆ. ಇದರ ಉದ್ದ 262 ಮೀಟರ್ ಮತ್ತು ಅಗಲ 62 ಮೀಟರ್. INS ವಿಕ್ರಾಂತ್ ಎತ್ತರ 59 ಮೀಟರ್. ನೌಕಾಪಡೆಯ ಪ್ರಕಾರ, ಈ ಯುದ್ಧನೌಕೆಯ ಕಿರಣ 62 ಮೀಟರ್. INS ವಿಕ್ರಾಂತ್ 14 ಡೆಕ್‌ಗಳು ಮತ್ತು 2300 ಕಂಪಾರ್ಟ್‌ಮೆಂಟ್‌ಗಳನ್ನು ಹೊಂದಿದ್ದು, 1700 ಸಿಬ್ಬಂದಿಗೆ ಅವಕಾಶ ಕಲ್ಪಿಸಲಾಗಿದೆ.

ಈ ಯುದ್ಧನೌಕೆಯ ವಿಶೇಷತೆಯೆಂದರೆ ನೌಕಾಪಡೆಯ ಮಹಿಳಾ ಅಧಿಕಾರಿಗಳಿಗೆ ಪ್ರತ್ಯೇಕ ಕ್ಯಾಬಿನ್‌ಗಳನ್ನು ಹೊಂದಿದೆ. ಭಾರತೀಯ ನೌಕಾಪಡೆಯ ಈ ಸ್ಥಳೀಯ ಯುದ್ಧನೌಕೆಯಲ್ಲಿ ಎಲ್ಲಾ ವೈದ್ಯಕೀಯ ಸೌಲಭ್ಯಗಳು ಸಹ ಲಭ್ಯವಿವೆ. ಐಸಿಯುನಂತಹ ಪ್ರಮುಖ ವೈದ್ಯಕೀಯ ಸೇವೆಗಳೂ ಇಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಇದರೊಂದಿಗೆ ಈ ಯುದ್ಧನೌಕೆಯಲ್ಲಿ ಪ್ರಯೋಗಾಲಯಗಳೂ ಇವೆ. ಭಾರತೀಯ ನೌಕಾಪಡೆಯ ಯುದ್ಧನೌಕೆಯ ಒಟ್ಟು ತೂಕ ಸುಮಾರು 40 ಸಾವಿರ ಟನ್ ಆಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+