Middle East War: ಮಧ್ಯಪ್ರಾಚ್ಯ ಯುದ್ಧ: ಎಂಥಾ ನಾಚಿಕೆಗೇಡು, ಒಳ್ಳೆಯವರಿಗಿದು ಕಾಲವಲ್ಲ: ಎಂದು ನಟ ಕಿಶೋರ್ ಕುಮಾರ್

Middle East War: ಮಧ್ಯಪ್ರಾಚ್ಯ ಯುದ್ಧ ಹಾಗೂ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ನಟ ಕಿಶೋರ್ ಕುಮಾರ್ ಅವರು ಎಂಥಾ ನಾಚಿಕೆಗೇಡು, ಒಳ್ಳೆಯವರಿಗಿದು ಕಾಲವಲ್ಲ ಎಂದು ಹೇಳಿದ್ದಾರೆ.

ವಿಶ್ವಗುರುವಾಗಲು ಪರಮಾಣು ಸಂಘರ್ಷದ ಹೊಸ್ತಿಲಲ್ಲಿ ನಿಂತ ಮಧ್ಯಪ್ರಾಚ್ಯದ ಯುದ್ಧಕ್ಕಿಂತ ಸರಿಯಾದ ಸಮಯ ಸಿಗದೆಂದು ಯುಕ್ರೇನ್ ಯುದ್ಧನಿಲ್ಲಿಸಿದ ದಲ್ಲಾಳಿ ಪಾಪಾನನ್ನು ಯುದ್ಧ ಅಪರಾಧಿಗಳ ಜೊತೆ ಹಲ್ಲು ಕಿಸಿಯಲು, ರೀಲ್ಸ್ ಮಾಡಲು, ಚುನಾವಣಾ ಪ್ರಚಾರ ಮಾಡುತ್ತಾ ಸುಳ್ಳು ಹೇಳಲು, ದ್ವೇಷ ಹರಡಲು , 5 ವರುಷದ ಕಂದಮ್ಮ ಹಿಂದ್ ರಜಾಬಳ ಬರ್ಬರ ಹತ್ಯೆಯ ಸಿನಿಮಾ ಬ್ಯಾನ್ ಮಾಡುತ್ತಾ, ಗಾಝಾದಲ್ಲಿ 70 ಸಾವಿರ ಮಕ್ಕಳು ಮಹಿಳೆಯರು ಅಮಾಯಕರನ್ನಲ್ಲದೇ ಇರಾನಿನಲ್ಲೂ ಸಾವಿರಾರು ಹಸುಳೆಗಳನ್ನು ಕೊಂದ ಧೀರ ಫಾದರ್ ಲ್ಯಾಂಡ್ ಕಾಲಿಗೆ ಬಿದ್ದು ಪದಕ ಗಿಟ್ಟಿಸುತ್ತಾ...

Middle East War

ಮೈ ಫ್ರೆಂಡ್ ಡೋಲಾಂಡನ ಗುಲಾಮಗಿರಿ ಮಾಡಲು ಬಿಟ್ಟು ,ನಾವು ಭಕ್ತಮಂಡಳಿ ಗ್ಯಾಸ್ ಉತ್ಪಾದನೆಯಲ್ಲಿ ವಿಶ್ವಗುರುವಾಗಲು ಗಟರಿನಲ್ಲಿ ಗ್ಯಾಸ್ ಹುಡುಕುತ್ತಿರುವಾಗ, ಪಾಠ ಮಾಡುವ ಸಮಯದಲ್ಲಿ ಕ್ಲಾಸ್ರೂಮನ್ನು ಬಿಟ್ಟು ಓಟ ಕಿತ್ತ ವಿಶ್ವಗುರುವನ್ನು ಬದಿಗೊತ್ತಿ ನೆನ್ನೇವರೆಗೂ ಭಯೋತ್ಪಾದಕರ ಬೆಂಬಲಿಗನಾಗಿದ್ದ ಪಾಕೀಸ್ತಾನ ವಿಶ್ವಗುರುವಾಗಿ ಬಿಡಬೇಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಇಷ್ಟು ದಿನ ಹೋದಲ್ಲೆಲ್ಲ ಬಾಡಿಗೆ ಪ್ರೇಕ್ಷಕರನ್ನು ಕರೆದು ದುನಿಯಾ ಮೆ ಡಂಕಾ ಬಜಾಯಿಸುತ್ತಿದ್ದ ಮಹಾಮಾನವನ ಮತ್ತು ನಮ್ಮ ಭಕ್ತಿ ಪೂರ್ವಕ ಅವಿರತ ಶ್ರಮಕ್ಕೆ ಸಿಕ್ಕ ಪ್ರತಿಫಲ ಇದೇನು. ನಿಜ ಒಳ್ಳೆಯವರಿಗಿದು ಕಾಲವಲ್ಲ ಎಂದೂ ಅವರು ಹೇಳಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ ಏನು

ಇನ್ನು ನಟ ಕಿಶೋರ್ ಕುಮಾರ್ ಅವರ ಸೋಶಿಯಲ್ ಮೀಡಿಯಾ ಪೋಸ್ಟ್‌ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶ್ಯಾಮ್ ಭೀಮಗುಳಿ ಎನ್ನುವವರು ನಿನ್ನೆ ಇರಾನಿನ ಪ್ರತಿನಿಧಿ "ಅಬ್ದುಲ್ ಮಜೀದ್ ಹಕೀಂ ಇಲಾಹಿ" ನಮ್ಮ ಭಾರತ ದೇಶ, ಪ್ರಧಾನ ಮಂತ್ರಿಗಳ ಬಗ್ಗೆ ಎಷ್ಟೊಂದು ಮೆಚ್ಚುಗೆಯ ಹೇಳಿಕೆ ಕೊಟ್ಟಿದ್ದಾರೆ. ಬಹುಶಃ ನಿಮಗೆ ಆ ಒಳ್ಳೇ ಸುದ್ದಿ ಲಿಂಕ್ ಸಿಕ್ಕಿಲ್ಲ ಅಂತ ಅನ್ಸುತ್ತೆ ಎಂದು ವ್ಯಂಗ್ಯವಾಡಿದ್ದಾರೆ.

ಅವಿನಾಶ್ ಎಲ್ ರಾಜ್ ಎನ್ನುವವರು ಅಮೆರಿಕ ತನ್ನ ಸೈನಿಕನನ್ನು ಉಳಿಸಿಕೊಳ್ಳಲು 4000 ಸಾವಿರ ಕೋಟಿಯನ್ನು ಖರ್ಚು ಮಾಡಿತ್ತು. ನಮ್ಮ ದೇಶದ ಅಭಿನಂದನೆಯನ್ನು ಬಿಡಿಸಿಕೊಂಡು ಬರಲು ಒಂದು ರೂಪಾಯಿ ಖರ್ಚು ಮಾಡದೆ ಬರೀ ಒಂದೇ ಒಂದು ಫೋನ್ ಕಾಲ್‌ನಲ್ಲಿ ಬಿಡಿಸಿಕೊಂಡು ಬಂದಿತು. ಇದು ಭಾರತದ ತಾಕತ್ತು, ನಮ್ಮ ದೇಶದ ಬಗ್ಗೆ ಹೆಮ್ಮೆ ಪಡುವ ಬದಲು ಬಿಕರಿ ರಾಷ್ಟ್ರದ ಪ್ರಧಾನಿಯನ್ನು ಹೊಗಳಬೇಕೇ ಎಂದು ಪ್ರಶ್ನೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+