MeToo ಆರೋಪ: ಸಾಜಿದ್ ಖಾನ್ ಈ ವಾರ ಬಿಗ್‌ಬಾಸ್‌ನಿಂದ ಹೊರಹಾಕಲ್ಪಡುತ್ತಾರಾ?
ಸಲ್ಮಾನ್ ಖಾನ್ ಅವರ ಬಿಗ್ ಬಾಸ್ ಕಾರ್ಯಕ್ರಮದ ಪ್ರತಿ ಹೊಸ ಋತುವಿನಲ್ಲಿ ವಿವಾದಗಳು ಇದ್ದೇ ಇರುತ್ತವೆ. ಪ್ರತಿ ಬಾರಿ ಹೊಸ ಸ್ಪರ್ಧಿಗಳು ಕಾರ್ಯಕ್ರಮಕ್ಕೆ ಬಂದಾಗ ಕೆಲ ಸ್ಪರ್ಧಿಗಳ ಬಗ್ಗೆ ಯಾವಾಗಲೂ ವಿವಾದಗಳು ಉಂಟಾಗುತ್ತಲೇ ಇರುತ್ತವೆ. ಆದರೆ ಈ ಋತುವಿನ ಶೋನಲ್ಲಿ ಅತ್ಯಂತ ವಿವಾದಾತ್ಮಕ ಸ್ಪರ್ಧಿ ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಸಾಜಿದ್ ಖಾನ್ ಆಗಿದ್ದಾರೆ. ಸಾಜಿದ್ ಖಾನ್ ಅವರು ಶೋಗೆ ಎಂಟ್ರಿ ಕೊಟ್ಟಾಗಿನಿಂದಲೂ ಅನೇಕ ನಟಿಯರು ಅವರನ್ನು ಶೋದಿಂದ ಹೊರಹಾಕುವಂತೆ ಒತ್ತಾಯಿಸುತ್ತಿದ್ದಾರೆ.
ಇದರಿಂದ ಸಾಜಿದ್ ಖಾನ್ ಕಾರ್ಯಕ್ರಮದಿಂದ ಹೊರಗುಳಿಯುತ್ತಾರಾ? ಎನ್ನುವ ಅನುಮಾನ ದಟ್ಟವಾಗಿದೆ. ಸಾಜಿದ್ ಖಾನ್ ವಿರುದ್ಧ ಕಿರುಕುಳ ಮತ್ತು ಶೋಷಣೆಯಂತಹ ಗಂಭೀರ ಆರೋಪಗಳನ್ನು ಮಾಡಲಾಗಿದೆ. ಇದರಿಂದಾಗಿ ಅವರು ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಾಗಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಗಳಿಂದ ಬಾಲಿವುಡ್ ಸೆಲೆಬ್ರಿಟಿಗಳವರೆಗೆ, ಸಾಜಿದ್ ಖಾನ್ ಅವರನ್ನು ಶೋನಿಂದ ಹೊರಹಾಕಲು ಬೇಡಿಕೆಯಿದೆ. ಈ ನಟಿಯರಲ್ಲಿ ಶೆರ್ಲಿನ್ ಚೋಪ್ರಾ, ಸೋನಾ ಮೊಹಾಪಾತ್ರ, ಉರ್ಫಿ ಜಾವೇದ್, ಕನಿಷ್ಕಾ ಸೋನಿ, ದೇವೋಲೀನಾ ಭಟ್ಟಾಚಾರ್ಜಿ, ಗೌಹರ್ ಖಾನ್, ಸಲೋನಿ ಚೋಪ್ರಾ ಮತ್ತು ಮಂದನಾ ಕರಿಮಿ ಸೇರಿದ್ದಾರೆ.

ಬಿಸ್‌ಬಾಸ್ ತಯಾರಕರ ಮೇಲೆ ದೊಡ್ಡ ಒತ್ತಡ
ಸೋಷಿಯಲ್ ಮೀಡಿಯಾದಲ್ಲಿ ನಿರಂತರ ಗದ್ದಲದ ನಂತರ, ಈಗ ಸಾಜಿದ್ ಖಾನ್ ಅವರನ್ನು ಹೊರಹಾಕಲು ಬಿಗ್ ಬಾಸ್ ತಯಾರಕರು ಮತ್ತು ಕಾರ್ಯಕ್ರಮದ ನಿರೂಪಕ ಸಲ್ಮಾನ್ ಖಾನ್ ಮೇಲೆ ಒತ್ತಡವಿದೆ. ಈ ಪರಿಸ್ಥಿತಿಯಲ್ಲಿ ಸಾಜಿದ್ ಖಾನ್ ಅವರನ್ನು ಕಾರ್ಯಕ್ರಮದಿಂದ ತೆಗೆದುಹಾಕುವ ನಿರ್ಧಾರವನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ.

ಸಾಜಿದ್ ಖಾನ್‌ನೊಂದಿಗೆ ಸಲ್ಮಾನ್ ಖಾನ್ ಉತ್ತಮ ಬಾಂಧವ್ಯ
ಮಾಧ್ಯಮ ವರದಿಗಳನ್ನು ನಂಬುವುದಾದರೆ, ಈ ವಾರ ಸಾಜಿದ್ ಖಾನ್ ಅವರನ್ನು ಕಾರ್ಯಕ್ರಮದಿಂದ ಹೊರಹಾಕಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಕಾರ್ಯಕ್ರಮದ ನಿರೂಪಕ ಸಲ್ಮಾನ್ ಖಾನ್ ಈ ನಿರ್ಧಾರ ತೆಗೆದುಕೊಳ್ಳುವುದು ತುಂಬಾ ಕಷ್ಟ. ಅದಕ್ಕೆ ಕಾರಣ ಸಲ್ಮಾನ್ ಖಾನ್ ಮತ್ತು ಸಾಜಿದ್ ಖಾನ್ ಜೊತೆ ಸಿನಿಮಾ ಜಗತ್ತಿನಲ್ಲಿ ಉತ್ತಮ ಬಾಂಧವ್ಯವಿದೆ. ಸಲ್ಮಾನ್ ಖಾನ್ ಅವರ ಅಕ್ಕ ಫರಾ ಖಾನ್ ಕೂಡ ಸಾಜಿದ್ ಖಾನ್ಗೆ ತುಂಬಾ ಹತ್ತಿರವಾಗಿದ್ದಾರೆ. ಹೀಗಾಗಿ ಸಲ್ಮಾನ್ ಖಾನ್ ಸಾಜಿದ್ ಖಾನ್ ಅವರನ್ನು ಶೋನಿಂದ ಹೊರಹಾಕುವ ಸಾಧ್ಯತೆಗಳು ಇಲ್ಲ ಎನ್ನಲಾಗುತ್ತಿದೆ.

'ಬಿಗ್‌ಬಾಸ್‌ನಿಂದ ಸಾಜಿದ್ ಖಾನ್ ತೆಗೆದು ಹಾಕಿ'
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಜಿದ್ ಖಾನ್ ಸಾಕಷ್ಟು ಟ್ರೋಲ್ ಆಗುತ್ತಿದ್ದಾರೆ. 2018ರಲ್ಲಿ ಮೀಟೂ ಆಂದೋಲನದ ವೇಳೆ ಸಾಜಿದ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಲಾಗಿತ್ತು. ಆ ವೇಳೆ ಹಲವು ನಟಿಯರು ಈ ಬಗ್ಗೆ ಮೌನ ಮುರಿದು ಸಾಜಿದ್ ಖಾನ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಆರೋಪಗಳಿಂದಾಗಿ ಸಾಜಿದ್ ಖಾನ್ ಅವರನ್ನು ಬಿಗ್ ಬಾಸ್ ನಿಂದ ಹೊರ ಹಾಕಬೇಕೆಂಬ ಬೇಡಿಕೆ ನಿರಂತರವಾಗಿ ಕೇಳಿ ಬರುತ್ತಿದೆ. ಇಂಥವರು ಶೋನಲ್ಲಿ ಇರುವುದು ಸರಿಯಲ್ಲ ಎನ್ನುತ್ತಾರೆ ಜನ.

ಸಾಜಿದ್ ಖಾನ್ ಬೆಂಬಲಕ್ಕೆ ನಿಂತ ಶೆಹನಾಜ್ ಗಿಲ್
ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಚಿತ್ರನಿರ್ಮಾಪಕ ಸಾಜಿದ್ ಖಾನ್ ಬಿಗ್ ಬಾಸ್‌ನಲ್ಲಿ ಸ್ಪರ್ಧಿಯಾಗುತ್ತಿರುವುದನ್ನು ವಿರೋಧಿಸಿದಾಗಿನಿಂದ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅತ್ಯಾಚಾರದ ಬೆದರಿಕೆಗಳು ಬರುತ್ತಿವೆ ಎಂದು ಬುಧವಾರ (ಅಕ್ಟೋಬರ್ 12) ಆರೋಪಿಸಿದ್ದಾರೆ. ತನ್ನ Instagram DM ಗಳ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡ ಮಲಿವಾಲ್, ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ತನಗೆ ಅತ್ಯಾಚಾರ ಬೆದರಿಕೆಗಳು ಬರುತ್ತಿವೆ ಎಂದು ಆರೋಪಿಸಿದ್ದಾರೆ.
ಆದರೆ ಸಾಜಿದ್ ಖಾನ್ ಮೇಲಿನ ಆರೋಪ ನಡುವೆಯೇ ಶಹನಾಜ್ ಗಿಲ್ ಸಾಜಿದ್ ಖಾನ್ ಬೆಂಬಲಕ್ಕೆ ನಿಂತರು. ಆದರೆ ನಟಿ ಸಾಜಿಕ್ ಅವರನ್ನು ಬೆಂಬಲಿಸುವುದು ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ. ಇದರಿಂದಾಗಿ ನಟಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದರು. ಸಾಜಿದ್ ಖಾನ್ ಅವರನ್ನು ಬಹಿರಂಗವಾಗಿ ಬೆಂಬಲಿಸಿದ ಇನ್ನೂ ಕೆಲವು ನಟಿಯರು ಇದ್ದಾರೆ. ಈಗ ಈ ವಾರ ಸಾಜಿದ್ ಖಾನ್ ಅವರನ್ನು ಶೋನಿಂದ ಹೊರಹಾಕಲಾಗುತ್ತದೆಯೇ ಎಂದು ಕಾದು ನೋಡಬೇಕಾಗಿದೆ.












Click it and Unblock the Notifications