ಕೊಚ್ಚಿ, ತಿರುವನಂತಪುರಂ ವಿಮಾನ ನಿಲ್ದಾಣದ ವೆಬ್ ಸೈಟ್ ಗೆ ಕನ್ನ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ತಿರುವನಂತಪುರಂ, ಡಿಸೆಂಬರ್ 28: ಕೊಚ್ಚಿನ್ ಹಾಗೂ ತಿರುವನಂತಪುರಂನ ವಿಮಾನ ನಿಲ್ದಾಣಗಳ ವೆಬ್ ಸೈಟ್ ಗೆ ಕನ್ನ ಹಾಕಲಾಗಿದೆ. ಪಾಕಿಸ್ತಾನದ ಸೈಬರ್ ದಾಳಿಕೋರರ ಕೃತ್ಯ ಎಂದು ಸಂದೇಶ ರವಾನಿಸಲಾಗಿದೆ. ಈ ವೆಬ್ ಸೈಟ್ ಗೆ ಕನ್ನ ಹಾಕಿರುವುದು ಕಾಶ್ಮೀರಿ ಚೀತಾ ಎಂಬ ಒಕ್ಕಣೆಯೂ ಇದೆ.

ಪ್ರಾಥಮಿಕ ತನಿಖೆ ಪ್ರಕಾರ ಬುಧವಾರದ ನಸುಕಿನ ವೇಳೆ ಕನ್ನ ಹಾಕಲಾಗಿದೆ. ಮತ್ತೊಂದು ಸಂದೇಶದಲ್ಲಿ, 'ಹ್ಯಾಕ್ಡ್. ತಂಡ: ಪಾಕಿಸ್ತಾನ್ ಸೈಬರ್ ದಾಳಿಕೋರರು. ನಮ್ಮನ್ನು ಪತ್ತೆಹಚ್ಚುವುದು, ಸೋಲಿಸುವುದು ಅಸಾಧ್ಯ...' ಹೀಗೆ ಸಾಗುತ್ತದೆ. ಸೈಬರ್ ರಕ್ಷಣಾ ಅಧಿಕಾರಿಗಳು ಈ ವಿಚಾರವಾಗಿ ತನಿಖೆ ನಡೆಸುತ್ತಿದ್ದಾರೆ.[ಮಂಗಳೂರು: ಇ-ಮೇಲ್ ಗೆ ಹ್ಯಾಕರ್ಸ್ ಕನ್ನ, ಲಕ್ಷಗಟ್ಟಲೇ ಕದ್ದರು!]

Mess with best, die like the rest, hackers say on websites

ಈ ಕೃತ್ಯದ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಸ್ಪಷನೆ ಇಲ್ಲ ಎಂದು ಗುಪ್ತಚರ ಇಲಾಖೆ ದಳದ ಅಧಿಕಾರಿಗಳು ಒನ್ಇಂಡಿಯಾ ಕನ್ನಡಕ್ಕೆ ಕೇರಳದಿಂದ ಮಾಹಿತಿ ನೀಡಿದ್ದಾರೆ. http://www.cochinairport.com ಮತ್ತು trivandrumairport.com ವೆಬ್ ಸೈಟ್ ಗಳಿಗೆ ಕನ್ನ ಹಾಕಲಾಗಿದೆ. ವಿಮಾನ ಹಾರಾಟ ಸಮಯದ ಪ್ರಮುಖ ಮಾಹಿತಿ ಇರುವ ವೆಬ್ ಸೈಟ್ ಗಳನ್ನು ಸರಿಪಡಿಸುವ ಕೆಲಸ ಮುಂದುವರಿದಿದೆ.[ರಾಹುಲ್ ಗಾಂಧಿ ಟ್ವಿಟ್ಟರ್ ಖಾತೆಗೆ ಹ್ಯಾಕರ್ಸ್ ಕನ್ನ]

ಈ ಕೃತ್ಯದ ಹಿಂದೆ ಯಾರಿದ್ದಾರೆ ಎಂದು ತಿಳಿಯುವ ಸಲುವಾಗಿ ತನಿಖೆ ಕೂಡ ಚುರುಕಾಗಿ ನಡೆಯುತ್ತಿದೆ. ಸೈಬರ್ ರಕ್ಷಣಾ ಸಿಬ್ಬಂದಿ ಪ್ರಕಾರ ಕನ್ನ ಹಾಕಿದವರು ಸ್ಥಳೀಯರಲ್ಲ. ಕೇರಳದ ಹೊರಭಾಗದಿಂದ ಈ ಕೃತ್ಯ ಎಸಗಿದ್ದಾರೆ. ಸದ್ಯಕ್ಕೆ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಯುತ್ತಿದೆ. ಮೊದಲ ಆದ್ಯತೆ ವೆಬ್ ಸೈಟ್ ಕಾರ್ಯನಿರ್ವಹಿಸುವಂತೆ ಮಾಡುವುದಕ್ಕೆ ಎಂದಿದ್ದಾರೆ ಅಧಿಕಾರಿಗಳು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The websites of the Cochin and Thiruvananthapuram airports have been hacked. Mess with the Best read a message from a group called the Pakistan Cyber Attackers. The message on the websites read, " website hacked by Kashmiri Cheetah."
Please Wait while comments are loading...